ಆಧಾರ್ ಬಗ್ಗೆ ಹೊಸ ಮಾಹಿತಿ ಪ್ರಕಟ ; ಸರ್ಕಾರ ನೀಡಿರುವ ಈ ಸೂಚನೆಯನ್ನು ತಪ್ಪದೇ ತಿಳಿಯಿರಿ……

New Delhi : ಭಾರತದಲ್ಲಿ ಇಂದು ಆಧಾರ್‌ ಕಾರ್ಡ್‌(Aaadhaar Card) ಎಲ್ಲಾ ವರ್ಗಗಳಲ್ಲೂ ಎಷ್ಟು ಪ್ರಮುಖ ಪಾತ್ರ ವಹಿಸುತ್ತಿದೆ ಎಂಬುದು ಪ್ರತಿಯೊಬ್ಬ ನಾಗರಿಕನಿಗೂ ತಿಳಿದಿರುವ ಸಂಗತಿಯೇ! ಪ್ರತಿಯೊಬ್ಬ ಭಾರತೀಯ (New information about Aaadhaar) ಜನಸಾಮಾನ್ಯನಿಗೆ ಆಧಾರ್ ಕಾರ್ಡ್ ಬಹು ಮುಖ್ಯವಾದ ದಾಖಲೆ.

ಪ್ರತಿಬಾರಿ ಕೂಡ ಆಧಾರ್‌ ಕಾರ್ಡ್‌ನಲ್ಲಿ ಹೊಸ ಹೊಸ ಅಪ್ಡೇಟ್‌ ಕೇಳಿಬರುವಂತೆಯೇ ಇದೀಗ ಮತ್ತೊಂದು ಅಪ್ಡೇಟ್‌(Update) ಹೊರಬಂದಿದೆ.


ಆಧಾರ್‌ ಕಾರ್ಡ್ ಇಲ್ಲದೆ ನಾವು ಯಾವುದೇ ಸರ್ಕಾರಿ ಕಛೇರಿಗಳಲ್ಲಿ ನಮ್ಮ ಕೆಲಸಗಳನ್ನು ಈಡೇರಿಸಿಕೊಳ್ಳುವುದು ಬಲು ಕಷ್ಟವಾಗಿದೆ.

ಬ್ಯಾಂಕ್‌, ತಾಲೂಕು ಕಛೇರಿ, ನಾಡ ಕಛೇರಿ ಸೇರಿದಂತೆ ಅನೇಕ ಕಛೇರಿಗಳಲ್ಲಿ ನಮ್ಮ ದಾಖಲೆಗಳಲ್ಲಿ ಮೊದಲಿಗೆ ಮತ್ತು ಅಗತ್ಯ ದಾಖಲೆಯಾಗಿ ಕೇಳುವುದೇ ಈ ಆಧಾರ್‌ ಕಾರ್ಡ್.

ಸದ್ಯ ಆಧಾರ್‌ ಕಾರ್ಡ್ ಬಗ್ಗೆ ಇಲ್ಲಿದೆ ಹೊಸ ಮಾಹಿತಿ ಓದಿ.

ಆಧಾರ್ ಇ-ಕೆವೈಸಿಯಲ್ಲಿ(E-KYC) ಈಗ ಶರವೇಗ : ಮುಂಚಿನಂತೆಯೇ ಈಗ ಬ್ಯಾಂಕ್‌ಗಳಲ್ಲಿ ಕೆವೈಸಿ ಅತ್ಯಗತ್ಯವಾಗಿದ್ದು, ಇದೀಗ ಇ-ಕೆವೈಸಿ ಮುಂಚೂಣಿಯಲ್ಲಿದೆ.

2022-23ರ ಆರ್ಥಿಕ ವರ್ಷದಲ್ಲಿ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ 84.8 ಕೋಟಿ ರೂ.ಗೂ ಹೆಚ್ಚು ಇ-ಕೆವೈಸಿ ವಹಿವಾಟುಗಳನ್ನು ಆಧಾರ್ ಬಳಸಿಕೊಂಡು ಮಾಡಿದ್ದಾರೆ ಎನ್ನಲಾಗಿದೆ.

ಇದು ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಜುಲೈ ಮತ್ತು ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಶೇ.18.53 ರಷ್ಟು ಹೆಚ್ಚು.

ಡಿಸೆಂಬರ್‌ ತಿಂಗಳಲ್ಲಿಯೇ 32.49 ಕೋಟಿ ಇ-ಕೆವೈಸಿ ವಹಿವಾಟುಗಳನ್ನು ಆಧಾರ್ ಮೂಲಕ ಪೂರೈಸಲಾಗಿದೆ.

