ಮಮತಾ ಬ್ಯಾನರ್ಜಿ ಸಿಎಂ ಸ್ಥಾನಕ್ಕೆ ಲಾಯಕ್ಕಿಲ್ಲ ; ನಿರ್ಭಯಾ ತಾಯಿ!

westbengal

ನಾಡಿಯಾ(Nadia) ಜಿಲ್ಲೆಯಲ್ಲಿ ಅಪ್ರಾಪ್ತ ಯುವತಿಯ ಮೇಲಿನ ಅತ್ಯಾಚಾರ(Rape) ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾಳದ(West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಅವರನ್ನು ಅತ್ಯಾಚಾರದ ಬಗ್ಗೆ ಪ್ರಶ್ನಿಸಿದಾಗ ಅವರು ಕೊಟ್ಟ ಉತ್ತರ ಸದ್ಯ ಎಲ್ಲರ ಕೆಂಗಣಿಗೆ ಗುರಿಯಾಗಿದೆ. ಮಮತಾ ಬ್ಯಾನರ್ಜಿ ಅವರು ಕೊಟ್ಟ ಉತ್ತರಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಭಯಾ (2012ರ ದೆಹಲಿ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ) ಅವರ ತಾಯಿ, “ಅಕ್ರಮ ಉಲ್ಲಂಘನೆಯಾದ ಸಂತ್ರಸ್ತೆಯ ಬಗ್ಗೆ ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಅಂದ್ರೆ ಅವರು ಸಿಎಂ ಸ್ಥಾನಕ್ಕೆ ಅರ್ಹರಲ್ಲ” ಎಂದು ಹೇಳಿದ್ದಾರೆ.

ಒಬ್ಬ ಮಹಿಳೆಯಾಗಿ ಅವರು ಈ ರೀತಿ ಮಾತನಾಡುವುದು ಸರಿಯಲ್ಲ! ಇಂಥ ಮಾತುಗಳನ್ನು ಹೇಳುತ್ತಿದ್ದರೆ ಅದು ಅವರ ಹುದ್ದೆಗೆ ಸರಿಹೊಂದುವುದಿಲ್ಲ ಎಂದು ಹೇಳಿದ್ದಾರೆ. ಸಿಎಂ ಆಗಿ ಮಮತಾ ಬ್ಯಾನರ್ಜಿ ಅವರ ಹೇಳಿಕೆಯು ಅತ್ಯಾಚಾರವನ್ನೇ ಪ್ರಶ್ನಿಸಿದಂತಿದೆ ಎಂದು ಬೇಸರದಿಂದ ಮಾಧ್ಯಮಕ್ಕೆ ಹೇಳಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಯುವತಿ ಬಗ್ಗೆ ಪ್ರಶ್ನೆ ಉದ್ಭವಗೊಂಡ ಹಿನ್ನಲೆ, ಮಾತನಾಡಿದ ಅವರು ಅತ್ಯಾಚಾರದಿಂದ ಅಪ್ರಾಪ್ತ ಯುವತಿ ಇಂದು ಸಾವನ್ನಪ್ಪಿದ್ದಾಳೆ ಎಂದು ಅವರು ತೋರಿಸುತ್ತಿರುವ ಈ ಕಥೆಯನ್ನು ನೀವು ಅತ್ಯಾಚಾರ ಎಂದು ಕರೆಯುತ್ತೀರಾ? ಅವಳು ಗರ್ಭಿಣಿಯಾಗಿದ್ದಾಳೋ ಅಥವಾ ಪ್ರೇಮ ಸಂಬಂಧ ಹೊಂದಿದ್ದಾಳೋ?

ಇದರ ಬಗ್ಗೆ ಯಾರಾದರೂ ವಿಚಾರಿಸಿದ್ದಾರೆಯೇ? ಎಂದು ಕುಟುಕಿದ್ದಾರೆ. ನಾನು ಪೊಲೀಸರನ್ನು ಕೇಳಿದ್ದೇನೆ, ಅವರು ಈಗಾಗಲೇ ಆರೋಪಿಯನ್ನು ಬಂಧಿಸಿದ್ದಾರೆ. ಆ ಹುಡುಗಿಗೆ ಆ ಹುಡುಗನೊಂದಿಗೆ ಸಂಬಂಧವಿದೆ ಎಂಬುದು ಸ್ಪಷ್ಟವಾಗಿದೆ. “ಇದೊಂದು ಪ್ರೇಮ ಸಂಬಂಧ ಮತ್ತು ಕುಟುಂಬಕ್ಕೆ ಮುಂಚಿತವಾಗಿಯೇ ತಿಳಿದಿರುವುದು ದೃಢಪಟ್ಟಿದೆ. ಸಂಬಂಧದಲ್ಲಿದ್ದರೆ, ನಾನು ಅದನ್ನು ನಿಲ್ಲಿಸಬಹುದೇ? ಇದು ಯುಪಿ ಅಲ್ಲ, ನಾವು ಇಲ್ಲಿ ಲವ್ ಜಿಹಾದ್ ಮಾಡುವುದಿಲ್ಲ.

ಇದು ಅವರ ವೈಯಕ್ತಿಕ ಸ್ವಾತಂತ್ರ್ಯ! ಆದರೆ ಯಾವುದೇ ಅವ್ಯವಹಾರಗಳು ಕಂಡುಬಂದರೆ, ಪೊಲೀಸರು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತಾರೆ. ಒಬ್ಬ ಶಂಕಿತನನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಮಮತಾ ಬ್ಯಾನರ್ಜಿ ತಮ್ಮ ಹೇಳಿಕೆಯನ್ನು ಈ ರೀತಿ ಸಮರ್ಥಿಸಿಕೊಂಡರು. ಇದರ ಬೆನ್ನಲ್ಲೇ ಮಾತನಾಡಿದ ನಿರ್ಭಯ ಅವರ ತಾಯಿ ಈ ಪ್ರಕರಣ ಕುರಿತು ಶೀಘ್ರವೇ ಸೂಕ್ತ ತನಿಖೆ ನಡೆಯಬೇಕು ಮತ್ತು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು. ನನ್ನ ಮಗಳಿಗೆ ಬಂದ ಸ್ಥಿತಿ ಬೇರೆ ಯಾರಿಗೂ ಬರಬಾರದು ಎಂದು ನಿರ್ಭಯ ತಾಯಿ ಹೇಳಿದ್ದಾರೆ.

Exit mobile version