ಪ್ರಧಾನಿ ಮೋದಿ ಅವರ ಭದ್ರತಾ ಕವಚದಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ : ಡಿಸಿಪಿ

Hubbali : ಪ್ರಧಾನಿ ನರೇಂದ್ರ ಮೋದಿ (no lapse modi’s security cover) ಅವರ ರೋಡ್‌ಶೋ ವೇಳೆ ಯುವಕನೊಬ್ಬ ಬ್ಯಾರಿಕೇಡ್‌ ಹಾರಿ ಬಂದಿದ್ದಕ್ಕೆ ಪೊಲೀಸ್‌ ತಂಡವನ್ನು ದೂಷಿಸಿದವರಿಗೆ

ಹುಬ್ಬಳ್ಳಿ-ಧಾರವಾಡ ಪೊಲೀಸರು ಪ್ರಧಾನಿ ಅವರ ಭದ್ರತಾ ಕವಚದಲ್ಲಿ ಯಾವುದೇ ರೀತಿಯ (no lapse modi’s security cover) ಲೋಪವಾಗಿಲ್ಲ ಎಂದು ಹೇಳಿದ್ದಾರೆ.

ಹುಬ್ಬಳ್ಳಿ (Hubli) ನಗರದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಯುವಜನೋತ್ಸವದ ಉದ್ಘಾಟನಾ ಸಮಾರಂಭದ ಪೂರ್ವಭಾವಿಯಾಗಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ಶೋ (Road show) ವೇಳೆ

ಯುವಕನೊಬ್ಬ ಬ್ಯಾರಿಕೇಡ್‌ ಹಾರಿ ಬಂದಿದ್ದಕ್ಕೆ ಪೊಲೀಸ್‌ ತಂಡವನ್ನು ದೂಷಿಸಿದವರಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸರು ಪ್ರಧಾನಿ ಅವರ ಭದ್ರತಾ ಕವಚದಲ್ಲಿ ಯಾವುದೇ ರೀತಿಯ ಲೋಪವಾಗಿಲ್ಲ ಎಂದು ಹೇಳುವ

ಮೂಲಕ ಆರೋಪವನ್ನು ನಿರಾಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ವೇಳೆ ಯುವಕನೊಬ್ಬ ಬ್ಯಾರಿಕೇಡ್ ಹಾರಿ, ಪ್ರಧಾನಿ ಮೋದಿ ಅವರ ಕಾರಿನತ್ತ ಓಡಿ ಬಂದಿದ್ದಾನೆ.

ಈ ಬಗ್ಗೆ ಪೊಲೀಸ್‌ ಭದ್ರತಾ ಕವಚದಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ಹಲವರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೇ ನೀಡಿದ ಹುಬ್ಬಳ್ಳಿ-ಧಾರವಾಡದ ಅಪರಾಧ ವಿಭಾಗದ ಡಿಸಿಪಿ ಗೋಪಾಲ್

ಬ್ಯಾಕೋಡ್ (DCP Gopal Byakod) ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಅವರ ಭದ್ರತಾ ಕವಚದಲ್ಲಿ ಅಂತಹ ಯಾವುದೇ ಉಲ್ಲಂಘನೆಯಾಗಿಲ್ಲ. ಪ್ರಧಾನಿ ಮೋದಿಯವರ ರೋಡ್‌ಶೋನಲ್ಲಿ ವ್ಯಕ್ತಿಯೊಬ್ಬರು

ಹಾರ ಹಾಕಲು ಪ್ರಯತ್ನಿಸಿದರು. ನಾವು ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ ಎಂದು ಸುದ್ದಿ ಸಂಸ್ಥೆ ಎಎನ್‌ಐಗೆ(ANI) ತಿಳಿಸಿದ್ದಾರೆ.

ಆ ಹುಡುಗ ಬಂದ ಸ್ಥಳದಿಂದ, ವಿಶೇಷ ರಕ್ಷಣಾ ಗುಂಪು(SPG) ಸರಿಯಾಗಿ ತಪಾಸಣೆಗೆ ಒಳಪಡಿಸಿದೆ ಮತ್ತು ಇಡೀ ಪ್ರದೇಶವನ್ನು ಭದ್ರತಾ ಏಜೆನ್ಸಿಗಳು ಸರಿಯಾಗಿ ಪರಿಶೀಲಿಸಿದೆ ಎಂದು ಮೂಲಗಳು ANIಗೆ ತಿಳಿಸಿವೆ.

ಇದು ಗಂಭೀರ ಲೋಪವಲ್ಲ ಎಂದು ಹೇಳಿರುವುದು ಖಚಿತವಾಗಿದೆ. ಯುವಕ ಓಡಿ ಬಂದು ಮೋದಿ ಅವರಿಗೆ ಹಾರವನ್ನು ಹಾಕಲು ಬಂದಾಗ ಮೋದಿ ಅವರು ಕೈ ಚಾಚಿದರೂ ಯುವಕನನ್ನು ತಲುಪಲು ಸಾಧ್ಯವಾಗಲಿಲ್ಲ.

ಪ್ರಧಾನಿ ಅವರ ಜೊತೆಗಿದ್ದ ಭದ್ರತಾ ಸಿಬ್ಬಂದಿಗಳು ಯುವಕನಿಂದ ಹಾರ ಪಡೆದು ಪ್ರಧಾನಿಗೆ ನೀಡಿದ್ದಾರೆ.

ಇದನ್ನೂ ಓದಿ: https://vijayatimes.com/kcr-fierce-attack-against-bjp/

ಯುವಕ ಓಡಿ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಸಂಚಾರಿ ಅಧಿಕಾರಿಗಳು ಯುವಕನನ್ನು ಹಿಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಾರ್ಗದುದ್ದಕ್ಕೂ, ಮೋದಿ ಅವರು ಜನರತ್ತ ಕೈ ಬೀಸುವ ಮೂಲಕ ನಮಸ್ಕರಿಸಿದ್ದಾರೆ.

ಸ್ವಾಮಿ ವಿವೇಕಾನಂದರ (Swamy Vivekananda) ಜನ್ಮದಿನದ ಅಂಗವಾಗಿ ಹುಬ್ಬಳ್ಳಿಯಲ್ಲಿ ನಡೆದ ರಾಷ್ಟ್ರೀಯ ಯುವಜನೋತ್ಸವವನ್ನು ಮೋದಿ ಅವರು ಉದ್ಘಾಟಿಸಿ, ಜನರನ್ನು ಕೈಬೀಸಿ ಮಾತನಾಡಿಸಿದ್ದಾರೆ.

Exit mobile version