ಗಾಂಧಿ ಜಯಂತಿಗೆ ಕೆ.ಆರ್‌ ಪುರ ಹಾಗೂ ಬೈಯಪ್ಪನಹಳ್ಳಿ ನಡುವೆ ನೇರಳೆ ಮಾರ್ಗದ ಮೆಟ್ರೋ ರೈಲು ಸಂಚಾರ

Bengaluru: ಇದೇ ಅಕ್ಟೋಬರ್‌ 2 ರಂದು ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದ್ದು, ಬಹುನಿರೀಕ್ಷಿತ ಬೈಯ್ಯಪ್ಪನಹಳ್ಳಿ (new metro train launching) ಹಾಗೂ ಕೆ.ಆರ್‌ ಪುರ

(K.R.Puram) ಮೆಟ್ರೋ ರೈಲು ಮಾರ್ಗದಲ್ಲಿ ಸುರಕ್ಷತಾ ಪರಿಶೀಲನೆ ಕಳೆದ ವಾರ ಮುಕ್ತಾಯವಾಗಿದ್ದು, ನೇರಳೆ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಶೀಘ್ರದಲ್ಲಿಯೇ ಗುಡ್‌ನ್ಯೂಸ್‌ ಸಿಗಲಿದೆ.

ಹೊಸ ಮಾರ್ಗ ಗಾಂಧಿ ಜಯಂತಿಯಂದು (new metro train launching) ಉದ್ಘಾಟನೆಯಾಗಲಿದೆ.

ನೇರಳೆ ಮಾರ್ಗದಲ್ಲಿ ಬಾಕಿ ಉಳಿದಿರುವ ಕೆಆರ್‌ ಪುರ – ಬೈಯಪ್ಪನಹಳ್ಳಿ ನಡುವಿನ 2 ಕಿ.ಮೀ. ಮಾರ್ಗದ ಸುರಕ್ಷತಾ ಪರಿಶೀಲನೆ ಪೂರ್ಣಗೊಂಡಿದ್ದು, ಅಕ್ಟೋಬರ್‌ (October) 2 ರಂದು ಬೆಂಗಳೂರು

ನಮ್ಮ ಮೆಟ್ರೋ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ರೈಲು ವಾಣಿಜ್ಯ ಸಂಚಾರ ಆರಂಭಿಸುವ ನಿರೀಕ್ಷೆ ಇದೆ.

ಕೆಂಗೇರಿ -ಚಲ್ಲಘಟ್ಟ (Kengeri – Challaghat) ನಡುವಿನ ಸುರಕ್ಷತಾ ಪರಿಶೀಲನೆ ಬಾಕಿ ಉಳಿದಿದ್ದು, ಅದರ ಪರಿಶೀಲನೆ ಕೂಡ ಶುಕ್ರವಾರ ನಡೆದಿದೆ. ಈ ಎರಡೂ ಮಾರ್ಗಗಳನ್ನು ಒಟ್ಟಿಗೆ ಅಥವಾ

ಕೆ ಆರ್‌ ಪುರಂ – ಬೈಯ್ಯಪ್ಪನಹಳ್ಳಿ ಮೆಟ್ರೋ ಮೊದಲು ಆರಂಭಿಸಲಾಗುವುದು. ಸುರಕ್ಷತಾ ಆಯುಕ್ತರಿಂದ ಪ್ರಮಾಣಪತ್ರ ಬಂದ ನಂತರ ರೈಲು ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ ಎಂದು

ಬಿಎಂಆರ್‌ಸಿಎಲ್‌ (BMRCL) ಮೂಲಗಳು ತಿಳಿಸಿವೆ.

ಬೈಯ್ಯಪ್ಪನಹಳ್ಳಿ- ಕೆಆರ್‌ ಪುರಂ ನೇರಳೆ ಮಾರ್ಗದ ಮಧ್ಯೆ 2 ಕಿ.ಮೀ ಮಾರ್ಗ ಮಾತ್ರ ಮೆಟ್ರೋ ರೈಲು ಸಂಚಾರ ಇಲ್ಲ. ಇನ್ನು ಕೆ.ಆರ್‌ ಪುರದಿಂದ ವೈಟ್‌ಫೀಲ್ಡ್‌ವರೆಗೂ (Whitefield) ಮೆಟ್ರೋ

ಓಡಾಡುತ್ತಿದ್ದು, ಈ ಮಾರ್ಗವು ಆರಂಭವಾದರೆ ಮೆಜೆಸ್ಟಿಕ್‌ನಿಂದ (Majestic) ಅಥವಾ ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗೆ ಒಂದೇ ರೈಲಿನಲ್ಲಿ ನೇರವಾಗಿ ಸಂಚರಿಸಬಹುದು.

