ಅನಿವಾಸಿ ಭಾರತೀಯರು ಭಾರತದ ನಿಜವಾದ ರಾಯಭಾರಿಗಳು ನಿರ್ಮಲಾ ಸೀತಾರಾಮನ್

New Delhi : ಅನಿವಾಸಿ ಭಾರತೀಯರು ನಮ್ಮ ದೇಶದ ನಿಜವಾದ ರಾಯಭಾರಿಗಳು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(NRIs India’s true ambassadors)

ಅವರು ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಡೆದ ಪ್ರವಾಸಿ ಭಾರತೀಯ ದಿವಸ್(PBD) ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ ಅನಿವಾಸಿ ಭಾರತೀಯರ ಕಾಣಿಕೆಯನ್ನು ಕೊಂಡಾಡಿದರು.

ಅನಿವಾಸಿ ಭಾರತೀಯರ ಕೊಡುಗೆಯನ್ನು ಪ್ರತ್ಯೇಕವಾಗಿ ಉಲ್ಲೇಖಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು,

2022 ರಲ್ಲಿ ಅನಿವಾಸಿ ಭಾರತೀಯರಿಂದ 100 ಬಿಲಿಯನ್ ಡಾಲರ್ ಹಣ ರವಾನೆಯಾಗಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಸಾಗರೋತ್ತರ ಭಾರತೀಯರು ದೇಶಕ್ಕೆ ಕಳುಹಿಸಿರುವ ಹಣ 2022ಕ್ಕೆ ಸುಮಾರು ಯುಸ್‌ಡಿ 100 ಬಿಲಿಯನ್ ಡಾಲರ್ ಆಗಿದ್ದು, ಒಂದು ವರ್ಷದಲ್ಲಿ 12% ರಷ್ಟು ಶೇಕಡಾ ಹೆಚ್ಚಳವಾಗಿದೆ ಎಂದು ಮಂಗಳವಾರ‌ ಹೇಳಿದ್ದಾರೆ.

ಅನಿವಾಸಿ ಭಾರತೀಯರನ್ನು ಭಾರತದ ನಿಜವಾದ ರಾಯಭಾರಿಗಳು ಮತ್ತು ಸಾಧ್ಯವಾದಷ್ಟು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸುವಂತೆ ಮನವಿ ಮಾಡಿ ಹೇಳಿದರು.

ನಾವು ನಮ್ಮದೇ ವೈಯಕ್ತಿಕ ಬ್ರ್ಯಾಂಡ್(Brand) ಅನ್ನು ಜಗತ್ತಿನಾದ್ಯಂತ ಪ್ರಚಾರ ಮಾಡಬಹುದು.

ಚೀನಾ(China) ದೇಶದ ಪ್ಲಸ್ ಒನ್ ನೀತಿಯ ನಂತರ, ಜಗತ್ತು ಈಗ ಯುರೋಪಿಯನ್ ಯೂನಿಯನ್(NRIs India’s true ambassadors) ಪ್ಲಸ್ ಒನ್ ನೀತಿಯ ಬಗ್ಗೆ ಮಾತನಾಡುತ್ತಿದೆ. ಅನಿವಾಸಿ ಭಾರತೀಯರ ಉದ್ಯಮಶೀಲತೆಯ

ಕೌಶಲ್ಯವನ್ನು ಮುಂದಿನ 25 ವರ್ಷಗಳಲ್ಲಿ ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಬಳಸಿಕೊಳ್ಳಲು ಭಾರತೀಯ ಡಯಾಸ್ಪೊರಾ ದೇಶದ ಸಣ್ಣ ಮತ್ತು ದೊಡ್ಡ ಉದ್ಯಮಿಗಳೊಂದಿಗೆ ಸಹಭಾಗಿಯಾಗಬೇಕು ಎಂದು ಹೇಳಿದರು.

ಇದನ್ನೂ ಓದಿ: https://vijayatimes.com/symptoms-of-kidney-problem/

ವಲಸೆ ಹೋದ ಭಾರತೀಯರು ವಿದೇಶದಿಂದ ಬರುವ ಹಣ ರವಾನೆಯು 2022ರ ವರ್ಷಕ್ಕೆ ಸುಮಾರು 100 ಬಿಲಿಯನ್ ಯುಎಸ್ ಡಾಲರ್ ಆಗಿದೆ. ಇದು ಬರುತ್ತಿರುವ ಅತಿ ಹೆಚ್ಚು ರವಾನೆಗಳಲ್ಲಿ ಪ್ರಮುಖವಾಗಿದೆ.

2021ರ ವರ್ಷಕ್ಕೆ ಹೋಲಿಸಿದರೆ ಇದು ಶೇಕಡಾ 12% ರಷ್ಟು ಹೆಚ್ಚಳ ಕಂಡಿದೆ ಎಂದು ಹೇಳಿದರು. ಮಾಹಿತಿ ತಂತ್ರಜ್ಞಾನ, ಡಿಜಿಟಲ್ ತಂತ್ರಜ್ಞಾನ, ಆಟೋಮೊಬೈಲ್, ಸೆಮಿಕಂಡಕ್ಟರ್ ಡಿಸೈನಿಂಗ್,

ಫಾರ್ಮಾಸ್ಯುಟಿಕಲ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಇತರ ಕ್ಷೇತ್ರಗಳಲ್ಲಿ ಭಾರತೀಯ ವೃತ್ತಿಪರರ ಪ್ರಾಬಲ್ಯವನ್ನು ಉಲ್ಲೇಖಿಸಿದ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು,

ದೇಶವು ಜ್ಞಾನ ಮತ್ತು ಪ್ರಗತಿಯ ಜಾಗತಿಕ ಕೇಂದ್ರವಾಗುತ್ತಿದೆ ಎಂದು ಹೇಳಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ನೀಡಿದ ವರದಿಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ(Social Media) ಮಿಶ್ರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Exit mobile version