ಭಾರತ (India) ದೇಶದದಲ್ಲಿ ನಡೀತಿದೆ ಅರ್ಧದಷ್ಟು ಫೇಕ್ ಆಪರೇಷನ್ (Fake Operation)! ಹಣಕ್ಕಾಗಿ ಶೇಕಡಾ 44 ರಷ್ಟು ನಕಲಿ (Surgery Scam in India) ಆಪರೇಷನ್ಗಳು, ಚಿಕಿತ್ಸೆಗಳು
ನಡೆಯುತ್ತಿವೆ. ಆಸ್ಪತ್ರೆಗಳು ಸೇವೆ ಮರೆತು ಹಣ ಮಾಡುತ್ತಿವೆ ಅನ್ನೋ ಕರಾಳ (Surgery Scam in India) ಅಧ್ಯಯನವೊಂದರಲ್ಲಿ ಬಯಲಾಗಿದೆ.

ವೈದ್ಯರನ್ನು (Doctors) ದೇವರ ಸ್ವರೂಪವೇ ಎಂದು ಭಾವಿಸುವ ನಮ್ಮ ಭಾರತದ ಈ ನೆಲದಲ್ಲಿ ಈಗ ವೈದ್ಯಕೀಯ ವ್ಯವಸ್ಥೆಯಲ್ಲಿ ಈ ಹೇಳಿಕೆಗೆ ವಿರುದ್ಧವಾಗಿದ್ದು, ನಮ್ಮ ದೇಶದ ದೊಡ್ಡ ದೊಡ್ಡ
ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಶಸ್ತ್ರಚಿಕಿತ್ಸೆಯಲ್ಲಿ ಶೇಕಡಾ 44ರಷ್ಟು ನಕಲಿಯೇ ಆಗಿದ್ದು, ಸರ್ಜರಿಗಳ ಹೆಸರಿನಲ್ಲಿ ಬೃಹತ್ ದಂಧೆಯೇ ನಡೆಯುತ್ತಿದೆ.
ಜೂನ್ 24, 2010ರಲ್ಲಿ ನಡೆದ ಪ್ರಕರಣ:
ಬ್ರೈನ್ ಡೆತ್ (Brain Death) ಆಗಿದ್ದ 14 ವರ್ಷದ ಬಾಲಕನನ್ನು ಒಂದು ತಿಂಗಳು ವೆಂಟಿಲೇಟರ್ನಲ್ಲಿಟ್ಟು ಸತ್ತದೇಹಕ್ಕೆ ಚಿಕಿತ್ಸೆ ಕೊಡುತ್ತಿರುವ ನಾಟಕ ಮಾಡಿದ ವೈದ್ಯರು ಪೋಷಕರಿಂದ 5ಲಕ್ಷ ಹಣವನ್ನ
ದೋಚಿದ್ದರು. ಈ ಪ್ರಕರಣ ಜನಪ್ರಿಯ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಈ ರೀತಿಯ ಪ್ರಕರಣಗಳು ಆಗಾಗ ಕೇಳಿ ಬರುತ್ತಲೇ ಇದೆ. ಇನ್ನು ಕೊರೋನಾ (Corona) ಸಮಯದಲ್ಲಿ ಈ ಕೃತ್ಯಗಳು
ಆಸ್ಪತ್ರೆಗಳಿಗೆ ಚಟವಾಗಿಬಿಟ್ಟಿತ್ತು ಆದರೆ ಈಗ ಅಧ್ಯಯನವೊಂದರಲ್ಲಿ ಸರ್ಜರಿ ಹೆಸರಲ್ಲಿ ನಡೆಯುತ್ತಿರುವ ಭಯಾನಕ ದಂಧೆಯ ರಹಸ್ಯ ಬಯಲಾಗಿದೆ.
