ಭಾನುವಾರ, ಸೋಮವಾರ ಪ್ರವಾಸಿಗರಿಗೆ ನಂದಿಬೆಟ್ಟ ಮತ್ತು ಸ್ಕಂದಗಿರಿಗೆ 2 ದಿನ ಪ್ರವೇಶ ಇಲ್ಲ

Chikkaballapur: ನೀವೇನಾದ್ರೂ ಈ ಭಾನುವಾರ ಮತ್ತು ಸೋಮವಾರ ನಂದಿಬೆಟ್ಟಕ್ಕೆ ಪ್ರವಾಸ ಹೋಗುವ ಪ್ಲಾನ್ ಮಾಡಿದ್ದೀರಾ? ಹಾಗಾಗ್ರೆ ಆ ಪ್ಲಾನ್ ಅನ್ನು ಅನಿವಾರ್ಯವಾಗಿ ಇಂದೇ ಕ್ಯಾನ್ಸಲ್ (Cancel) ಮಾಡಿ. ಈ ಭಾನುವಾರ ಮತ್ತು ಸೋಮವಾರ ನಂದಿಬೆಟ್ಟ ಹಾಗೂ ಸ್ಕಂದಗಿರಿಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ರಾಷ್ಟಪತಿ ದ್ರೌಪದಿ ಮುರ್ಮು (Draupadi Murmu) ಅವರು ಸತ್ಯಸಾಯಿ ಗ್ರಾಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಂದ ಪ್ರವಾಸಿ ತಾಣವಾದ ನಂದಿಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.

ಭಾನುವಾರ ಮತ್ತು ಸೋಮವಾರ ಈ ಎರಡು ದಿನಗಳ ಕಾಲ ವಿಶ್ವ ವಿಖ್ಯಾತ ನಂದಿ ಗಿರಿಧಾಮ ಹಾಗೂ ಸ್ಕಂದಗಿರಿ (Skandagiri) ಬೆಟ್ಟಗಳಿಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಬೇಕೆಂದು ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಸೋಮವಾರ ಮುದ್ದೇನಹಳ್ಳಿಗೆ (Muddenahalli) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುತ್ತಿರುವ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಜುಲೈ 2 ಭಾನುವಾರ ಬೆಳಿಗ್ಗೆ 6 ರಿಂದ ಜುಲೈ 3 ಸೋಮವಾರ ಸಂಜೆ 6 ಗಂಟೆಯವರೆಗೆ ನಂದಿಬೆಟ್ಟ ಹಾಗೂ ಸ್ಕಂದಗಿರಿ ಬೆಟ್ಟಕ್ಕೆ ನಿರ್ಬಂಧ ವಿಧಿಸಿದೆ.

ಈಗಾಗಿ ಎರಡು ದಿನಗಳ ಕಾಲ ಗಿರಿಧಾಮಗಳತ್ತ ಪ್ರವಾಸಿಗರು ಆಗಮಿಸದಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ ಏನ್ ರವೀಂದ್ರ (P.N Ravindra) ರವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ವಾರಾಂತ್ಯಕ್ಕೆ ಬೆಂಗಳೂರಿನ ಜನರಿಗೆ ಹತ್ತಿರದಲ್ಲಿರುವ ನಂದಿ ಬೆಟ್ಟ ಹಾಗೂ ಸ್ಕಂದಗಿರಿ ಬೆಟ್ಟಗಳು hot favourite ತಾಣಗಳಾಗಿದ್ದು ಆದರೆ ಈ ಭಾನುವಾರದಿಂದ ಅಂದರೆ ನಾಳೆಯಿಂದ ಈ ಎರಡು ಗಿರಿಧಾಮಗಳಿಗೆ ಪ್ರವೇಶ ನಿರ್ಭಂಧಿಸಲಾಗಿದೆ.

ಜುಲೈ 3 ಸೋಮವಾರದಂದು ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವದಲ್ಲಿ ಭಾಗವಹಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುತ್ತಿರುವ ಕಾರಣ ಸತ್ಯಸಾಯಿ ಗ್ರಾಮವಿರುವ ನಂದಿ ಹೋಬಳಿಯಲ್ಲಿ ಈ ಎರಡು ಪ್ರಸಿದ್ಧಿ ಪ್ರವಾಸ ತಾಣಗಳನ್ನು ಸಾರ್ವಜನಿಕರಿಗೆ ನಿರ್ಭಂಧಿಸಲಾಗಿದೆ ಎಂದು ಜಿಲ್ಲಧಿಕಾರಿಗಳು ತಿಳಿಸಿದ್ದಾರೆ…

ಭವ್ಯಶ್ರೀ ಆರ್. ಜೆ

Exit mobile version