ಸ್ಫೋಟಕ ವಸ್ತುಗಳ ಬಳಕೆ ಕುರಿತು ಹೊಸ ಮಾರ್ಗಸೂಚಿ ಬಿಡುಗಡೆ’ – ಬೊಮ್ಮಾಯಿ

ಬೆಂಗಳೂರು, ಜ. 24: ಗಣಿಗಾರಿಕೆಯಲ್ಲಿ ಸ್ಫೋಟಕ ವಸ್ತುಗಳ ಬಳಕೆ ಕುರಿತಾಗಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಫೋಟಕ ವಸ್ತುಗಳಿಗೆ ಅನುಮತಿ ನೀಡುವ ಕುರಿತು ಗೃಹ ಇಲಾಖೆಯಲ್ಲಿ ಚರ್ಚೆಗಳು ನಡೆದಿದ್ದು, ಪರವಾನಗಿ ಪಡೆದವರು ಸ್ಫೋಟಕಗಳ ಬಳಕೆ ಪ್ರಮಾಣ‌, ಅದರ ಗುಣಮಟ್ಟ ಸೇರಿದಂತೆ ಪ್ರಮುಖ ಅಂಶಗಳ ಪರಾಮರ್ಶೆ ನಡೆದಿದ್ದು, ಇವುಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ಡಿ.25 ಸೋಮವಾರದಂದು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ಶಿವಮೊಗ್ಗದ ಹುಣಸೋಡಿ ಸ್ಫೋಟ ಪ್ರಕರಣದಲ್ಲಿ ಸುಧಾಕರ್ ಎಂಬಾತನನ್ನು ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಪ್ರಾಥಮಿಕ ವರದಿ ರವಿವಾರ ಬರುವ ಸಾಧ್ಯತೆ ಇದೆ ಎಂದರು.

Exit mobile version