ಝೀ ನ್ಯೂಸ್ನಲ್ಲಿ (Zee News) ವರದಿಯಾದ ಮಾಹಿತಿಯ ಪ್ರಕಾರ, 44% ಸರ್ಜರಿಗಳು ನಕಲಿ ಎಂದು ಧೃಡಪಟ್ಟಿದ್ದು, ಅಂದರೆ ಅರ್ಧದಷ್ಟು ಸರ್ಜರಿಗಳು ಸಂಪೂರ್ಣವಾಗಿ ಹಣಕ್ಕಾಗಿ ಮಾಡಿರುವಂಥ
ಅನಗತ್ಯ ಸರ್ಜರಿಗಳಾಗಿದೆ. ಅದು ಯಾವ ಯಾವ ಸರ್ಜರಿಗಳು ಎಷ್ಟು ಎಷ್ಟು ಪ್ರಮಾಣದಲ್ಲಿ ನಕಲಿ (Fake) ಆಗಿದೆ ಎಂಬ ಅಂಕಿ ಅಂಶಗಳು ಈ ರೀತಿಯಾಗಿದೆ.
ಭಾರತದಲ್ಲಿ ಎಷ್ಟು ನಕಲಿ ಸರ್ಜರಿಗಳು?
55% ಹಾರ್ಟ್ ಸರ್ಜರಿ (Heart Surgery)
48% ಗರ್ಭಕೋಶದ ಸರ್ಜರಿ
47% ಕ್ಯಾನ್ಸರ್ ಸರ್ಜರಿ (Cancer Surgery)
48% ಮೊಣಕಾಲು ಬದಲಾವಣೆ ಸರ್ಜರಿ
45% C – ಸೆಕ್ಷನ್ ಸರ್ಜರಿಗಳು

ಈ ಸತ್ಯ ಬಹಿರಂಗ ಪಡಿಸಲು ಅಧ್ಯಯನಕಾರರು ಮಹಾರಾಷ್ಟ್ರದ (Maharashtra) ದೊಡ್ಡ ದೊಡ್ಡ ಆಸ್ಪತ್ರೆಗಳ 43 ಸ್ಪೆಷಲಿಸ್ಟ್ ವೈದ್ಯರು, ಸೀನಿಯರ್ ಗವರ್ನಮೆಂಟ್ (Senior Government)
X– ಅಧಿಕಾರಿಗಳು ಮತ್ತು ಕಾರ್ಪೊರೇಟ್ ಆಸ್ಪತ್ರೆಗಳ ಮ್ಯಾನೇಜರ್ ಗಳು ಸಂದರ್ಶನ ಮಾಡಿದಾಗ ಈ ಭಯಾನಕ ಸತ್ಯ ಹೊರ ಬಿದ್ದಿದ್ದು, ಈ ಆಸ್ಪತ್ರೆಗಳಲ್ಲಿ ಕಂಪನಿಗಳ ರೀತಿ ನಿರ್ಧಿಷ್ಟಾವಧಿ ಮೂಲ
ರಚನೆಯಲ್ಲಿ ಕೆಲಸ ಮಾಡುವುದು ಬಯಲಾಗಿದೆ.
ಇನ್ನು ರೋಗಿಗಳನ್ನು ಮೂರ್ಖರನ್ನಾಗಿಸಿ ಅವರಿಂದ ಹಣ ಲೂಟಿ ಮಾಡುವ ಸಾಮರ್ಥ್ಯದ ಮೇಲೆ ವೈದ್ಯರ ಸಂಬಳ (Salary) ನಿರ್ಧಾರವಾಗುತ್ತದೆ. ಆದರೆ ಯಾವ ವೈದ್ಯ ಸಾಮಾನ್ಯ ರೋಗಿಗಳನ್ನೂ
ಸಹ ದುಬಾರಿ ಚಿಕಿತ್ಸೆಗೆ ಕೊಂಡೊಯ್ಯುವಂಥ ಸಾಮರ್ಥ್ಯವನ್ನು ಹೊಂದಿರುತ್ತಾನೋ ಅವನಿಗೆ ಹೆಚ್ಚು ಸಂಬಳ ನೀಡಲಾಗುತ್ತದೆ. ನಿಯತ್ತಾಗಿ ಕರ್ತವ್ಯಕ್ಕನುಸಾರಗುಣವಾಗಿ ಸೇವೆ ಮಾಡುವವನಿಗೆ
ಕಡಿಮೆ ಸಂಬಳ ಕೊಡಲಾಗುತ್ತದೆ.
