5G ನಮ್ಮ ಸ್ವಂತ ಉತ್ಪನ್ನ, ಇತರೆ ದೇಶಗಳಿಗೆ ನಾವು ಅದನ್ನು ಒದಗಿಸಬಹುದು : ನಿರ್ಮಲಾ ಸೀತಾರಾಮನ್

5g

Washington : ಭಾರತವು (India) ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ 5G ಮೂಲಸೌಕರ್ಯ ಸಂವಹನವನ್ನು ಪ್ರಾರಂಭಿಸಿದೆ ಮತ್ತು ಅದನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿದೆ,

ಎಂದು ಕೇಂದ್ರ ಹಣಕಾಸು ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಹೇಳಿದ್ದಾರೆ.

ಅಮೇರಿಕಾದ (America) ವಾಷಿಂಗ್ಟನಲ್ಲಿರುವ “ಜಾನ್ಸ್ ಹಾಪ್ಕಿನ್ಸ್ ಸ್ಕೂಲ್ ಆಫ್ ಅಡ್ವಾನ್ಸ್ಡ್ ಇಂಟರ್ನ್ಯಾಷನಲ್ ಸ್ಟಡೀಸ್”ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು,

“ಭಾರತದ 5G ಸಾಹಸಗಾಥೆಯ ಇನ್ನೂ ಸಾರ್ವಜನಿಕರನ್ನು (Nirmala Sitharaman About 5G) ತಲುಪಿಲ್ಲ. ನಮ್ಮ ದೇಶದಲ್ಲಿ ನಾವು ಪ್ರಾರಂಭಿಸಿರುವ 5G ಸಂಪೂರ್ಣವಾಗಿ ದೇಶಿಯವಾಗಿದ್ದು, ಸ್ವತಂತ್ರವಾಗಿದೆ.

https://youtu.be/GFOcWGkF8C8

ನಮ್ಮ 5G ಬೇರೆಡೆಯಿಂದ ಆಮದು ಮಾಡಿಕೊಂಡಿಲ್ಲ. ಇದು ನಮ್ಮದೇ ಉತ್ಪನ್ನವಾಗಿದೆ (Nirmala Sitharaman About 5G) ಎಂದು ಹೇಳಿದ್ದಾರೆ. ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,

ಕೆಲವು ಭಾಗಗಳು ದಕ್ಷಿಣ ಕೊರಿಯಾದಂತಹ ದೇಶಗಳಿಂದ ಬರಬಹುದು, ಆದರೆ ತಾಂತ್ರಿಕತೆ ಸಂಪೂರ್ಣ ದೇಶೀಯವಾಗಿದೆ.

ಇದನ್ನೂ ಓದಿ : https://vijayatimes.com/smriti-irani-supports-18-year-old-girl/

ಆದ್ದರಿಂದ ಸಂಪೂರ್ಣ ಸ್ವದೇಶಿ ತಂತ್ರಜ್ಞಾನವನ್ನು ಬಳಸಿ ನಾವು 5G ರೂಪಿಸಿದ್ದೇವೆ. ಇದು ನಮ್ಮದೇ ಉತ್ಪನ್ನವಾಗಿದೆ, ಹೀಗಾಗಿ ನಾವು ಇದನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ. ಈ ಬಗ್ಗೆ ಭಾರತವು ಉತ್ಸುಕವಾಗಿದೆ ಎಂದು ಸೀತಾರಾಮನ್ ಹೇಳಿದ್ದಾರೆ.

ಇನ್ನು 5G ಸೇವೆಗಳನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಭಾರತದ ಆಯ್ದ ನಗರಗಳಲ್ಲಿ ಪ್ರಾರಂಭಿಸಿದರು. 2024ರ ವೇಳೆಗೆ ಇಡೀ ರಾಷ್ಟ್ರವನ್ನು 5G ಆವರಿಸುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

5G ರೂಪಿಸುವಲ್ಲಿ ಭಾರತದ ಸಾಧನೆಗಳ ಬಗ್ಗೆ ನಾವು ಅಪಾರವಾಗಿ ಹೆಮ್ಮೆಪಡಬಹುದು ಎಂದು ನಾನು ಭಾವಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
Exit mobile version