ಸಿಲಿಕಾನ್ ಸಿಟಿಯ ಅತೀದೊಡ್ಡ ಮೆಟ್ರೋ ಸ್ಟೇಷನ್‌ ಜಯದೇವ ವರ್ಷಾಂತ್ಯಕ್ಕೆ ಆರಂಭ, ಹಳದಿ ಮಾರ್ಗವೂ ಪ್ರಾರಂಭ:

Bengaluru: ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ ವಿಸ್ತರಣೆಗೊಳ್ಳುತ್ತಿದ್ದು ಬೆಂಗಳೂರಿನ ಅತಿ ದೊಡ್ಡ ಮೆಟ್ರೋ ನಿಲ್ದಾಣ ಜಯದೇವ ಜಂಕ್ಷನ್‌ (new metro station open) ಈ ವರ್ಷಾಂತ್ಯಕ್ಕೆ ಭಾಗಶಃ

ಕಾರ್ಯಾರಂಭ ಮಾಡಲಿದೆ. ಆರ್‌.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ (Bommasandra) ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಪ್ರಾರಂಭವಾಗುವ ನಿರೀಕ್ಷೆ ಇದ್ದು, ಈ ಮೆಟ್ರೋ ನಿಲ್ದಾಣದ

ಆರಂಭದೊಂದಿಗೆ ಮೆಟ್ರೋ ಪ್ರಯಾಣಿಕರ ಸಂಖ್ಯೆ 2 ಲಕ್ಷಕ್ಕೆ ಹೆಚ್ಚುವ ಸಾಧ್ಯತೆ (new metro station open) ಇದೆ.

ಬೆಂಗಳೂರಿನ (Bengaluru) ಜಯದೇವ ಮೆಟ್ರೋ ನಿಲ್ದಾಣವು ಅತೀ ದೊಡ್ಡ ಮೆಟ್ರೋ (Metro) ನಿಲ್ದಾಣ ಎಂಬ ಹೆಗ್ಗಳಿಕೆ ಪಡೆದಿದ್ದು, ಈ ವರ್ಷದ ಅಂತ್ಯದಲ್ಲಿ ಆರಂಭವಾಗುವ ಸಾಧ್ಯತೆ ಇದೆ.

ಡಿಸೆಂಬರ್‌ 2023 ರಿಂದ ಬನ್ನೇರುಘಟ್ಟ (Bannerghatta) ರಸ್ತೆಯಲ್ಲಿರುವ ದೊಡ್ಡ ಹಂತದ ಮೆಟ್ರೋ ಇಂಟರ್‌ಚೆಂಜ್‌ ನಿಲ್ದಾಣ ಇದಾಗಿದ್ದು, ಹಳದಿ ಮತ್ತು ಗುಲಾಬಿ ಮೆಟ್ರೋ ರೈಲು ಮಾರ್ಗದ

ಭಾಗವಾಗಿ ಕಾರ್ಯಾರಂಭ ಮಾಡುವ (new metro station open) ನಿರೀಕ್ಷೆ ಇದೆ.

ಇನ್ನು ಜಯದೇವ ಮೆಟ್ರೋ ನಿಲ್ದಾಣವು ಆರ್‌.ವಿ (R.V) ರಸ್ತೆಯಿಂದ ಬೊಮ್ಮಸಂದ್ರ (ಹಳದಿ ಮಾರ್ಗ) ಹಾಗೂ ಕಾಳೇನ ಅಗ್ರಹಾರದಿಂದ (Kalena Agrahara) ನಾಗವಾರದ (Nagavara)

(ಗುಲಾಬಿ ಮಾರ್ಗ) ಭಾಗವಾಗಿರುವ ಜನದಟ್ಟಣೆಯ ಸಂಧರ್ಭದಲ್ಲಿ ಸುಮಾರು 25 ಸಾವಿರ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಇದು ಹೊಂದಿದ್ದು, ಈ ಮೆಟ್ರೋ ನಿಲ್ದಾಣದ ನಿರ್ಮಾಣ

ಕಾರ್ಯ ಶೇ.90ರಷ್ಟು ಮುಗಿದಿದ್ದು, 19,826 ಚದರ ಕಿಮೀ ವಿಸ್ತೀರ್ಣವನ್ನು ನಿಲ್ದಾಣ ಹೊಂದಿದೆ. ಎಂದು ಬಿ ಎಂ ಆರ್‌ ಸಿ ಎಲ್‌(B.M.R.C.L) ಅಧಿಕಾರಿಗಳು ಹೇಳಿದ್ದಾರೆ.

