4GB RAM+ 64GB ಸ್ಟೋರೇಜ್‌ನ P0C0 C51 ಫೋನ್ ಕೇವಲ 7999 ರೂಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯ

New Delhi: ಮೊಬೈಲ್‌ ಪ್ರಿಯರಿಗೊಂದು ಗುಡ್‌ ನ್ಯೂಸ್‌. 4GB RAM+ 64GB ಸ್ಟೋರೇಜ್‌ ಉಳ್ಳ P0C0 C51 ಫೋನ್ ಕೇವಲ 7999 ರೂಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. P0C0 C51 ಸ್ಮಾರ್ಟ್‌ ಫೋನ್‌ (Smart Phone) ಏಪ್ರಿಲ್ 10ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಇದೇ ಏಪ್ರಿಲ್ 7ರಂದು (new smart phone) ಭಾರತದಲ್ಲಿ P0C0 ಕಂಪನಿ ಪರಿಚಯಿಸಿರುವ ಅತ್ಯಂತ ಗುಣಮಟ್ಟದ ಸ್ಮಾರ್ಟ್ಫೋನ್ ಇದಾಗಿದೆ.


4GB RAM+ 64GB ಸ್ಟೋರೇಜ್ (Storage) ಇರುವ ಈ ಫೋನನ್ನು 7999 ರೂಪಾಯಿ ಬೆಲೆಗೆ ಬಿಡುಗಡೆ ಮಾಡಲಾಗುತ್ತಿದೆ. P0C0 C51 ಸ್ಮಾರ್ಟ್ಫೋನ್ ಅನ್ನು ಫ್ಲೀಪ್ಕಾರ್ಟ್ ಮತ್ತು ಇ ಕಾಮರ್ಸ್ ತಾಣಗಳ ಮೂಲಕ ಖರೀದಿ ಮಾಡಬಹುದಾಗಿದೆ.

ಮೊದಲ ಮಾರಾಟದ ಅಂಗವಾಗಿ ಈ P0C0 C51 ಸ್ಮಾರ್ಟ್ಫೋನ್ (Smart Phone) ಅನ್ನು ಸೀಮಿತ ಅವಧಿವರೆಗೂ ಕೇವಲ 7999 ರೂ ಬೆಲೆಗೆ ನಿಮ್ಮದಾಗಿಸಿ ಕೊಳ್ಳಬಹುದು.

P0C0 C51 ಸ್ಮಾರ್ಟ್ಫೋನ್ ಅನ್ನು ರಾಯಲ್ ಬ್ಲೂ ಮತ್ತು ಪವರ್ ಬ್ಲಾಕ್ ಬಣ್ಣದಲ್ಲಿ ಆಯ್ಕೆ ಮಾಡುವ ಅವಕಾಶ ಗ್ರಾಹಕರಿಗೆ ಕಲ್ಪಿಸಲಾಗಿದೆ ಎಂದು P0C0 ಕಂಪನಿ ತಿಳಿಸಿದೆ .


ನೂತನ P0C0 C51 ಸ್ಮಾರ್ಟ್ಫೋನ್, ವಾಟರ್ ಡ್ರಾಪ್ ನಾಚ್ ಶೈಲಿಯಲ್ಲಿ, 6.52 ಇಂಚಿನ HD +(720X1600 ಪಿಕ್ಸೆಲ್ ಗಳು) ಡಿಸ್ ಪ್ಲೇ (Display) ಹೊಂದಿದೆ.

ಇದರ ಡಿಸ್ ಪ್ಲೇಯ 120HZ, ಟಚ್ ಸ್ಲಾಂಪಿಂಗ್ ರೇಟ್ ಮತ್ತು 400ನಿಟ್ಸ್ ಬ್ರೈಟ್ ನೆಸ್ ಅನ್ನು ಬೆಂಬಲಿಸಿದೆ. ಇವೆಲ್ಲಾ P0C0 C51 ಸ್ಮಾರ್ಟ್ಫೋನ್ ವೈಶಿಷ್ಟ್ಯತೆ ಗಳಾಗಿವೆ.


ಈ ಸ್ಮಾರ್ಟ್ಫೋನ್ android 13,(go edition) ಕಾರ್ಯನಿರ್ವಹಣೆ ವಿಭಾಗದಲ್ಲಿ 4GB RAM ಮತ್ತು 64GB ಆನ್ ಬೋರ್ಡ್ ಮೆಮೊರಿಯೊಂದಿಗೆ ಸಂಯೋಜಿಸಲಾದ

ಆಕ್ಟಾ -ಕೋರ್ media tech, helio G36 ಪೊಸೆಸರ್ ಹೊಂದಿದೆ.

ಇದರಲ್ಲಿ ಮೈಕ್ರೋ 1SD ಕಾರ್ಡ್ ಬಳಸಿ 1TB ವರೆಗೆ ಮೆಮೊರಿ ವಿಸ್ತರಿಸಬಹುದಾದ ಹಾಗೂ 3GB ಬಳಕೆಯಾಗದ ಸಂಗ್ರಹಣೆಯನ್ನು ಬಳಸಿಕೊಂಡು

ಅಂತರ್ಗತ RAM ಅನ್ನು ವಾಸ್ತವಿಕವಾಗಿ 7GB ವರೆಗೆ ವಿಸ್ತರಿಸುವಂತಹ ಆಯ್ಕೆ ಇದೆ.


ಕ್ಯಾಮರಾ ಕ್ವಾಲಿಟಿ ಹೇಗಿದೆ?
: ಇನ್ನು ಕ್ಯಾಮರಕ್ಕೆ ಸಂಬಂಧಿಸಿದಂತೆ P0C0 C51 ಸ್ಮಾರ್ಟ್ ಫೋನ್ 8 ಮೆಗಾ ಪಿಕ್ಸೆಲ್ ಪ್ರಾಥಮಿಕ ಲೆನ್ಸ್ (new smart phone) ಹಾಗೂ ಡೆಪ್ತ್ ಸೆನ್ಸಾರ್ ಜೊತೆಗೆ ಡುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ.

ಇದರಲ್ಲಿ 5ಮೇಗಾಪಿಕ್ಷೆಲ್ ಸೆನ್ಸರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಕೂಡ ಇದೆ.


P0C0 C51 ಸ್ಮಾರ್ಟ್ ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, wi-fi, blutooth, GPS, glorass, beidou ಮೈಕ್ರೋ USB ಫೋಟ್ ಮತ್ತು 3.5mm ಆಡಿಯೋ ಜ್ಯಾಕ್ ವಿಶೇಷತೆಗಳಿವೆ.

(5G ಬೆಂಬಲ ಹೊಂದಿಲ್ಲ ಎಂಬುದನ್ನು ಗಮನಿಸಿ). ಈ ಫೋನಿನಲ್ಲಿ ದೀರ್ಘ ಸಮಯ ಬಾಳಿಕೆ ಬರುವ 5000MAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 10 w ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ ಹಾಗೂ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ನೀಡಲಾಗಿದೆ.

Exit mobile version