ನಿಫಾ ವೈರಸ್ ಸ್ಪೋಟ ; 5 ಜನರಲ್ಲಿ ವೈರಸ್ ಧೃಡ ; ಸಂಪರ್ಕ ಪಟ್ಟಿಯಲ್ಲಿ 700ಕ್ಕೂ ಹೆಚ್ಚು ಜನ..!

Thiruvananthapuram: ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ಐದು ಜನರಲ್ಲಿ ನಿಫಾ ವೈರಸ್ (Nipah virus in kerala) ಇರುವುದು ಧೃಡಪಟ್ಟಿದ್ದು,

ಸುಮಾರು 700ಕ್ಕೂ ಹೆಚ್ಚು ಜನರು ಸಂಪರ್ಕ (Nipah virus in kerala) ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.

ಇನ್ನು ಕೇರಳದ ಖಾಸಗಿ ಆಸ್ಪತ್ರೆಯೊಂದರಲ್ಲಿ 24 ವರ್ಷದ ಆರೋಗ್ಯ ಕಾರ್ಯಕರ್ತೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದರಿಂದ ಕೇರಳದಲ್ಲಿ ಮತ್ತೊಂದು ನಿಪಾ ವೈರಸ್ ಪ್ರಕರಣ ಪತ್ತೆಯಾಗಿದೆ ಎಂದು ಕೇರಳ

ಆರೋಗ್ಯ ಸಚಿವ ವೀಣಾ ಜಾರ್ಜ್ (Veena George) ಹೇಳಿದ್ದಾರೆ. ಈ ಹಿಂದೆ ಕೋಯಿಕ್ಕೋಡ್ನ ಇಬ್ಬರು ಮೃತ ವ್ಯಕ್ತಿಗಳ ರಕ್ತದ ಮಾದರಿಗಳನ್ನು ತೆಗೆದುಕೊಂಡ ಪರೀಕ್ಷೆ ನಡೆಸಿದ್ದು, ಇಬ್ಬರಲ್ಲಿ ನಿಫಾ ವೈರಸ್

ಪತ್ತೆಯಾಗಿತ್ತು. ಇಬ್ಬರು ರೋಗಿಗಳು ಆಗಸ್ಟ್ 30 ಮತ್ತು ಸೆಪ್ಟೆಂಬರ್ 11 ರಂದು ಸಾವನ್ನಪ್ಪಿದ್ದರು. ನಂತರ, ಮೊದಲ ರೋಗಿಯ ಇಬ್ಬರು ಕುಟುಂಬ ಸದಸ್ಯರಲ್ಲಿಯೂ ನಿಫಾ ವೈರಸ್ ಪತ್ತೆಯಾಗಿದೆ.

ಸೋಂಕಿತ ರೋಗಿಗಳ ಸುಮಾರು 706 ಸಂಪರ್ಕಗಳನ್ನು ಇದುವರೆಗೆ ಪತ್ತೆಹಚ್ಚಲಾಗಿದೆ ಮತ್ತು ಅವರಲ್ಲಿ 153 ಆರೋಗ್ಯ ಕಾರ್ಯಕರ್ತರು ಎಂದು ವೀಣಾ ಜಾರ್ಜ್ ಹೇಳಿದ್ದಾರೆ.

ಇನ್ನು ಸೆಪ್ಟೆಂಬರ್ 11 ರಂದು ಸಾವನ್ನಪ್ಪಿದ ಎರಡನೇ ವ್ಯಕ್ತಿ, ಕೋಝಿಕ್ಕೋಡ್ ಆಸ್ಟರ್ ಮಲಬಾರ್ (Kozhikode Aster Malabar) ವೈದ್ಯಕೀಯ ವಿಜ್ಞಾನ ಸಂಸ್ಥೆ (MIMS) ತಲುಪುವ ಮೊದಲು ಐದು

ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು. ಸೆ.7ರಂದು ಆಯಂಚೇರಿಯಲ್ಲಿರುವ ಕುಟುಂಬ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದರು. ನಂತರ ಅವರು ಕೋಝಿಕ್ಕೋಡ್ನ ಇಕ್ರಾ ಆಸ್ಪತ್ರೆ, ವಿಲ್ಲಿಯಪ್ಪಲ್ಲಿಯ ಕುಟುಂಬ ಆರೋಗ್ಯ

ಕೇಂದ್ರ, ಜಿಲ್ಲಾ ಆಸ್ಪತ್ರೆ, ಖಾಸಗಿ ಕ್ಲಿನಿಕ್ ಮತ್ತು ವಡಕರದ ಸಹಕಾರಿ ಆಸ್ಪತ್ರೆಗೆ ಭೇಟಿ ನೀಡಿದರು. ಕೊನೆಗೆ ಅವರನ್ನೂ ಮಿಮ್ಸ್ ಗೆ ಕರೆದೊಯ್ದು ಅಲ್ಲಿಯೇ ಮೃತಪಟ್ಟಿದ್ದರು. ಹೀಗಾಗಿ ಈ ವ್ಯಕ್ತಿ ಭೇಟಿ ನೀಡಿದ

ಬಹುತೇಕ ಎಲ್ಲ ಕಡೆಯೂ ನಿಫಾ ವೈರಸ್ ಹರಡವ ಸಾಧ್ಯತೆಗಳಿವೆ ಎನ್ನಲಾಗಿದೆ.

ಕೇರಳದಲ್ಲಿ ನಿಫಾ ವೈರಸ್ ನಿಯಂತ್ರಣ ಕ್ರಮಗಳ ಭಾಗವಾಗಿ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಸೆಪ್ಟೆಂಬರ್ 14 ಮತ್ತು 15 ರಂದು ಮುಚ್ಚಲ್ಪಡುತ್ತವೆ. ಜಿಲ್ಲಾಡಳಿತವು ದೊಡ್ಡ ಸಭೆಗಳನ್ನು ಒಳಗೊಂಡ

ಯಾವುದೇ ಕಾರ್ಯಕ್ರಮಗಳು ಮತ್ತು ಕಾರ್ಯಗಳ ಮೇಲೆ ಹಲವಾರು ನಿರ್ಬಂಧಗಳನ್ನು ಘೋಷಿಸಿದೆ.

ಇದನ್ನು ಓದಿ: 1 ಲೀಟರ್‌ಗೆ 107 ಕಿಲೋಮೀಟರ್ ಓಡೋ ಕಾರು ಮಾಡುಕಟ್ಟೆಗೆ ಬಿಡುಗಡೆ: ಟೊಯೋಟಾದ Rav4 ಹೈಬ್ರಿಡ್ ವೈಶಿಷ್ಟ್ಯ ಏನು ಗೊತ್ತಾ?

Exit mobile version