ಪ್ರತಿಪಕ್ಷಗಳು ಒಗ್ಗಟ್ಟಿನ ಕನಸು ಕಾಣುತ್ತವೆ ; ಆದರೆ ಮೋದಿ ವಿರುದ್ಧ ಯಾರು?

BJP

Bihar : “ಬಿಹಾರಿಗಳು(Bihar) ನಿತೀಶ್ ಕುಮಾರ್(Nithish Kumar) ಎಂದು ಹೇಳುತ್ತಾರೆ, ಬೆಂಗಾಲಿಗಳು ಮಮತಾ ಬ್ಯಾನರ್ಜಿ(Mamata Banerjee) ಎಂದು ಹೇಳುತ್ತಾರೆ, ದೆಹಲಿಯವರು ಅರವಿಂದ್ ಕೇಜ್ರಿವಾಲ್(Aravind Kejrival) ಎಂದು ಹೇಳುತ್ತಾರೆ ಮತ್ತು ದಕ್ಷಿಣ ಭಾರತೀಯರು ಕೆಸಿಆರ್ ಎಂದು ಹೇಳುತ್ತಾರೆ.

ಅವರು ತಮ್ಮ ನಡುವೆಯೇ ಹೋರಾಡುತ್ತಾರೆ ಮತ್ತು 2024 ರಲ್ಲಿ ನರೇಂದ್ರ ಮೋದಿ(Narendra Modi) ಅವರು ಮತ್ತೆ ಪ್ರಧಾನಿಯಾಗುತ್ತಾರೆ.” ಬಿಜೆಪಿ ಪರ ವ್ಯಕ್ತಿಯೊಬ್ಬರು ಇತ್ತೀಚೆಗೆ ಟ್ವಿಟರ್ನಲ್ಲಿ(Twitter) ಹೀಗೆಂದು ಪೋಸ್ಟ್ ಮಾಡಿದ್ದರು. ಈ ಒಂದು ಪೋಸ್ಟ್ ಇಡೀ ಭಾರತದ ರಾಜಕೀಯ ಚಿತ್ರಣವನ್ನು ‌ತೆರೆದಿಡುತ್ತದೆ.

ಇತ್ತೀಚೆಗೆ ಬಿಜೆಪಿಯೊಂದಿಗಿನ ಮೈತ್ರಿಕೂಟದಿಂದ ಹೊರನಡೆದ ನಿತೀಶ್‌ ಕುಮಾರ್‌ ಅವರು, 2024ರ ಲೋಕಸಭಾ ಚುನಾವಣೆಯ(Loksabha Election) ತಯಾರಿಗಾಗಿ ದೇಶದ ಅನೇಕ ರಾಜ್ಯಗಳಿಗೆ ಭೇಟಿ ನೀಡಿ, ಪ್ರಾದೇಶಿಕ ನಾಯಕರನ್ನು ನರೇಂದ್ರ ಮೋದಿ ವಿರುದ್ದ ಒಗ್ಗೂಡಿಸುವ ಪ್ರಯತ್ನ ನಡೆಸಿದ್ದಾರೆ.

ಇದನ್ನೂ ಓದಿ : https://vijayatimes.com/man-eats-metal-and-glass/

ಅದರ ಭಾಗವಾಗಿ ಬಂಗಾಳದ ಮಮತಾ ಬ್ಯಾನರ್ಜಿ, ತೆಲಂಗಾಣದ ಕೆಸಿಆರ್‌, ಕರ್ನಾಟಕದ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಿಪಿಐ(ಎಂ)ನ ಸೀತಾರಾಂ ಯೆಚೂರಿ ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.