2023ರ ವೇಳೆಗೆ ಕೆಲವು ಡೆಡ್ ಲೈನ್ಸ್ (Deadlines) ಗಳನ್ನು ನೀಡಿದ ಬಳಿಕ ಹಳದಿ ಮಾರ್ಗವನ್ನು ಕಾರ್ಯಾರಂಭ ಮಾಡುವ ಗುರಿಯನ್ನು ಬಿಎಂಆರ್‌ಸಿಎಲ್‌ ಹೊಂದಿದೆ. ಗುಲಾಬಿ ಮಾರ್ಗವು

2025ರ ಮಾರ್ಚ್‌ನಲ್ಲಿ ಆರಂಭವಾಗುವ ನಿರೀಕ್ಷೆ ಇದ್ದು, 19 ಕಿಮೀ ಮಾರ್ಗದಲ್ಲಿ ಜಯದೇವ ನಿಲ್ದಾಣ ಸೇರಿ 16 ಮೆಟ್ರೋ ಸ್ಟೇಷನ್‌ಗಳಿವೆ ಎಂದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಬಿಎಂಆರ್‌ಸಿಎಲ್‌

ಎಂ.ಡಿ ಅಂಜುಂ ಪರ್ವೇಜ್‌ (M.D.Anjum Parvez), ಜಯದೇವ ಮೆಟ್ರೋ ನಿಲ್ದಾಣ, ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತದ ಎರಡು ಮಾರ್ಗಗಳ ಭಾಗವಾಗಿದ್ದು,

ಅದರಲ್ಲಿ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಮೆಟ್ರೋ ಮಾರ್ಗವನ್ನು ಈ ವರ್ಷಾಂತ್ಯದ ವೇಳೆಗೆ ಪ್ರಾರಂಭಿಸಲಾಗುವುದು.

ವಾಣಿಜ್ಯ ರೈಲು ಸಂಚಾರ ಕಾಳೇನಅಗ್ರಹಾರದಿಂದ ನಾಗವಾರದವರೆಗಿನ ಗುಲಾಬಿ ಮಾರ್ಗದಲ್ಲಿ ಆರಂಭವಾದ ಬಳಿಕ ಜಯದೇವ ಇಂಟರ್‌ಚೆಂಜ್‌ (Interchange) ಮೆಟ್ರೋ ನಿಲ್ದಾಣ ಸಂಪೂರ್ಣವಾಗಿ

ಕಾರ್ಯಾಚರಣೆ ಸ್ಟಾರ್ಟ್ ಮಾಡಲಿದೆ ಎಂದು ಅಂಜುಂ ಪರ್ವೇಜ್‌ ಹೇಳಿದ್ದಾರೆ. ಈ ನಿಲ್ದಾಣ ಪೂರ್ತಿ ಕಾರ್ಯಾರಂಭ ಆದ ಬಳಿಕ ಮೆಜೆಸ್ಟಿಕ್‌ನ ಕೆಂಪೇಗೌಡ (Kempegowda)ನಿಲ್ದಾಣದ ನಂತರ ಅತಿ

ಹೆಚ್ಚು ಜನರು ಪ್ರಯಾಣಿಸುವ ನಿಲ್ದಾಣವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಲ್ಲದೆ ಮೆಜೆಸ್ಟಿಕ್‌ (Majestic) ಮೆಟ್ರೋ ನಿಲ್ದಾಣದಲ್ಲಿ ಸದ್ಯಕ್ಕೆ ಪ್ರತಿ ದಿನ 1 ಲಕ್ಷ ಜನ ಓಡಾಡುತ್ತಿದ್ದು, ಒಂದೊಂದು ದಿನ 1.2 ಲಕ್ಷಕ್ಕೂ ಹೆಚ್ಚಾಗುತ್ತದೆ. ಹಳದಿ ಮತ್ತು ಗುಲಾಬಿ ಮಾರ್ಗ ಶುರುವಾದ

ಬಳಿಕ ಜಯದೇವ ನಿಲ್ದಾಣದಲ್ಲಿ ಪ್ರತಿದಿನ 80,000 ದಿಂದ 90,000 ಜನರು ಪ್ರಯಾಣಿಸುವ ನಿರೀಕ್ಷೆ ಇದೆ ಎಂದು ಅಂಜುಂ ಪರ್ವೇಜ್‌ , ಹೇಳಿದ್ದಾರೆ. ಇನ್ನು, ಬೆಂಗಳೂರಿನ ಪ್ರಮುಖ ಐಟಿ ಕಾರಿಡಾರ್‌

(I.T.Corridor) ಆಗಿರುವ ಹಳದಿ ಮಾರ್ಗವು ಎಲೆಕ್ಟ್ರಾನಿಕ್ಸ್‌ ಸಿಟಿಗೆ (Electronics City) ಸಂಪರ್ಕ ಕಲ್ಪಿಸುತ್ತದೆ. ಇದರೊಂದಿಗೆ ಬೆಂಗಳೂರಿಗೆ ಮೂರು ಇಂಟರ್‌ಚೆಂಜ್‌ ಮೆಟ್ರೋ ಸ್ಟೇಷನ್‌ಗಳು

ಬರಲಿವೆ. ಮೂರನೇ ಇಂಟರ್‌ಚೆಂಜ್‌ ನಿಲ್ದಾಣವಾಗಿ ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ ಆಗಲಿದ್ದು, ಹಳದಿ ಮಾರ್ಗ ಮತ್ತು ಹಸಿರು ಮಾರ್ಗ ಇಲ್ಲಿ ಹೊಂದಲಿವೆ. ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ

2 ಲಕ್ಷ ಹಳದಿ ಮಾರ್ಗ ಕಾರ್ಯಾರಂಭದೊಂದಿಗೆ ತಲುಪುವ ನಿರೀಕ್ಷೆಯನ್ನು ಬಿಎಂಆರ್‌ಸಿಎಲ್‌ ಹೊಂದಿದೆ.

ಭವ್ಯಶ್ರೀ ಆರ್.ಜೆ

Exit mobile version