ಇಂದಿನಿಂದ ಈ ಸಿಟಿಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ!

mumbai city

ಶುಕ್ರವಾರ, ಏಪ್ರಿಲ್ 1 ರಿಂದ ಕೋವಿಡ್-19(Covid 19) ತಡೆಗಟ್ಟುವ ಪ್ರಮುಖ ವಸ್ತುವಾದ ಮುಖಗವಸವನ್ನು(Face Mask) ಧರಿಸುವ ಅವಶ್ಯಕತೆಯಿಲ್ಲ ಎಂದು ಮುಂಬೈ(Mumbai) ನಗರ ತಿಳಿಸಿದೆ. ಹೌದು, ಇನ್ಮುಂದೆ ಮುಂಬೈ ನಗರದಲ್ಲಿ ಮುಖಗವಸು/ ಮಾಸ್ಕ್ ಧರಿಸುವುದನ್ನು ಮರೆತು ಹೋದರೂ ತೊಂದರೆಯಿಲ್ಲ. ಮಾಸ್ಕ್ ಬಳಸದಿದ್ದಲ್ಲಿ ಯಾವುದೇ ದಂಡವಿಲ್ಲ ಎಂದು ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಘೋಷಿಸಿದೆ.

ಸೋಂಕು ಸಂಪೂರ್ಣವಾಗಿ ನಿಯಂತ್ರಣದಲ್ಲಿಲ್ಲದ ಸಮಯ ಸ್ವಯಂಪ್ರೇರಣೆಯಿಂದ ಮುಖಗವಸುಗಳನ್ನು ಬಳಸಲು ಆಡಳಿತವು ನಾಗರಿಕರನ್ನು ಒತ್ತಾಯಿಸಿತು. ಆದ್ರೆ ಪ್ರಸ್ತುತ, ಕರೋನವೈರಸ್ ಹರಡುವಿಕೆ ಮತ್ತು ಹರಡುವಿಕೆಯನ್ನು ನಿಯಂತ್ರಿಸಲಾಗಿರುವುದರಿಂದ, ಈ ಹಿಂದೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತಿದೆ. ಆದಾಗ್ಯೂ, ಪ್ರಪಂಚದಾದ್ಯಂತ ಕೊರೊನಾವೈರಸ್ ಹರಡುವಿಕೆಯನ್ನೂ ಸಂಪೂರ್ಣವಾಗಿ ಇನ್ನು ನಿಯಂತ್ರಣಕ್ಕೆ ತರಲಾಗಿಲ್ಲ!

ಕೋವಿಡ್ -19 ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನಾಗರಿಕರು ಸ್ವಯಂಪ್ರೇರಣೆಯಿಂದ ಮಾಸ್ಕ್ ಧರಿಸಿಕೊಳ್ಳುವುದು ಅವರಿಗೆ ಬಿಟ್ಟದ್ದು, ಈ ಕುರಿತು ಬಿಎಂಸಿ ಆಡಳಿತವು ಮುನ್ನೆಚ್ಚರಿಕೆ ಕ್ರಮವಾಗಿ ಸಭ್ಯವಾಗಿ ಮನವಿಯನ್ನು ಮಾಡಿದೆ. ಕಳೆದ 2 ವರ್ಷದ ಹಿಂದೆ ಕೋವಿಡ್-19 ರೋಗವೂ ತೀವ್ರ ವೇಗವಾಗಿ ಹಬ್ಬಿಕೊಂಡಿತ್ತು. 2020 ರ ಆರಂಭದಿಂದಲೂ ಈ ಬಗ್ಗೆ ವಿಶ್ವಾದ್ಯಂತ ವರದಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮುಖಗವಸು/ ಮಾಸ್ಕ್ ಧರಿಸುವುದು ಕೊರೊನಾ ವೈರಸ್‌ನಿಂದ ರಕ್ಷಿಸುತ್ತದೆ ಮತ್ತು ಹರಡುವಿಕೆಯನ್ನು ತಡೆಗಟ್ಟುತ್ತದೆ ಎಂದು ತಿಳಿಸಿದೆ.

Exit mobile version