ಇನ್ನು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಮಾದ್ಯಮಗೋಷ್ಠಿಯಲ್ಲಿ ಪತ್ರಕರ್ತರು “ಮುಂಬರುವ ಲೋಕಸಭಾ ಚುಣಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ಯಾರು ಎದುರಾಳಿಯಾಗಲಿದ್ದಾರೆ?” ಎಂದು ಪ್ರಶ್ನಿಸಿದಾಗ, ಈ ಪ್ರಶ್ನೆಯಿಂದ ಕಸಿವಿಸಿಗೊಂಡ ನಿತೀಶ್‌ ಕುಮಾರ್‌ ಅವರು ಪ್ರಶ್ನೆಗೆ ಯಾವುದೇ ನಿಖರ ಉತ್ತರ ನೀಡದೇ ಜಾರಿಕೊಂಡರು.

ಸದ್ಯದ ಮಟ್ಟಿಗೆ ಮೋದಿ ವಿರುದ್ದ ಸಂಘಟಿತಗೊಳ್ಳುತ್ತಿರುವ ಪ್ರಾದೇಶಿಕ ನಾಯಕರಿಗೆ ಮೋದಿ ವಿರುದ್ದ ಯಾರು? ಎಂಬ ಪ್ರಶ್ನೆ ಕಾಡುತ್ತಿದೆ. ಪ್ರಾದೇಶಿಕ ನಾಯಕರ ಶಕ್ತಿ ಸೀಮಿತವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಅವರು ನಾಯಕರಾಗಿ ಜನಮನ್ನಣೆ ಗಳಿಸುವುದು ಕಷ್ಟಸಾಧ್ಯ.

ಇನ್ನು ರಾಷ್ಟ್ರೀಯ ಮಟ್ಟದಲ್ಲಿ ಒಗ್ಗಟ್ಟಿನ ಮತ್ರ ಪಠಿಸುವ ನಾಯಕರು ಪ್ರಾದೇಶಿಕವಾಗಿ ಪ್ರತಿಸ್ಪರ್ಧಿಗಳಾಗಿದ್ದಾರೆ. ಕೆಸಿಆರ್‌ ತೆಲಂಗಾಣದಲ್ಲಿ, ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಕೇರಳದಲ್ಲಿ ಎಲ್‌ಡಿಎಫ್ ಕಾಂಗ್ರೆಸ್‌ ವಿರುದ್ದ ಹೋರಾಟ ಮಾಡಬೇಕಿದೆ. ಆದರೆ ರಾಷ್ಟ್ರೀಯ ಮಟ್ಟದಲ್ಲಿ ಇವರೆಲ್ಲರೂ ಒಗ್ಗಟ್ಟಿನ ಬಗ್ಗೆ ಮಾತನಾಡುತ್ತಾರೆ.

ಇದನ್ನೂ ಓದಿ : https://vijayatimes.com/rajasthan-widow-women-got-educated-and-remarried/

ಬಿಜೆಪಿಯು 2014 ಮತ್ತು 2019ರ ಲೋಕಸಭಾ ಚುಣಾವಣೆಯಲ್ಲಿ ಗೆಲುವು ಸಾಧಿಸಲು ಮುಖ್ಯ ಕಾರಣ ಪ್ರಾದೇಶಿಕ ಪಕ್ಷಗಳ ನಡುವಿನ ಬಿರುಕು. ಇದನ್ನೇ ಬಂಡವಾಳ ಮಾಡಿಕೊಳ್ಳುವ ಬಿಜೆಪಿ, ರಾಜ್ಯವಾರು ವಿಭಿನ್ನ ತಂತ್ರಗಳ ಮೂಲಕ ಯಶಸ್ಸು ಸಾಧಿಸುತ್ತದೆ. ಹೀಗಾಗಿಯೇ ಪ್ರತಿಪಕ್ಷಗಳು ಒಗ್ಗಟ್ಟಿನ ಕನಸು ಕಾಣುತ್ತವೆ. ಆದರೆ ಮೋದಿ ವಿರುದ್ಧ ಯಾರು? ಎಂಬ ಪ್ರಶ್ನೆಗೆ ವಿಪಕ್ಷ ನಾಯಕರ ಬಳಿಯೂ ಸ್ಪಷ್ಟ ಉತ್ತರವಿಲ್ಲ.

Exit mobile version