ನಗರದ ಕೇಂದ್ರ ಭಾಗದಿಂದ ಸಾಕಷ್ಟು ಮಂದಿ ಟೆಕ್ಕಿಗಳು ಪ್ರತಿನಿತ್ಯ ಓಡಾಟ ನಡೆಸುತ್ತಿದ್ದು, ವೈಟ್‌ಫೀಲ್ಡ್‌ ಬಹುತೇಕ ಐಟಿ ಕಾರಿಡಾರ್‌ ಆಗಿದೆ. ಸದ್ಯಕ್ಕೆ ಮಧ್ಯದ ಮಾರ್ಗ ಪೂರ್ಣಗೊಳ್ಳದ

ಬೈಯ್ಯಪ್ಪನಹಳ್ಳಿಯಿಂದ ರೈಲು ಇಳಿದು ಕೆಆರ್‌ ಪುರವರೆಗೂ ಬಸ್‌ನಲ್ಲಿ ಸಂಚಾರ ನಡೆಸಿ ಮತ್ತೆ ಮೆಟ್ರೋ (Metro) ರೈಲಿನಲ್ಲಿ ವೈಟ್‌ಫೀಲ್ಡ್‌ ಕಡೆ ಸಾಗುತ್ತಿದ್ದರು.

ನೇರವಾಗಿ ರೈಲು ಇಲ್ಲ ಎಂಬ ಕಾರಣಕ್ಕೆ ಹಲವರು ಟೆಕ್ಕಿಗಳು ಇಂದಿಗೂ ಸ್ವಂತ ವಾಹನದಲ್ಲಿಯೇ ತೆರಳುತ್ತಿದ್ದರು. ಇನ್ನು ನೇರ ಮಾರ್ಗ ಲಭ್ಯವಾಗುವುದರಿಂದ ಅವರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಸದ್ಯಕ್ಕೆ ನೇರಳೆ ಮಾರ್ಗದಲ್ಲಿ ಬೈಯ್ಯಪ್ಪನಹಳ್ಳಿ ಕೆಆರ್‌ ಪುರಂ ಮಧ್ಯೆ 2 ಕಿ.ಮೀ ಮಾರ್ಗ ಮಾತ್ರ ಮೆಟ್ರೋ ರೈಲು ಸಂಚಾರ ಇಲ್ಲ.

ಇನ್ನು ಕೆಆರ್‌ ಪುರದಿಂದ ವೈಟ್‌ಫೀಲ್ಡ್‌ವರೆಗೂ ಮೆಟ್ರೋ ಓಡಾಡುತ್ತಿದೆ. ಮಧ್ಯದ ಈ ಮಾರ್ಗವು ಆರಂಭವಾದರೆ ಮೆಜೆಸ್ಟಿಕ್‌ನಿಂದ ಅಥವಾ ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗೆ ಒಂದೇ ರೈಲಿನಲ್ಲಿ

ನೇರವಾಗಿ ಸಂಚರಿಸಬಹುದು. ನೇರ ರೈಲು ಇಲ್ಲ ಎಂಬ ಕಾರಣಕ್ಕೆ ಹಲವರು ಟೆಕ್ಕಿಗಳು ಇಂದಿಗೂ ಸ್ವಂತ ವಾಹನದಲ್ಲಿಯೇ ತೆರಳುತ್ತಿದ್ದರು. ಇನ್ನು ನೇರವಾಗಿ ಮಾರ್ಗಸೌಲಭ್ಯ ದೊರಕುವುದರಿಂದ

ಹೆಚ್ಚಿನ ಅನುಕೂಲವಾಗಲಿದೆ.

ಇದನ್ನು ಓದಿ: ನೆಲಮಂಗಲದಲ್ಲಿ 400 ಎಕರೆಯಲ್ಲಿ ₹1,770 ಕೋಟಿ ವೆಚ್ಚದ ರಾಷ್ಟ್ರೀಯ ಲಾಜಿಸ್ಟಿಕ್‌ ಪಾರ್ಕ್ ನಿರ್ಮಾಣ

Exit mobile version