ಭಯಾನಕ ವಿಷಯವೆಂದರೆ ಒಬ್ಬ ವೈದ್ಯ ಒಂದು ತಿಂಗಳಿಗೆ ಒಂದು ಸಾವಿರ ರೋಗಿಗಳನ್ನ ದುಬಾರಿ ಚಿಕಿತ್ಸೆ ಅಥವಾ ಸರ್ಜರಿಗೆ ಒಳಪಡಿಸುವಂತ ಟಾರ್ಗೆಟ್ ತಲುಪ ಬೇಕಾಗುತ್ತದೆ. ಆದರೆ ಆ ರೀತಿ
ಟಾರ್ಗೆಟ್ ರೀಚ್ (Target Reach) ಆಗದವನಿಗೆ ಸಂಬಳವೂ ಕಡಿಮೆ ಜೊತೆಗೆ ಬೆಲೆಯೂ ಕಡಿಮೆ ಎಂಬಂತೆ ಮಾಡಿ ಬಿಡುತ್ತಾರೆ. ಅದಷ್ಟೇ ಅಲ್ಲದೆ ಕಾನೂನುಬಾಹಿರ ಚಿಕಿತ್ಸೆಗಳನ್ನು ಮಾಡುವಂತೆ
ಒತ್ತಾಯವನ್ನೂ ಸಹ ಹಲವಾರು ಆಸ್ಪತ್ರೆಗಳಲ್ಲಿ ಮಾಡುತ್ತಾರೆಂಬುದು ಖಚಿತವಾಗಿದೆ.
ಇವರ ಈ ಟಾರ್ಗೆಟ್ ವ್ಯವಸ್ಥೆಗೆ ಹೊಂದಿಕೊಳ್ಳದವರನ್ನು ಮುಲಾಜಿಲ್ಲದೆ ಕೆಲಸದಿಂದ ತೆಗಯಲಾಗುತ್ತದೆ. ಮೆಡಿಕಲ್ ಫೀಲ್ಡ್ (Medical Field)ನಲ್ಲಿ ನಡೆಯುತ್ತಿರುವ ಈ ಕಾನೂನು ಬಾಹಿರ ಪ್ರಕರಣಗಳ
ಕುರಿತು ಪದ್ಮಭೂಷಣ ಮತ್ತು ಪದ್ಮವಿಭೂಷಣ ಡಾಕ್ಟರ್ ಬಿ. ಎಂ ಹೆಗ್ಗಡೆಯವರು (B M Hegde) ತಮ್ಮ ಒಂದು ಆರ್ಟಿಕಲ್ ನಲ್ಲಿ ಡಾ. ಅರುಣ್ ಗಾಡ್ರೆ ಮತ್ತು ಡಾ. ಅಭಯ್ ಶುಕ್ಲ ಅವರ
“Dissenting Diagnosis” ಪುಸ್ತಕದಲ್ಲೂ ಸಹ ಇದನ್ನು ದಾಖಲಿಸಿದ್ದಾರೆ.
ಇನ್ನಾದರೂ ಖಾಸಗಿ ಆಸ್ಪತ್ರೆಗಳಲ್ಲಿ (Private Hospital) ನಡೆಯುವ ಈ ಅಕ್ರಮ ಸರ್ಜರಿ ದಂಧೆಗಳ ಬಗ್ಗೆ ಸರ್ಕಾರ ತನಿಖೆ ನಡೆಸಬೇಕಾಗಿದ್ದು, ತಪ್ಪಿತಸ್ಥ ಆಸ್ಪತ್ರೆಗಳ ವಿರುದ್ಧ ಕ್ರಮಕೈಗೊಳ್ಳಬೇಕು.
ಆ ಮೂಲಕ ಜನರನ್ನು ವೈದ್ಯಕೀಯ ಮಾಫಿಯಾದಿಂದ (Medical Mafia) ರಕ್ಷಿಸಬೇಕು.
ಇದನ್ನು ಓದಿ: ಭ್ರೂಣ ಹತ್ಯೆ ಪ್ರಕರಣ: ಎಸ್ಐಟಿ ತನಿಖೆಗೆ ಒಪ್ಪಿಸಿ, ಆರೋಪಿಗಳನ್ನು ಗಲ್ಲಿಗೇರಿಸಿ: ಆರ್ ಅಶೋಕ್
- ಭವ್ಯಶ್ರೀ ಆರ್ ಜೆ