India : ಚೀನಾದಲ್ಲಿ (China) ಸಿಂಗಲ್ ಸ್ಟೋರೇಜ್ ಆಯ್ಕೆಯಲ್ಲಿ ವಿವೋ Y36i ಅನ್ನು ಬಿಡುಗಡೆ ಮಾಡಲಾಗಿದ್ದು, (New budget friendly smartphone) ಇದರ ಏಕೈಕ ರೂಪಾಂತರವಾದ
4GB RAM + 128 GB ಸಂಗ್ರಹಣೆಯ ಬೆಲೆ 1,199 ಯುವಾನ್ ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 14,000 ರೂ. ಇರಬಹುದು. ಪ್ರಸಿದ್ಧ ಮೊಬೈಲ್ ತಯಾರಕ ಸಂಸ್ಥೆ ವಿವೋ ತನ್ನ
ವೈ-ಸರಣಿಯಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ (New budget friendly smartphone) ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ.
ಇದೀಗ ಇದೇ ಸಾಲಿನಲ್ಲಿ ಕೈಗೆಟುಕುವ ಬೆಲೆಯಲ್ಲಿ ವಿವೋ Y36i (Vivo Y36i) ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿದ್ದು, ಇದು ಬಜೆಟ್ ಶ್ರೇಣಿಯ ಬಳಕೆದಾರರಿಗೆ ಅತ್ಯುತ್ತಮ ಫೋನಾಗಿದೆ. ಈ ಫೋನ್
ವರ್ಚುವಲ್ RAM, ಡ್ಯುಯಲ್ ರಿಯರ್ ಕ್ಯಾಮೆರಾ, 5000mAh ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ. ಈ ಫೋನಿನ ಬೆಲೆ, ವಿಶೇಷತೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಡಿಸ್ ಪ್ಲೇ: Display
ಇದು 90Hz ರಿಫ್ರೆಶ್ ದರ, 720 x 1612 ರ ಪಿಕ್ಸೆಲ್ ರೆಸಲ್ಯೂಶನ್, 180Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 840 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಹೊಂದಿದ್ದು, ಬಜೆಟ್ ಬೆಲೆಯ ವಿವೋ Y36i ಫೋನ್ 6.5
ಇಂಚಿನ IPS LCD HD ಡಿಸ್ಪ್ಲೇ ಹೊಂದಿದೆ.
ಪ್ರೊಸೆಸರ್: Processer
ಈ ಮೊಬೈಲ್ನಲ್ಲಿ ಉತ್ತಮ ಕಾರ್ಯಕ್ಷಮತೆಗಾಗಿ ಮೀಡಿಯಾ ಟೆಕ್ ಡೈಮನ್ಸಿಟಿ 6020 ಚಿಪ್ಸೆಟ್ ನೀಡಲಾಗಿದೆ. ಇದರೊಂದಿಗೆ, ಉತ್ತಮ ಗ್ರಾಫಿಕ್ಸ್ಗಾಗಿ Mali G57 GPU ಅನ್ನು ಅಳವಡಿಸಲಾಗಿದೆ.
ಸಂಗ್ರಹಣೆ: Storage
ಇದು ಡೇಟಾವನ್ನು ಸಂಗ್ರಹಿಸಲು ಫೋನ್ 4GB RAM + 4GB ವರ್ಚುವಲ್ RAM ಅನ್ನು ಬೆಂಬಲಿಸುತ್ತದೆ. ಇದರ ಸಹಾಯದಿಂದ 8GB RAM ವರೆಗೆ ವಿಸ್ತರಿಸಬಹುದು. 128GB ಆಂತರಿಕ
ಸಂಗ್ರಹಣೆಯು ಲಭ್ಯವಿದೆ.
ಕ್ಯಾಮೆರಾ: Camera
13-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲೆನ್ಸ್ ಮತ್ತು ಆಂಟಿಸ್ಟ್ರೋಬೋಸ್ಕೋಪಿಕ್ ಲೆನ್ಸ್ ಅನ್ನು ಹೊಂದಿದ್ದು, ವಿವೋ Y36i ಡ್ಯುಯಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 5 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ.
ಬ್ಯಾಟರಿ: Battery
ಇನ್ನು ಬ್ಯಾಟರಿಯ ವಿಷಯದಲ್ಲಿ, ಈ ಸಾಧನವು 5000mAh ಬ್ಯಾಟರಿ ಮತ್ತು 15W ವೇಗದ ಚಾರ್ಜಿಂಗ್ ಅನ್ನು ಒದಗಿಸುತ್ತದೆ.
ಇತರೆ: Others
ಆಂಡ್ರಾಯ್ಡ್ 13 ಆಧಾರಿತ ಮೂಲ ಓಎಸ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಸೈಡ್ ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸಾರ್, 3.5mm ಹೆಡ್ಫೋನ್ ಜ್ಯಾಕ್, ಬ್ಲೂಟೂತ್ 5.1, ಡ್ಯುಯಲ್ ಸಿಮ್ 4G ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಇದನ್ನು ಓದಿ: ಭರ್ಜರಿ ಸರ್ಜರಿ ದಂಧೆ: ದೇಶದದಲ್ಲಿ ನಡೀತಿದೆ ಅರ್ಧದಷ್ಟು ಫೇಕ್ ಆಪರೇಷನ್, ಅಧ್ಯಯನದಲ್ಲಿ ಕರಾಳ ಸತ್ಯ ಬಯಲು
- ಭವ್ಯಶ್ರೀ ಆರ್ ಜೆ