ಅನಗತ್ಯವಾಗಿ RT-PCR ಪರೀಕ್ಷೆ ಮಾಡುವ ಅಗತ್ಯವಿಲ್ಲ: ಲ್ಯಾಬ್ ಗಳ ಮೇಲಿನ ಹೊರೆ ಕಡಿಮೆ ಮಾಡಲು ICMR ಹೊಸ ಮಾರ್ಗಸೂಚಿ

ನವದೆಹಲಿ, ಮೇ. 05: ಭಾರತದಲ್ಲಿ ಕೊರೊನಾ ಎರಡನೇ ಅಲೆ ಅನಿರೀಕ್ಷಿತ ಆಘಾತ ನೀಡಿದೆ. ಸೋಂಕಿತರನ್ನು ಪತ್ತೆ ಹಚ್ಚಿ ಸೋಂಕು ಹಬ್ಬದಂತೆ ತಡೆಯಲು ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ RT-PCR ಪರೀಕ್ಷೆಯನ್ನು ಹೆಚ್ಚಿಸುವಂತೆ ನಿರ್ದೇಶನ ನೀಡಿತ್ತು. ಆದರೆ, ಈಗ ಇದಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ವೈದ್ಯಕೀಯ ಪ್ರಯೋಗಾಲಯಗಳ ಮೇಲಿನ ಹೊರೆ ತಪ್ಪಿಸುವ ಸಲುವಾಗಿ RT-PCR ಪರೀಕ್ಷೆ ಪ್ರಮಾಣವನ್ನು ಕಡಿಮೆ ಮಾಡಲು ತಿಳಿಸಿದೆ.

ಅಲ್ಲದೇ, ಯಾವ ಯಾವ ಸಂದರ್ಭಗಳಲ್ಲಿ RT-PCR ಟೆಸ್ಟ್ ಅಗತ್ಯವಿಲ್ಲ ಎಂಬುದನ್ನೂ ICMR ಸ್ಪಷ್ಟವಾಗಿ ಹೇಳಿದೆ. ಈ ನೂತನ ನಿಯಮಾವಳಿ ಪ್ರಕಾರ ಈ ಕೆಳಕಂಡ ಸಂದರ್ಭಗಳಲ್ಲಿ RT-PCR ಪರೀಕ್ಷೆ ಮಾಡಿಸಬೇಕಾಗಿಲ್ಲ.

  1. ಯಾವುದೇ ವ್ಯಕ್ತಿಗೆ ರ್ಯಾಪಿಡ್ ಆ್ಯಂಟಿಜೆನ್​ ಟೆಸ್ಟ್​ನಲ್ಲಿ ಪಾಸಿಟಿವ್ ಕಂಡುಬಂದರೆ ಮತ್ತೆ RT-PCR ಪರೀಕ್ಷೆ ಅಗತ್ಯವಿಲ್ಲ
  2. ಮೊದಲ ಬಾರಿ RT-PCR ಟೆಸ್ಟ್​ ಮಾಡಿಸಿದಾಗ ಪಾಸಿಟಿವ್ ಬಂದಿದ್ದರೆ ಮತ್ತೆ ಮಾಡಿಸಬೇಕಾಗಿಲ್ಲ.
  3. 10 ದಿನಗಳ ಹೋಂ ಐಸೋಲೇಷನ್ ಮುಗಿಸಿ ನಂತರದ ಮೂರು ದಿನಗಳಲ್ಲಿ ಯಾವುದೇ ಜ್ವರ ಬಾರದಿದ್ದಲ್ಲಿ RT-PCR ಬೇಡ.
  4. ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಮಾಡುವ ಹೊತ್ತಿನಲ್ಲಿ RT-PCR ಪರೀಕ್ಷೆ ಬೇಕಿಲ್ಲ.
  5. ಹೊರರಾಜ್ಯ ಪ್ರಯಾಣಿಕರು RT-PCR ಟೆಸ್ಟ್​ ಮಾಡಿಸಬೇಕೆಂದು ರಾಜ್ಯ ಸರ್ಕಾರಗಳು ಹೇಳಿವೆಯಾದರೂ ಅನಗತ್ಯ ಹೊರೆ ತಪ್ಪಿಸುವ ಸಲುವಾಗಿ ಅದನ್ನು ಕೈ ಬಿಡುವಂತೆ ಐಸಿಎಂಆರ್​ ಸೂಚಿಸಿದೆ.

ಯಾವಾಗ RT-PCR ಪರೀಕ್ಷೆ ಮಾಡಿಸಬೇಕು?
ಯಾವ ವ್ಯಕ್ತಿಗೆ ಸೋಂಕಿನ ಲಕ್ಷಣಗಳಿದ್ದರೂ ರ್ಯಾಪಿಡ್​ ಆ್ಯಂಟಿಜೆನ್​ ಟೆಸ್ಟ್​ನಲ್ಲಿ ನೆಗೆಟಿವ್​ ಬರುತ್ತದೋ ಅವರು RT-PCR ಪರೀಕ್ಷೆ ಮೊರೆ ಹೋಗಬೇಕು.

Exit mobile version