ಬೆಂಗಳೂರು ಶಾಸಕರಿಗೆ ಅಮಿಶಾ ಹೊಸ ಟಾಸ್ಕ್ : ಫುಲ್ ಟೆನ್ಷನ್ನಲ್ಲಿ ಬಿಜೆಪಿ ನಾಯಕರು

Bengaluru : ಬಳ್ಳಾರಿಯಲ್ಲಿ ನಡೆದ ಬಿಜೆಪಿ (BJP)ಸಮಾವೇಶದಲ್ಲಿ ಭಾಗಿಯಾಗಲು ಕರ್ನಾಟಕಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ಶಾ (Amit Shah)ಅವರು ಇದೀಗ ರಾಜಧಾನಿ ಬೆಂಗಳೂರು ಗೆಲ್ಲುವ ಹೊಸ(new task for bjp) ಟಾಸ್ಕ್ ಅನ್ನು ಬಿಜೆಪಿ ನಾಯಕರಿಗೆ ನೀಡಿದ್ದಾರೆ.

ಈ ಕುರಿತು ಯಾವುದೇ ಅಧಿಕೃತ ಸಭೆಯನ್ನು ಅಮಿತ್‌ಶಾ ನಡೆಸಿಲ್ಲವಾದರೂ, ಮೌಖಿಕವಾಗಿ ಬೆಂಗಳೂರಿನ ಸಚಿವರು, ಶಾಸಕರು, ಸಂಸದರು, ಪರಿಷತ್‌ ಸದಸ್ಯರಿಗೆ ಬೆಂಗಳೂರು ಗೆಲ್ಲುವ ಟಾಸ್ಕ್‌ ನೀಡಿದ್ಧಾರೆ.

Amit Shah

ಬಳ್ಳಾರಿಯಲ್ಲಿ ನಡೆದ ಸಮಾವೇಶ ಮುಗಿಸಿಕೊಂಡ, ಬೆಂಗಳೂರಿಗೆ ಬಂದ ಅಮಿತ್‌ಶಾ ಯಾವುದೇ ಸಭೆಗಳನ್ನು ನಡೆಸಲಿಲ್ಲ.

ಆದರೆ ಅಮಿತ್ ಶಾ(Amit Shah) ಗೈರಿನ ನಡುವೆ ರಾಜ್ಯ ಚುನಾವಣಾ ಉಸ್ತುವಾರಿಗಳಾದ ಧರ್ಮೇಂದ್ರ ಪ್ರಧಾನ, ಅಣ್ಣಾಮಲೈ,

ಮನ್ಸುಖ್ ಮಾಂಡವೀಯ ನೇತೃತ್ವದಲ್ಲಿ ಸರಣಿ ಸಭೆಗಳನ್ನು ನಡೆಸಲಾಯಿತು.

https://youtu.be/eRj4HpjlyFE

ಈ ಸಭೆಯಲ್ಲಿ ರಾಜಧಾನಿ ಬೆಂಗಳೂರಲ್ಲಿ(Bengaluru ) 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಟಾಸ್ಕ್ ಟಾಸ್ಕ್ಬೆಂಗಳೂರು (new task for bjp) ನಗರದ ಶಾಸಕರು,

ಸಂಸದರು, ಪರಿಷತ್ ಸದಸ್ಯರು, ಜಿಲ್ಲಾ ಘಟಕಗಳ ಅಧ್ಯಕ್ಷರು, ಪಕ್ಷದ ಜಿಲ್ಲಾ ಉಸ್ತುವಾರಿಗಳಿಗೆ ನೀಡಲಾಯಿತು. ಪಕ್ಷ ಸಂಘಟನೆ ಮತ್ತು ತಂತ್ರಗಾರಿಕೆ ಬಗ್ಗೆಯೂ ಚರ್ಚೆ ನಡೆಸಲಾಯಿತು.

• 1+1 ರೀತಿ ಕ್ಷೇತ್ರದ ಜವಾಬ್ದಾರಿಯನ್ನು ಹೊತ್ತುಕೊಂಡು ಪಕ್ಷವನ್ನು ಗೆಲ್ಲಿಸಬೇಕು.
• ಪ್ರತಿವಾರ ಕಾರ್ಯಕರ್ತರೊಂದಿಗೆ ಸಮಾಲೋಚನೆ ಸಭೆ ನಡೆಸಬೇಕು.
• ಗುಜರಾತ್ ಚುನಾವಣೆಯಲ್ಲಿ ಸ್ಥಳೀಯ ಮಟ್ಟದ ಚುನಾವಣಾ ತಂತ್ರಗಾರಿಕೆ ಭಾರೀ ಯಶಸ್ಸು ತಂದುಕೊಟ್ಟಿದ್ದು ಅದನ್ನು ಅಳವಡಿಸಿಕೊಳ್ಳಬೇಕು.
• ಎಲ್ಲ ಬೂತ್ಗಳಿಗೆ ಸಚಿವರು, ಶಾಸಕರು ನಿರಂತರವಾಗಿ ಭೇಟಿ ನೀಡಬೇಕು.
• ಪ್ರತಿ ವಾರ್ಡ್ನಲ್ಲಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಬೇಕು.

BJP


• ಈ ಹಿಂದೆ ಬೆಂಗಳೂರಿನಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಬೆಂಗಳೂರಿನಲ್ಲಿ 20+ ಕ್ಷೇತ್ರಗಳನ್ನು ಗೆಲ್ಲಲೇಬೇಕು.
• ವಾರ್ಡ್‌ಮಟ್ಟದಲ್ಲಿ ಹೆಚ್ಚು ಪೋಕಸ್‌ಮಾಡಿ ತಂತ್ರಗಾರಿಕೆ ರೂಪಿಸಬೇಕು. ಎಲ್ಲ ವಾರ್ಡ್‌ಗಳ ನಾಗರಿಕರೊಂದಿಗೆ ಸಭೆ ನಡೆಸಬೇಕು.
• ಬೆಂಗಳೂರಿನ ಸುತ್ತಮುತ್ತಲಿನ ಕ್ಷೇತ್ರಗಳತ್ತಲೂ ಗಮನ ಕೇಂದ್ರೀಕರಿಸಬೇಕು.
• ಕಾರ್ಯಕರ್ತರಿಗೆ ವಿಶೇಷ ಸವಲತ್ತು ಮತ್ತು ಬೆಂಬಲವನ್ನು ನೀಡಬೇಕು.
• ನಮ್ಮ ಕಾರ್ಯಕರ್ತರು ಮತ್ತು ಮುಖಂಡರು ಪಕ್ಷಾಂತರ ಆಗದಂತೆ ಎಚ್ಚರ ವಹಿಸಬೇಕು.
• ಸಂಸದರು ಮತ್ತು ಪರಿಷತ್‌ಸದಸ್ಯರು ಹೆಚ್ಚು ಸಾರ್ವಜನಿಕ ಸಭೆಗಳನ್ನು ನಡೆಸಬೇಕು.

Exit mobile version