ಉದಯಪುರದಲ್ಲಿ ಹತ್ಯೆಗೈದವರಿಗೆ “ದೊಡ್ಡದಾಗಿ ಏನಾದರೂ ಮಾಡಿ” ಎಂದು ಪ್ರಚೋದಿಸಲಾಗಿತ್ತು : ಎನ್.ಎ.ಐ(NIA)

NIA

ರಾಜಸ್ಥಾನದ, ಉದಯಪುರ ಜಿಲ್ಲೆಯಲ್ಲಿ ಹಿಂದೂ ಟೈಲರ್ ಕನ್ಹಯ್ಯ ಅವರನ್ನು ಹತ್ಯೆಗೈದ (NIA Have udaipur killers in custody) ಆರೋಪಿಗಳ ಪ್ರಕರಣದ ತನಿಖೆಯನ್ನು ಅಧಿಕೃತವಾಗಿ ವಹಿಸಿಕೊಂಡ NIA.

ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಬ್ಬರು ಪ್ರಮುಖ ಆರೋಪಿಗಳಾದ ಮುಹಮ್ಮದ್ ರಿಯಾಜ್ ಮತ್ತು ಘೌಸ್ ಮುಹಮ್ಮದ್ (NIA Have udaipur killers in custody) ಇಬ್ಬರನ್ನು ಕಸ್ಟಡಿಗೆ ವಶಪಡಿಸಿಕೊಂಡು, ತನಿಖೆ ಆರಂಭಿಸಿದೆ.

ಶನಿವಾರ ಮುಂಜಾನೆ, ಎನ್ಐಎ ತಂಡವು ರಾಜಸ್ಥಾನದ ಅಜ್ಮೀರ್‌ನಲ್ಲಿರುವ ಹೈ ಸೆಕ್ಯುರಿಟಿ ಜೈಲಿಗೆ ತಲುಪಿ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದೆ. ಇದೀಗ ಅವರನ್ನು ಭಾರೀ ಭದ್ರತೆಯಲ್ಲಿ ಜೈಪುರಕ್ಕೆ ಕಳಿಸಲಾಗಿದೆ. https://vijayatimes.com/nail-biting-is-a-problem/

ಈ ಮಧ್ಯೆ ಗುಪ್ತಚರ ಮೂಲಗಳು ಸ್ಥಳೀಯ ಸುದ್ದಿವಾಹಿನಿಗೆ ಮಾಹಿತಿ ನೀಡಿದ್ದು, ಮುಹಮ್ಮದ್ ರಿಯಾಜ್ ಮತ್ತು ಘೌಸ್ ಮುಹಮ್ಮದ್ ಇಬ್ಬರನ್ನು ಪಾಕಿಸ್ತಾನ ಮೂಲದ ಹ್ಯಾಂಡ್ಲರ್ ಸಲ್ಮಾನ್ ಹೈದರ್ ಮತ್ತು ಅಬು ಇಬ್ರಾಹಿಂ ಎಂದು ಗುರುತಿಸಿದ್ದಾರೆ ಎಂದು ತಿಳಿದುಬಂದಿದೆ.

ನೂಪುರ್ ಶರ್ಮಾ(Nupur Sharma) ಅವರು ಪ್ರವಾದಿಯವರ ಬಗ್ಗೆ ಮಾಡಿದ ಹೇಳಿಕೆಗಳ ವಿವಾದದ ಹಿನ್ನೆಲೆಯಲ್ಲಿ ಹೈದರ್ ಮತ್ತು ಇಬ್ರಾಹಿಂ ಇಬ್ಬರು ಆರೋಪಿಗಳನ್ನು ದೊಡ್ಡ ದಾಳಿ ನಡೆಸಲು ಪ್ರಚೋದಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಟೈಲರ್ ಶಿರಚ್ಛೇದ ಮಾಡಿ ಆರೋಪಿಗಳು ಓಡಿಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಮೂಲಗಳ ಪ್ರಕಾರ, ಮುಹಮ್ಮದ್ ರಿಯಾಜ್ ಮತ್ತು ಘೌಸ್ ಮುಹಮ್ಮದ್ ಭಯೋತ್ಪಾದಕ ದಾಳಿಗಳನ್ನು ನಡೆಸಲು ಆರ್‌ಡಿಎಕ್ಸ್‌ನಂತಹ ಸ್ಫೋಟಕಗಳನ್ನು ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಇಬ್ಬರೂ ಸೇರಿ "ಏನಾದರೂ ದೊಡ್ಡದನ್ನು ಮಾಡಿ" ಎಂದು ಕುಮ್ಮಕ್ಕು ನೀಡಲಾಗಿದೆ ಎಂದು ಹೇಳಿದ್ದಾರೆ. ಮಂಗಳವಾರ ಕನ್ಹಯ್ಯಾ ಲಾಲ್‌ನ ಶಿರಚ್ಛೇದವನ್ನು ಮುಹಮ್ಮದ್ ರಿಯಾಜ್ ಮತ್ತು ಘೌಸ್ ಮುಹಮ್ಮದ್ ಎಂಬ ಇಬ್ಬರು ಸೇರಿ ಅಂಗಡಿಗೆ ನುಗ್ಗಿ ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡುವುದನ್ನು ವೀಡಿಯೋ ಮಾಡಿ, ಕೃತ್ಯದ ದೃಶ್ಯವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಅಪರಾಧ ನಡೆದ ಕೆಲವೇ ಗಂಟೆಗಳ ನಂತರ ಇಬ್ಬರೂ ಆರೋಪಿಗಳನ್ನು ರಾಜಸಮಂದ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಪಾಕಿಸ್ತಾನ ಮೂಲದ ಧಾರ್ಮಿಕ ಆಂದೋಲನವಾದ ದಾವತ್-ಎ-ಇಸ್ಲಾಮಿಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ.

ಕಟ್ಟುನಿಟ್ಟಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಭಯೋತ್ಪಾದನಾ ನಿಗ್ರಹ ದಳ ಮತ್ತು ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಬೆಂಬಲದೊಂದಿಗೆ ಎನ್‌ಐಎ ತನಿಖೆ ನಡೆಸುತ್ತಿದೆ. ಶುಕ್ರವಾರ, ಉದಯಪುರ ನ್ಯಾಯಾಲಯವು ಕೊಲೆ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಇನ್ನೂ ಮೂವರು ಶಂಕಿತರನ್ನು ಬಂಧಿಸಲಾಗಿದ್ದು, 10ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
Exit mobile version