ವಿತ್ತ ಸಚಿವೆ ನಿರ್ಮಲಾ ಆಸ್ತಿ 2.5 ಕೋಟಿ, ಜೆಡಿಎಸ್‍ನ ಕುಪೇಂದ್ರ ರೆಡ್ಡಿ 817 ಕೋಟಿ!

Politics

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ(RajyaSabha) ನಾಲ್ಕು ಸ್ಥಾನಗಳಿಗೆ ಚುನಾವಣೆ(Election) ನಡೆಯುತ್ತಿದೆ.

ಈಗಾಗಲೇ ಮೂರು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಎಲ್ಲ ಅಭ್ಯರ್ಥಿಗಳ ನಾಮಪತ್ರ ಸ್ವೀಕೃತವಾಗಿವೆ. ಜೂನ್ 10ರಂದು ಮತದಾನ ನಡೆಯಲಿದೆ. ಇನ್ನು ಎಲ್ಲ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರಗಳನ್ನು ನಾಮಪತ್ರದ ವೇಳೆ ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿರುವ ಹಣಕಾಸು ಸಚಿವೆ(Finance Minister) ನಿರ್ಮಲಾ ಸೀತಾರಾಮನ್(Nirmala Sitharaman) ಅವರ ಒಟ್ಟು ಆಸ್ತಿ 2.5 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ. ಅವರು ಸ್ವಂತ ಕಾರು ಹೊಂದಿಲ್ಲ, 2001ರ ಮಾಡೆಲ್‍ನ ಬಜಾಜ್ ಚೇತಕ್(Bajaj Chethak) ದ್ವಿಚಕ್ರ ವಾಹನವಿದೆ.

ಆಂಧ್ರಪ್ರದೇಶದ(AndraPradesh) ರಂಗಾರೆಡ್ಡಿ ಜಿಲ್ಲೆಯಲ್ಲಿ 4800 ಚದರ್ ಅಡಿ ಕೃಷಿಯೇತರ ಭೂಮಿ ಹೊಂದಿದ್ದು, 310 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ನಾಮಪತ್ರದಲ್ಲಿ ತಿಳಿಸಿದ್ದಾರೆ. ಇನ್ನು ನಿರ್ಮಲಾ ಸೀತಾರಾಮನ್ ಅವರು 2016ರಲ್ಲಿ ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವಾಗ ತಮ್ಮ ಬಳಿ 1.35 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು. ಅವರ ಒಟ್ಟು ಆಸ್ತಿಯಲ್ಲಿ ಏರಿಕೆ ಕಂಡು ಬಂದಿಲ್ಲ. ಚಿರಾಸ್ತಿಗಳ ಮೌಲ್ಯ ವೃದ್ದಿಸಿದೆ.

ಇನ್ನು ಜೆಡಿಎಸ್(JDS) ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರು 817 ಕೋಟಿ ರೂ.ಗಳ ಒಡೆಯರಾಗಿದ್ದಾರೆ. ಈ ಹಿಂದೆ ಒಂದು ಬಾರಿ ಅವರು ಜೆಡಿಎಸ್‍ನಿಂದ ರಾಜ್ಯಸಭಾ ಸದಸ್ಯರಾಗಿದ್ದರು. ಇನ್ನು 2016ರಲ್ಲಿ ಕುಪೇಂದ್ರ ರೆಡ್ಡಿ ಅವರ ಆಸ್ತಿ 462 ಕೋಟಿ ರೂ. ಇತ್ತು. ಆದರೆ ಇದೀಗ 817 ಕೋಟಿ ರೂ.ಗಳಿಗೆ ಏರಿಕೆಯಾಗಿದ್ದು, ಶೇ 76ರಷ್ಟು ಹೆಚ್ಚಳವಾಗಿದೆ. 2022ರಲ್ಲಿ ಕುಪೇಂದ್ರ ರೆಡ್ಡಿ ಅವರು 417 ಕೋಟಿ ಚರಾಸ್ತಿ ಮತ್ತು 399 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ.

ಇನ್ನು ಕುಪೇಂದ್ರ ರೆಡ್ಡಿ ಅವರು ಮೂಲಸೌಕರ್ಯ ಅಭಿವೃದ್ದಿಗಾರನೆಂದು ಘೋಷಿಸಿಕೊಂಡಿದ್ದು, ಈ ಬಾರಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲೇ ಅತ್ಯಂತ ಶ್ರೀಮಂತರಾಗಿದ್ದಾರೆ.

Exit mobile version