ಮುಸ್ಲಿಂಮರ ಮೇಲೆ ಬಾಂಬ್ ಹಾಕಿದ ಮನುಷ್ಯ ಅವ್ರ ರಕ್ಷಣೆ ಬಗ್ಗೆ ಮಾತಾಡೋದು ಹಾಸ್ಯಾಸ್ಪದ ; ಒಬಾಮಗೆ ನಿರ್ಮಲಾ ತಿರುಗೇಟು

New Delhi : ಮುಸ್ಲಿಂಮರ ಮೇಲೆ ಬಾಂಬ್ ಹಾಕಿ ಅವರ ಬದುಕನ್ನೇ ನಾಶಗೊಳಿಸಿದ ಮನುಷ್ಯ ಅವರ ರಕ್ಷಣೆ ಬಗ್ಗೆ (Nirmala hits back at Obama) ಮಾತಾಡೋದು ಹಾಸ್ಯಾಸ್ಪದ ಎಂದು

ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ನೀಡಿರುವ ಹೇಳಿಕೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾದ್ಯಮಗಳೊಂದಿಗೆ ಮತನಾಡಿದ ನಿರ್ಮಲಾ ಸೀತಾರಾಮನ್ ಅವರು, ನಮ್ಮ ಸರ್ಕಾರ ʻಸಬ್ಕಾ ಸಾಥ್, ಸಬ್ಕಾ ವಿಕಾಸ್ʼ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ.

ಇದನ್ನು ಓದಿ : ಮೋದಿ ಯುಎಸ್ ಭೇಟಿ ; ಮೇಕ್ ಇನ್ ಇಂಡಿಯಾ ಯೋಜನೆಗೆ ಭಾರೀ ಉತ್ತೇಜನ

ಅದಕ್ಕೆ ಅಮೇರಿಕಾದಲ್ಲಿ ನಡೆದ ಕಾರ್ಯಕ್ರಮವೇ ಸಾಕ್ಷಿ. ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತರಾಗಿದ್ದಾರೆ. ನಾವು ಎಲ್ಲರಿಗೂ ಸಮಾನ ಅವಕಾಶ ನೀಡಿದ್ದೇವೆ. ಆದರೆ ಭಾರತದಲ್ಲಿ ಅಲ್ಪಸಂಖ್ಯಾತರ ರಕ್ಷಣೆ

ಬಗ್ಗೆ ಮಾತನಾಡುವ ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಅಧಿಕಾರಾವಧಿಯಲ್ಲೇ 6 ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಮೇಲೆ ಬಾಂಬ್ ದಾಳಿ ನಡೆದಿತ್ತು.

ಸುಮಾರು 26,000ಕ್ಕೂ ಹೆಚ್ಚು ಬಾಂಬ್ಗಳನ್ನು ಅವರ ಮೇಲೆ ಹಾಕಲಾಗಿತ್ತು ಎಂದು ಒಬಾಮ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಇನ್ನು 6 ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಮೇಲೆ 26,000ಕ್ಕೂ ಹೆಚ್ಚು ಬಾಂಬ್ ದಾಳಿ ನಡೆದ ವ್ಯಕ್ತಿ ಮೋದಿ ಬಗ್ಗೆ ಅಲ್ಪ ಸಂಖ್ಯಾತರ ರಕ್ಷಣೆ ಬಗ್ಗೆ ಆರೋಪ ಮಾಡಿದರೆ ಯಾರು ನಂಬುತ್ತಾರೆ?

ಮೋದಿ ಅವರಿಗೆ ನೀಡಲಾದ ವಿದೇಶಿ ದೇಶಗಳಿಂದ ಸಿಕ್ಕಿರುವ 13 ಗೌರವಗಳಲ್ಲಿ 6 ಗೌರವಗಳು ಮುಸ್ಲಿಂ ದೇಶಗಳಿಂದ ನೀಡದವುಗಳೇ ಆಗಿವೆ.

ಯಾವುದೇ ಆಧಾರವಿಲ್ಲದೇ ಆರೋಪ ಮಾಡುತ್ತಿರುವುದು ಕೇವಲ ಪ್ರಚಾರಕ್ಕಾಗಿ ಎಂದು (Nirmala hits back at Obama) ಟೀಕಿಸಿದ್ದಾರೆ.

ಒಬಾಮ ಹೇಳಿದ್ದೇನು..?
ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ಅವರ ಆಹ್ವಾನದ ಮೇರೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ದಿನಗಳ ಸ್ಟೇಟ್ ವಿಸಿಟ್ ಕೈಗೊಂಡಿದ್ದರು.

ಈ ವೇಳೆ ಅಮೇರಿಕಾದ ಮಾಜಿ ಅಧ್ಯಕ್ಷ ಒರಾಕ್ ಒಬಾಮ, ಮೋದಿಯವರೊಂದಿಗೆ ಚರ್ಚೆಯ ವೇಳೆ ಭಾರತದಲ್ಲಿ ಅಲ್ಪಸಂಖ್ಯಾತರ ರಕ್ಷಣೆ ವಿಷಯವನ್ನ ಪ್ರಸ್ತಾಪಿಸಬೇಕಿತ್ತು ಎಂದು ಹೇಳಿದ್ದರು.

ಅವರ ಈ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿತ್ತು.

Exit mobile version