ಇದನ್ನೂ ಓದಿ: ಬಿಜೆಪಿಯವರು ನನ್ನ ಹೆಸರನ್ನೇ ತಿರುಚಿ ಗೇಲಿ ಮಾಡಿದ್ದಾರೆ, ಇದು ಕನ್ನಡಿಗರಿಗೆ ಮಾಡುವ ಅವಮಾನವಲ್ಲವೇ : ಸಿದ್ದರಾಮಯ್ಯ

ಇದು ಕಳೆದ ತಿಂಗಳಿಗಿಂತ ಶೇ. 13% ರಷ್ಟು ಹೆಚ್ಚಾಗಿದೆ. ಆಧಾರ್ ಇ-ಕೆವೈಸಿ ಸೇವೆಯು ಬ್ಯಾಂಕಿಂಗ್ (Banking)ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಸೇವೆಗಳಿಗೆ

ಪಾರದರ್ಶಕ ಮತ್ತು ಉತ್ತಮ ಗ್ರಾಹಕರ ಅನುಭವವನ್ನು ಒದಗಿಸುವ ಮೂಲಕ ಮತ್ತು ಸುಲಭವಾಗಿ ವ್ಯಾಪಾರ ಮಾಡಲು ಸಹಾಯ ಮಾಡುವ ಮೂಲಕ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.

ಕೇಂದ್ರ ಸರ್ಕಾರ ಪ್ರಕಟಿಸಿರುವ ಅಂಕಿ ಅಂಶಗಳ ಮಾಹಿತಿಯ ಪ್ರಕಾರ, ಅಕ್ಟೋಬರ್‌ ತಿಂಗಳಲ್ಲಿ ಆಧಾರ್ ಇ-ಕೆವೈಸಿ ವಹಿವಾಟುಗಳ ಸಂಖ್ಯೆ 23.56 ಕೋಟಿಯಷ್ಟಿದ್ದು,

ಅಂತಹ ವಹಿವಾಟುಗಳು ನವೆಂಬರ್‌ ತಿಂಗಳಲ್ಲಿ 28.75 ಕೋಟಿಗೆ ಏರಿಕೆಯಾಗಿದೆ.

ಡಿಸೆಂಬರ್‌ನಲ್ಲಿ ಮತ್ತಷ್ಟು ಏರಿಕೆಯಾಗುವ ಮುನ್ನ, ಆರ್ಥಿಕತೆಯಲ್ಲಿ ಅದರ ಹೆಚ್ಚುತ್ತಿರುವ ಬಳಕೆ ಮತ್ತು ಉಪಯುಕ್ತತೆಯನ್ನು ಈ ಮೂಲಕ ಅರ್ಥ ಮಾಡಿಕೊಳ್ಳಬಹುದು.

ಡಿಸೆಂಬರ್ 2022ರ ಮುಕ್ತಾಯದೊಳಗೆ, ಒಟ್ಟು ಆಧಾರ್ ಇ-ಕೆವೈಸಿ ವಹಿವಾಟುಗಳ ಸಂಖ್ಯೆ 1,382.73 ಕೋಟಿಗೆ ಏರಿಕೆಯಾಗಿದೆ.

ಇ-ಕೆವೈಸಿ ವಹಿವಾಟುಗಳನ್ನು ಆಧಾರ್ ಹೊಂದಿರುವವರ ಬಳಿ ನಿಖರ ಒಪ್ಪಿಗೆಯ ನಂತರವೇ ಮಾಡಲಾಗುತ್ತದೆ ಮತ್ತು ನಂತರ

ಕೆವೈಸಿಗಾಗಿ ಭೌತಿಕ ದಾಖಲೆಗಳು ಮತ್ತು ವೈಯಕ್ತಿಕ ಪರಿಶೀಲನೆಯ ಅಗತ್ಯವಿಲ್ಲ ಎಂಬುದನ್ನು ಉಲ್ಲೇಖಿಸಿ ತಿಳಿಸಿದೆ.

ಇದನ್ನೂ ಓದಿ: ಹಸುವಿನ ಸಗಣಿ ತಿಂದರೆ ನಾರ್ಮಲ್‌ ಡೆಲಿವರಿ ಆಗುತ್ತೆ : ಆರ್‌ಎಸ್‌ಎಸ್‌ ಮುಖಂಡ ಪ್ರಮುಖ್‌ ಶಂಕರ್‌ಲಾಲ್‌

ವ್ಯಾಪಕವಾಗಿ ಡಿಜಿಟಲ್ ಐಡಿ ಬಳಕೆ : ಡಿಸೆಂಬರ್ 2022ರ ಅಂತ್ಯದೊಳಗೆ ಸುಮಾರು 8,829.66 ಕೋಟಿ ಆಧಾರ್ ದೃಢೀಕರಣ ವಹಿವಾಟುಗಳನ್ನು ಮಾಡಲಾಗಿದೆ.

ಕಲ್ಯಾಣ ವಿತರಣೆ, ಆರ್ಥಿಕ ಸೇರ್ಪಡೆ ಮತ್ತು ಇತರ ಸೇವೆಗಳನ್ನು ಪಡೆಯುವಲ್ಲಿ ಆಧಾರ್ ಬೆಳವಣಿಗೆ ಮುಖ್ಯ ಪಾತ್ರವನ್ನು ವಹಿಸುತ್ತಿದೆ ಎಂಬುದನ್ನು ಈ ಮೂಲಕ ತಿಳಿಯಬಹುದಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುತ್ತಿರುವ ದೇಶದ 1,100 ಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಆಧಾರ್ ಬಳಸಲು ಅಧಿಕೃತ ಸೂಚನೆಯನ್ನು ನೀಡಲಾಗಿದೆ.

Exit mobile version