ಟ20 ವಿಶ್ವಕಪ್‌ – ಗೌರವ ಧನ ನಿರಾಕರಿಸಿದ ಎಂಎಸ್ ಧೋನಿ

ಮುಂಬೈ ಅ 14 : ದುಬೈನಲ್ಲಿ ನಡೆಯಲಿರುವ ಮುಂಬರುವ ಟಿ-20 ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾಕ್ಕೆ ಮಾರ್ಗದರ್ಶಕರಾಗಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಿಸಿಸಿಐನಿಂದ ಯಾವುದೇ ಶುಲ್ಕವನ್ನು ಪಡೆಯುತ್ತಿಲ್ಲ ಎಂದು ಕಾರ್ಯದರ್ಶಿ ಜಯ್ ಶಾ ಮಂಗಳವಾರ ಹೇಳಿದ್ದಾರೆ.

ಟಿ-20 ವಿಶ್ವಕಪ್ ಗಾಗಿ ಭಾರತ ತಂಡದ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಲು ಎಂಎಸ್ ಧೋನಿ ಯಾವುದೇ ಗೌರವ ಧನ ಪಡೆಯುತ್ತಿಲ್ಲ ಎಂದು ಶಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಭಾರತ ಟಿ20 ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ಆರ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ.

ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್,

ಮಾರ್ಗದರ್ಶಕ: ಮಹೇಂದ್ರ ಸಿಂಗ್ ಧೋನಿ

ಭಾರತದ ಟಿ 20 ವಿಶ್ವಕಪ್ ಪಂದ್ಯಗಳ ವೇಳಾಪಟ್ಟಿ ಹೀಗಿವೆ

24 ಅಕ್ಟೋಬರ್: ಭಾರತ vs ಪಾಕಿಸ್ತಾನ

31 ಅಕ್ಟೋಬರ್: ಭಾರತ vs ನ್ಯೂಜಿಲ್ಯಾಂಡ್

ನವೆಂಬರ್ 3: ಭಾರತ vs ಅಫ್ಘಾನಿಸ್ತಾನ

ನವೆಂಬರ್ 5: ಭಾರತ vs ಬಿ 1 (ಅರ್ಹತಾ ಸುತ್ತಿನಲ್ಲಿ ಗೆದ್ದ ತಂಡ)

ನವೆಂಬರ್ 8: ಭಾರತ vs A2 (ಅರ್ಹತಾ ಸುತ್ತಿನಲ್ಲಿ ಗೆದ್ದ ತಂಡ)

Exit mobile version