ಹಾರ್ಸ್ ರೇಸಿಂಗ್(Horse Racing) ಮೇಲೆ ಜಿಎಸ್‌ಟಿ(GST) ಹೇರುವ ಕುರಿತು ಹಣಕಾಸು ಸಚಿವೆ(Finance Minister) ನಿರ್ಮಲಾ ಸೀತಾರಾಮನ್(Nirmala Sitharaman) ಮಾತನಾಡುವಾಗ ಬಾಯ್ತಪ್ಪಿ ಹಾರ್ಸ್ ರೇಸಿಂಗ್ ಬದಲು ಹಾರ್ಸ್ ಟ್ರೇಡಿಂಗ್(Horse Trading) ಎಂದು ಹೇಳಿದ್ದಾರೆ. ಇದಾದ ಬಳಿಕ ಸರಿಪಡಿಸಿಕೊಂಡು ಮಾತನ್ನು ಮುಂದುವರೆಸಿದ ಸಚಿವೆ ನಿರ್ಮಲಾ ಸೀತಾರಾಮನ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಆ ವೀಡಿಯೋದಲ್ಲಿ ವಿತ್ತ ಸಚಿವೆ ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಳ್ಳುವ ಮುನ್ನ “ಕುದುರೆ ರೇಸಿಂಗ್” ಬದಲಿಗೆ “ಕುದುರೆ ವ್ಯಾಪಾರ” ಎಂದು ಹೇಳುವುದನ್ನು ಕೇಳಬಹುದು. ಸಚಿವರ ಫಾಕ್ಸ್ ಪಾಸ್ ಬಗ್ಗೆ ಪ್ರತಿಕ್ರಿಯಿಸಲು ಹಲವಾರು ನಾಯಕರು ಟ್ವಿಟ್ಟರ್‌ಗೆ ಹೋಗುತ್ತಿದ್ದಂತೆ, ಪ್ರತ್ಯೇಕವಾಗಿ ಈ ವೀಡಿಯೊವನ್ನು ವಿರೋಧ ಪಕ್ಷಗಳದವರು ಟ್ರೋಲ್ ಮಾಡಿದ್ದಾರೆ. ಈ ವೀಡಿಯೊಗಳನ್ನು ಉದ್ದೇಶಿಸಿ ಹಲವರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಅವರು ಬಿಜೆಪಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ, “ನಿರ್ಮಲಾ ಸೀತಾರಾಮನ್ ಜಿ ಅವರಿಗೆ ದೊಡ್ಡದಾಗಿ ಯೋಚಿಸುವ ಸಾಮರ್ಥ್ಯವಿದೆ ಎಂಬುದು ನನಗೆ ತಿಳಿದಿತ್ತು” ಎಂದು ಹೇಳಿ ಟ್ವೀಟ್ ಮಾಡಿದ್ದಾರೆ. ಇನ್ನು ಕಾಂಗ್ರೆಸ್ ಕಾರ್ಯದರ್ಶಿ ವಿನೀತ್ ಪುನಿಯಾ ಕೂಡ ಈ ವಿಡಿಯೋವನ್ನು ಟ್ವೀಟ್ ಮಾಡಿ, “ಕುದುರೆ ವ್ಯಾಪಾರದ ಮೇಲೆ ಜಿಎಸ್‌ಟಿ ವಿಧಿಸುವ ನಿರ್ಮಲಾ ಸೀತಾರಾಮನ್ ಜಿ ಅವರ ಪ್ರಸ್ತಾಪವನ್ನು ನಾವು ಸ್ವಾಗತಿಸುತ್ತೇವೆ” ಎಂದು ಹೇಳಿದ್ದಾರೆ.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, “ಸತ್ಯ ಹೊರಬಿದ್ದಿದೆಯೇ? ಕುದುರೆ ವ್ಯಾಪಾರದ ಮೇಲೆ ಜಿಎಸ್‌ಟಿ!” ಭಾರತೀಯ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ಕೂಡ ವಿಡಿಯೋ ಕುರಿತು ಪ್ರತಿಕ್ರಿಯಿಸಿದ್ದಾರೆ. ಇದೇ ರೀತಿ ನಿರ್ಮಲಾ ಸೀತಾರಾಮನ್ ಅವರು ಮಾತನಾಡಿರುವ ಆ ಒಂದು ತುಣುಕಿನ ವೀಡಿಯೊವನ್ನು ಪದೇ ಪದೇ ಟ್ರೋಲ್ ಮಾಡಿ ಟೀಕಿಸಲಾಗುತ್ತಿದೆ.