ಮೂವರಲ್ಲಿ ಒಬ್ಬರಿಗೆ ಸಾವು ತರುವಂತ `ಡೆಡ್ಲಿ ವೈರಸ್’ ಈಗ ಭಾರತಕ್ಕೆ ಲಗ್ಗೆಯಿಟ್ಟಿದೆ!

ಕೊರೊನಾ ಅಟ್ಟಹಾಸ ನಡುವೆ ಅದರ ರೂಪಾಂತರಿಯಾದ ಡೆಲ್ಟಾ, ಓಮಿಕ್ರೋನ್ ಹೀಗೆ ಹೊಸ ಸೋಂಕಿನ ಪಟ್ಟಿಯಲ್ಲಿ ಇದೀಗ ಮತ್ತೊಂದು ಹೊಸ ಸೋಂಕು ಸೇರ್ಪಡೆ ಆಗಿದೆ. ಆ ಹೊಸ ಸೋಂಕಿಗೆ ‘ನಿಯೋ ಕೋವ್’ ಎಂದು ಹೆಸರಿಸಲಾಗಿದೆ. ಚೀನಾ ವಿಜ್ಞಾನಿಗಳ ಪ್ರಕಾರ ಈ ಸೋಂಕು ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿದೆ. ದಕ್ಷಿಣ ಆಫ್ರಿಕಾದಲ್ಲಿ ಈ ಸೋಂಕು ಮೊದಲಿಗೆ ಬಾವಲಿಗಳಲ್ಲಿ ಕಂಡು ಬಂದಿದೆ. ಆದರೆ ವಿಜ್ಞಾನಿಗಳ ಪ್ರಕಾರ ಈ ಸೋಂಕು ಮನುಷ್ಯರಲ್ಲಿ ಕಂಡು ಬಂದರೆ ಮೂವರಲ್ಲಿ ಒಬ್ಬರಿಗೆ ಸಾವು ತರುವಂತ ಡೆಡ್ಲಿ ವೈರಸ್! ಈಗ ಭಾರತಕ್ಕೆ ಲಗ್ಗೆಯಿಟ್ಟಿದೆ. ಈ ವೈರಸ್ನಿಂದ ವೇಗವಾಗಿ ಸಾವಿಗೀಡಾಗುತ್ತಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ವೈರಸ್ ಉಸಿರಾಟದ ಸಿಂಡ್ರೋಮ್ ಆಗಿದ್ದು MERS-COVಗೆ ಸಂಬಂಧಿಸಿದೆ.


ಈ ವೈರಸ್ ಇದೀಗ ಹೊಸ ವೈರಸ್ ಎಂದು ಹಲವರೂ ಅಂದುಕೊಂಡಿದ್ದಾರೆ. ಆದರೆ ಈ ವೈರಸ್ 2012ರಲ್ಲೇ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಪತ್ತೆಯಾಗಿತ್ತು. ಇದು ಸಾರ್ಸ್ ಕೋವ್ -2 ಅನ್ನು ಹೊಂದುವ ವೈರಸ್ ಆಗಿದ್ದು, ಇದು ಮಾನವನ ದೇಹ ಪ್ರವೇಶಿಸಿದರೆ ಇದು ಕೊರೊನಾ ವೈರಸ್ ಆಗಿ ಮಾರ್ಪಾಡಾಗುತ್ತದೆ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ. ನಿಯೋ ಕೋವ್ ವೈರಸ್ ಎಷ್ಟು ಶಕ್ತಿಶಾಲಿಯಾಗಿದೆ ಎಂದರೆ ಇದೀಗ ಇರುವ ಯಾವ ಲಸಿಕೆ ಕೂಡ ನಿಯೋ ವೈರಾಣುವಿನ ಎದುರು ಹೋರಾಡುವಷ್ಟು ಪರಿಣಾಮಕಾರಿಯಾಗಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಈ ವೈರಾಣುವಿನ ಸೋಂಕಿಗೆ ತುತ್ತಾಗುವ ವ್ಯಕ್ತಿಗೆ ಸದ್ಯಕ್ಕೆ ಯಾವುದೇ ಲಸಿಕೆಯನ್ನು ನೀಡುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.


ಈ ಬಗ್ಗೆ ರಷ್ಯಾದ ವೆಕ್ಟರ್ ವೈರಾಣು ಸಂಶೋಧನಾ ಕೇಂದ್ರದ ತಜ್ಞರೂ ಕೂಡಾ ಪ್ರತಿಕ್ರಿಯೆ ನೀಡಿದ್ದು, ರಷ್ಯಾದ ಸಂಸ್ಥೆ ಸ್ಫುಟ್ನಿಕ್ ಜೊತೆಗೆ ಮಾತನಾಡಿರುವ ತಜ್ಞರು, ಹೊಸ ವೈರಾಣು ನಿಯೋ ಕೋವ್ ಬಗ್ಗೆ ತಮಗೆ ಮಾಹಿತಿ ಇದೆ. ಆದರೆ, ಈ ವೈರಾಣು ಮಾನವರಲ್ಲಿ ಹರಡುವ ಸಾಮರ್ಥ್ಯ ಹೊಂದಿದೆಯೇ ಎಂಬುದರ ಕುರಿತಾಗಿ ಇನ್ನಷ್ಟೇ ಸಂಶೋಧನೆ ನಡೆಯಬೇಕು ಎಂದಿದ್ದಾರೆ. ಈ ವೈರಸ್ ಮನುಷ್ಯರಿಗೆ ಹರಡುತ್ತದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಯಾವ ವಿಜ್ಞಾನಿಗಳು ಇವರೆಗೂ ಸ್ಪಷ್ಟಪಡಿಸಿಲ್ಲ ಜೊತೆಗೆ ಇದುವರೆಗೂ ಯಾರೂ ಕೂಡ ಈ ವೈರಸ್ ಬಲಿಯಾದ ಬಗ್ಗೆ ವರದಿಯಾಗಿಲ್ಲ. ಆದರೆ BioRxiv ವೆಬ್ಸೈಟ್ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, SARS-CoV-2, NeoCoV ಮತ್ತು PDF-2180-CoV ನಂತಹವುಗಳು ಸಹ ಮನುಷ್ಯರಿಗೆ ಸೋಂಕು ತರಬಹುದು ಎಂದು ಹೇಳಲಾಗಿದೆ. ಆದರೆ ಅದೇನಿದ್ದರೂ ಸಾಮಾಜಿಕ ಅಂತರ ಜೊತೆಗೆ ಕೋವಿಡ್ ನಿಯಮಗಳನ್ನು ಪಾಲಿಸಿ ನಮ್ಮ ಜಾಗ್ರತೆಯಲ್ಲಿ ನಾವು ಇರುವುದು ಒಳ್ಳೆಯದು ಎಂಬುವುದು ವಿಜಯ ಟೈಮ್ಸ್ ಕಳಕಳಿ.

Exit mobile version