ದೇವಸ್ಥಾನದ ಆದಾಯ 1 ಕೋಟಿ ಇದ್ದರೆ, ಸರ್ಕಾರಕ್ಕೆ 10 ಲಕ್ಷ ಸಿಗುವಂತೆ ವಿಧೇಯಕ

Bangalore : ಹಿಂದೂ ಧಾರ್ಮಿಕ ಸಂಸ್ಥೆಗಳ (Hindu religious institutions) ಹಾಗೂ ಧರ್ಮಾದಾಯ ದತ್ತಿಗಳ (Charitable endowments) ವಿಧೇಯಕ ಮಂಡಿಸಿರುವ ರಾಜ್ಯ ಸರ್ಕಾರ ಅನುಮೋದನೆಯನ್ನು ಪಡೆದುಕೊಂಡಿದೆ. ಈ ವಿಧೇಯಕದ ಪ್ರಕಾರ, ದೇವಸ್ಥಾನದ ಆದಾಯ 1 ಕೋಟಿ ರೂಪಾಯಿ ಇದ್ದರೆ, ಅದರಲ್ಲಿ ಸರ್ಕಾರಕ್ಕೆ 10 ಲಕ್ಷ ರೂಪಾಯಿ ಸಿಗುವಂತೆ ಕಾನೂನು (The law is framed) ರೂಪಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.


ಇನ್ನು ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ಈ ಕಾನೂನಿನ ವಿರುದ್ದ ಕಿಡಿಕಾರಿರುವ ರಾಜ್ಯ ಬಿಜೆಪಿ (BJP) ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರು, ರಾಜ್ಯದಲ್ಲಿ ಸರಣೀ ರೂಪದಲ್ಲಿ ಹಿಂದೂ (Hindu) ವಿರೋಧಿ ಧೋರಣೆ ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರ ಇದೀಗ ತನ್ನ ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಹಿಂದೂ ದೇವಾಲಯಗಳ (Hindu Temple) ಆದಾಯದ ಮೇಲೂ ವಕ್ರ ದೃಷ್ಟಿ ಬೀರಿ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ (Charitable endowments) ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆದು ಕೊಂಡಿದೆ.

ಇದರ ಅನುಸಾರ ಇನ್ನು ಮುಂದೆ 1 ಕೋಟಿ ರೂಪಾಯಿಗೂ ಆದಾಯ ಮೀರಿದ ದೇವಸ್ಥಾನಗಳ (Beyond the temples) ಆದಾಯದ ಶೇ.10 ರಷ್ಟು ಹಣವನ್ನು ಸರ್ಕಾರ ಬಾಚಿಕೊಳ್ಳಲಿದೆ, ಇದು ದರಿದ್ರತನವಲ್ಲದೇ ಬೇರೇನೂ (Nothing but misery) ಅಲ್ಲ, ದೇವರ ಅರಿಕೆ ಹಾಗೂ ದೇವಸ್ಥಾನದ ಅಭಿವೃದ್ಧಿಗೆ ಭಕ್ತರು ಸಮರ್ಪಿಸುವ ಕಾಣಿಕೆ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಾಗೂ ಭಕ್ತರಿಗೆ ಅನುಕೂಲ ಕಲ್ಪಿಸುವ ಕಾರ್ಯಕ್ಕೆ ವಿನಿಯೋಗವಾಗಬೇಕೇ ಹೊರತೂ, ಅದು ಬೇರೊಂದು ಕಾರ್ಯಕ್ಕೆ ವಿನಿಯೋಗವಾದರೆ ಜನರ ದೈವ ನಂಬಿಕೆಗಳ ಮೇಲೆ ನಡೆಯುವ ದೌರ್ಜನ್ಯ ಹಾಗೂ ವಂಚನೆಯಾಗುತ್ತದೆ. ಇತರ ಧರ್ಮಗಳ ಆದಾಯದ ಮೇಲಿಲ್ಲದ ಕಣ್ಣು ಹಿಂದೂ ದೇವಾಲಯಗಳ (Temples) ಮೇಲೆ ಮಾತ್ರ ಏಕೆ ಎಂಬುದು ಕೋಟಿ ಭಕ್ತರ ಪ್ರಶ್ನೆಯಾಗಿದೆ. ಭಕ್ತರ ಹಣದಲ್ಲಿ ಕಾಂಗ್ರೆಸ್ ಸರ್ಕಾರ ಪಾಲು ಕಸಿಯುವ ಬದಲು ‘ಸರ್ಕಾರ ನಡೆಸಲು ನೆರವಾಗಿ’ ಎಂದು ದೇವಸ್ಥಾನಗಳ ಬಳಿ ಗೋಲಕಗಳನ್ನಿಡಲಿ ಸಹಾನುಭೂತಿ ಮನಸ್ಸಿನ ಭಕ್ತರು (Compassionate minded devotees) 9 ನಿಮ್ಮ ಸರ್ಕಾರಕ್ಕೆ ಕಾಣಿಕೆ ನೀಡಲೂ ಬಹುದು? ಎಂದು ಪ್ರಶ್ನಿಸಿದ್ದಾರೆ.

ಇನ್ನೊಂದು ಟ್ವೀಟ್ನಲ್ಲಿ ವಿಪಕ್ಷ ನಾಯಕ ಆರ್. ಆಶೋಕ (R. Ashoka), ಲೂಟಿಕೋರ ಕಾಂಗ್ರೆಸ್ (Loot Congress) ಸರ್ಕಾರದ ವಕ್ರದೃಷ್ಟಿ ಈಗ ಹಿಂದೂ ದೇವಾಲಯಗಳ ಹುಂಡಿಯ ಮೇಲೂ ಬಿದ್ದಿದ್ದು, ದೇವಾಲಯಗಳ ಆದಾಯದಲ್ಲಿ 10% ಕಮಿಷನ್ (10% commission on temple revenue) ಪಡೆಯಲು ಮುಂದಾಗಿದೆ. ದೇವಸ್ಥಾನ ಕಾಲಕಾಲಕ್ಕೆ ಜೀರ್ಣೋದ್ಧಾರವಾಗಲಿ, ಉತ್ಸವ, ಜಾತ್ರೆಗಳು ವಿಜೃಂಭಣೆಯಿಂದ ನಡೆಯಲಿ, ಭಕ್ತರ ಅನ್ನ ದಾಸೋಹಕ್ಕೆ, ವಸತಿ ನಿಲಯಗಳಿಗೆ ಅನುಕೂಲವಾಗಲಿ ಎಂದು ಭಕ್ತರು ನೀಡುವ ಕಾಣಿಕೆಯ ಹುಂಡಿಗೂ ಕನ್ನ ಹಾಕುತ್ತಿದ್ದೀರಲ್ಲ ಸಿಎಂ ಸಿದ್ದರಾಮಯ್ಯ (CM Siddaramaya) ಅವರೇ, ನಿಮಗೆ ಹಿಂದೂಗಳ ಮೇಲೆ, ಹಿಂದೂ ದೇವಸ್ಥಾನಗಳ ಮೇಲೆ ಯಾಕಿಷ್ಟು ದ್ವೇಷ? ಎಂದು ಪ್ರಶ್ನಿಸಿದ್ದಾರೆ.

Exit mobile version