ಸಂಚಾರಿ ಪೊಲೀಸರಿಂದ ಹೊಸ ನಿಯಮ :ಬೆಂಗಳೂರಲ್ಲಿ 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ , ದಂಡ ವಸೂಲಿಗೆ ಮನೆಗೆ ಭೇಟಿ .

Bengaluru : ದ್ವಿಚಕ್ರ ವಾಹನದಲ್ಲಿ (Two-wheeler) ಸಂಚರಿಸುವಾಗ ಹೆಲ್ಮೆಟ್(New rules from BTP) ಧರಿಸುವುದನ್ನು ಕಡ್ಡಾಯಗೊಳಿಸಿದ್ದರೂ ಅನೇಕರು ಆ

ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ. ಅದರಲ್ಲೂ ಹೆಲ್ಮೆಟ್ ಧರಿಸದ ಕಾರಣಕ್ಕೆ ಅನೇಕ ಮಕ್ಕಳು (Children’s) ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆಗಳು ಕೂಡ ಇತ್ತೀಚಿಗೆ

ವರದಿಯಾಗುತ್ತಿವೆ.

ಈ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳಿಗೆ ಕೂಡ ಹೆಲ್ಮೆಟ್ (Helmet) ಕಡ್ಡಾಯಗೊಳಿಸಿ ಬೆಂಗಳೂರು ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ.

ದ್ವಿಚಕ್ರ ವಾಹನ ಚಲಾಯಿಸುವಾಗ ಅದರಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಬೆಂಗಳೂರು (Bengaluru)

ಸಂಚಾರಿ ಪೊಲೀಸರು ಈ ಕುರಿತಂತೆ ಆದೇಶ ಹೊರಡಿಸಿದ್ದಾರೆ.ಬೆಂಗಳೂರಿನಲ್ಲಿ 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್​ ಕಡ್ಡಾಯ. ಶಾಲೆಗೆ ಬಿಡುವಾಗ ಮಕ್ಕಳಿಗೆ ಹೆಲ್ಮೆಟ್​ ಕಡ್ಡಾಯವಾಗಿ

ಹಾಕಬೇಕು ಎಂದು ಸಂಚಾರಿ ಪೊಲೀಸರು (Police) ಸೂಚನೆ ನೀಡಿದ್ದಾರೆ.ಶಾಲಾ ಆಟೋ,(School Auto) ಖಾಸಗಿ ಕಾರು (Private car), TT ವಾಹನಗಳಲ್ಲಿ ನಿಗದಿತ ಮಿತಗಿಂತ

ಹೆಚ್ಚಿನ ಮಕ್ಕಳನ್ನು ಶಾಲೆಗೆ ಕರೆದೊಯ್ಯುವವರ ವಿರುದ್ಧವೂ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.ದಂಡ ಬಾಕಿ ಇದ್ದರೆ ಮನೆಗೆ ಪೋಲೀಸರ ಭೇಟಿ (Police visit home if fine is

outstanding)

ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿ (violate) ರೂ.50 ಸಾವಿರಕ್ಕೂ ಅಧಿಕ ದಂಡ (fine) ಮೊತ್ತ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರ ಮನೆಗೆ ನಗರ ಸಂಚಾರ

ಪೊಲೀಸರು ಭೇಟಿ ನೀಡಿ ಬಾಕಿ ದಂಡ ವಸೂಲಿಗೆ ಮುಂದಾಗಿದ್ದಾರೆ.


ನಗರದ ಎಲ್ಲಾ ಸಂಚಾರ ಪೊಲೀಸ್‌ ಠಾಣೆಗಳ (Traffic police stations) ವ್ಯಾಪ್ತಿಯಲ್ಲಿ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ (Violation of traffic rules) ಪ್ರಕರಣಗಳನ್ನು

ಪರಿಶೀಲಿಸಿ, 50 ಸಾವಿರಕ್ಕೂ ಅಧಿಕ ದಂಡದ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವ ವಾಹನಗಳ ಪಟ್ಟಿ ಮಾಡಲಾಗಿದೆ. ಸದ್ಯಕ್ಕೆ ನಗರದಲ್ಲಿ 2,681 ವಾಹನಗಳ ಮಾಲೀಕರು 50 ಸಾವಿರಕ್ಕೂ

ಅಧಿಕ ದಂಡ ಬಾಕಿ ಉಳಿಸಿಕೊಂಡಿರುವುದು (New rules from BTP) ಪತ್ತೆಯಾಗಿದೆ.

ಇದ್ರ ಜೊತೆಗೆ ಸಂಚಾರ ನಿಯಮದ ಉಲ್ಲಂಘನೆ. ಬೆಂಗಳೂರಲ್ಲಿ ಪ್ರತಿ ದಿನ 1.2 ಕೋಟಿ ವಾಹನಗಳು ಸಂಚರಿಸುತ್ತವೆ. ಮತ್ತು 2,300 ಹೊಸ ವಾಹನಗಳು (New vehicles)

ಸೇರ್ಪಡೆಯಾಗುತ್ತಿದೆ. ಹೀಗೆ ಬರುವ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಟನೆ (Violation of rules) ಮಾಡ್ತಿದ್ದಾರೆ. ದಂಡ ಹೊಂದಿರೊ ವಾಹನ ಸವಾರರನ್ನು ಪತ್ತೆ ಮಾಡಿ

ಮನೆಗೆ ತೆರಳಿ ದಂಡದ ಹಣ ವಸೂಲಿ‌ ಮಾಡ್ತಿದ್ದಾರೆ.

ಕಳೆದ 10 ದಿನಗಳಲ್ಲಿ 120 ಮಂದಿ ವಾಹನ ಮಾಲೀಕರ ವಿಳಾಸ ಪತ್ತೆಹಚ್ಚಿ ಬಾಕಿ ದಂಡ ವಸೂಲಿ ಮಾಡಲಾಗಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್

(Commissioner Anucheth) ತಿಳಿಸಿದರು. ಕೆಲ ವಾಹನ ಸವಾರರು ಬೇರೆ ವ್ಯಕ್ತಿಗ ಳಿಗೆ ವಾಹನಗಳನ್ನು ಮಾರಾಟ ಮಾಡಿದ್ದಾರೆ. ಅಂತವರಿಗೆ ಬಾಕಿ ದಂಡ ಪಾವತಿಸಲು ನೋಟಿಸ್‌ ನೀಡಿ

ಕಾಲಾವಕಾಶ ನೀಡಲಾಗಿದೆ. ನೋಟಿಸ್ ನೀಡಿಯೂ ದಂಡ ಪಾವತಿಸದಿದ್ದಲ್ಲಿ ಅಂತಹ ವಾಹನ ಮಾಲೀಕರ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪಪಟ್ಟಿ ಸಲ್ಲಿಸಲಾಗುವುದುವುದು.

ಬಳಿಕ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಬೇಕಾಗುತ್ತದೆ ಎಂದು ಹೇಳಿದ್ದಾರೆ.

Exit mobile version