ಮೇಲುಕೋಟೆಯಲ್ಲಿ ಬಿಜೆಪಿಗೆ ಕೈ ಕೊಟ್ಟ ಸುಮಲತಾ ಅಂಬರೀಶ್ : ಅಸಲಿ ಕಾರಣವೇನು..?

Mandya : ಮಂಡ್ಯ ಸಂಸದೆ ಸುಮಲತಾ ಅಂಬರೀಷ್ (Mandya MP Sumalatha Ambarish) ಬಿಜೆಪಿಗೆ (BJP) ಬೆಂಬಲ ಸೂಚಿಸಿ, ಮಂಡ್ಯದಲ್ಲಿ ಏಳು ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ತರುವುದಾಗಿ ಪಣತೊಟ್ಟು ಕ್ಷೇತ್ರಾದ್ಯಾಂತ (No Vote for BJP in Melukote) ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಆದ್ರೆ ಈಗ ತಮ್ಮ ಮಾತನ್ನು ಬದಲಾಯಿಸಿ ಮೇಲುಕೋಟೆಯಲ್ಲಿ ಬಿಜೆಪಿಗೆ ಮತಯಾಚಿಸುವುದಿಲ್ಲ ಎಂದು ಘೋಷಿಸಿ ಬಿಜೆಪಿಯವರಿಗೆ ಶಾಕ್‌ ನೀಡಿದ್ದಾರೆ.

ಮೇಲುಕೋಟೆಯ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸಲು ನಿರ್ಧರಿಸಿರುವ ಸುಮಲತಾ, ಮಂಡ್ಯದಲ್ಲಿ ಆರು ಕ್ಷೇತ್ರಗಳಿಗೆ ಮಾತ್ರ ಬೆಂಬಲ ಸೂಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಮ್ಮ ಚುನಾವಣೆ ವೇಳೆ ಸಹಾಯ ಮಾಡಿರುವ ರೈತ ಮುಖಂಡರ ಸಹಾಯ ಸ್ಮರಣಾರ್ಥ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಸುಮಲತಾ ಆಪ್ತರು ಬಹಿರಂಗ ಪಡಿಸಿದ್ದಾರೆ.

ಇದಕ್ಕೂ ಮುನ್ನ , ನಾನು ಮೋದಿ ಮತ್ತು ಬಿಜೆಪಿ ಸರ್ಕಾರವನ್ನು (BJP Govt) ಬೆಂಬಲಿಸುತ್ತೇನೆ ಎಂದಿದ್ದ ಸುಮಲತಾ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi)

ಅವರನ್ನು ಉಲ್ಲೇಖಿಸಿದ ಅವರು, ‘ಪ್ರಧಾನಿ ನಾಯಕತ್ವದಲ್ಲಿ ನನಗೆ ವಿಶ್ವಾಸವಿದೆ. ಮೋದಿ ಅಧಿಕಾರದಲ್ಲಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು. ಬಿಜೆಪಿಗೇ ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ,

ಇದನ್ನೂ ಓದಿ : https://vijayatimes.com/i-will-dissolve-jds/

ಆದರೆ ಪಕ್ಷಕ್ಕೆ ಸೇರ್ಪಡೆಯಾಗುವ ಯಾವ ಯೋಚನೆಗಳೂ ಇನ್ನೂ ಇಲ್ಲ ಎಂದು ಹೇಳಿದ್ದರು.

ಮಗನ ರಾಜಕೀಯ ವೃತ್ತಿಜೀವನದ ಕುರಿತು ಮಾತನಾಡಿದ ಸುಮಾಲತಾ , ನಾನು ಇರುವವರೆಗೂ ಅಭಿ ರಾಜಕೀಯಕ್ಕೆ ಬರುವುದಿಲ್ಲ, ಯಾವುದೇ ಕಾರಣಕ್ಕೂ

ಕುಟುಂಬ ರಾಜಕಾರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಮಂಡ್ಯಕ್ಕೆ ಹೆಚ್.ಡಿ.ಕೆ ಏನು ಮಾಡಿದ್ದಾರೆ (No Vote for BJP in Melukote) ಎಂದು ಹೇಳಿದ್ದರು.

ಈ ಹಿಂದೆ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಸುಮಲತಾ ಭವಿಷ್ಯ ನುಡಿದಿದ್ದರು.

ಆದರೆ, ಕೊನೆಯ ಕ್ಷಣದಲ್ಲಿ ದರ್ಶನ್ ಪುಟ್ಟಣ್ಣಯ್ಯ (Darshan Puttannaiah) ಅವರು ಮೇಲುಕೋಟೆಯಲ್ಲಿ ಗೆದ್ದರೆ

ಸಂತೋಷ ಎಂಬ ಆಶಯ ವ್ಯಕ್ತಪಡಿಸಿ ಬಿಜೆಪಿ ಅಭ್ಯರ್ಥಿ ಇಂದ್ರೇಶ್‌ಗೆ ಯಾವುದೇ ಬೆಂಬಲ ಸೂಚಿಸಿಲ್ಲ.

ಇದನ್ನೂ ಓದಿ : https://vijayatimes.com/supreme-court-verdict/

ಈ ದಿಢೀರ್ ಮನ ಪರಿವರ್ತನೆ ಬಿಜೆಪಿ ಕಾರ್ಯಕರ್ತರನ್ನು ದಿಗ್ಭ್ರಮೆಗೊಳಿಸಿದ್ದು, ಸಂಸದೆ ಸುಮಲತಾ ಅವರ ಈ ಹೇಳಿಕೆಯ

ಉದ್ದೇಶವೇನೆಂಬುದರ ಕುರಿತು ಭಾರೀ ಚರ್ಚೆಗಳಾಗುತ್ತಿವೆ. ಮೇಲುಕೋಟೆಯ ರೈತಮುಖಂಡ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬಿಜೆಪಿ ಹೊರತುಪಡಿಸಿ ಹೆಚ್ಚಿನ ಎಲ್ಲಾ ಪ್ರಮುಖ ಪಕ್ಷಗಳು ಬಹಿರಂಗ ಬೆಂಬಲ ಸೂಚಿಸಿ,

ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಆದ್ರೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು.

ಇವರ ಪರವಾಗಿ ಸುಮಲತಾ ಅಂಬರೀಷ್ ಅವರ ಪ್ರಚಾರ ಮಾಡಬೇಕಿತ್ತು. ಆದ್ರೆ ಈಗ ಸುಮಲತಾ ಅವರೂ ಕೂಡ ದರ್ಶನ್ ಅವರಿಗೆ ಬೆಂಬಲ ಸೂಚಿಸಿದ್ದರಿಂದ ಬಿಜೆಪಿ ಅಭ್ಯರ್ಥಿಗೆ ಸೋಲಿನ ಭೀತಿ ಕಾಡುತ್ತಿದೆ.

Exit mobile version