ಪಿಂಚಣಿಗಾಗಿ ಕುರ್ಚಿ ಸಹಾಯದಿಂದ ಕಿ.ಮೀಗಟ್ಟಲ್ಲೇ ನಡೆದ 70 ವರ್ಷದ ವೃದ್ಧೆ : ವೈರಲ್ ವೀಡಿಯೊಗೆ ಸ್ಪಂದಿಸಿದ ನಿರ್ಮಲಾ ಸೀತಾರಾಮನ್

Odisha : ಒಡಿಶಾದಲ್ಲಿ 70 ವರ್ಷದ ವೃದ್ಧೆಯೊಬ್ಬರು ತಮ್ಮ ಪಿಂಚಣಿ ಹಣ ಪಡೆಯಲು ಬರಿಗಾಲಿನಲ್ಲಿ ಕುರ್ಚಿಯನ್ನು ಊರಿಗೋಲಿನಂತೆ ಬಳಸಿ ಮೈಲುಗಟ್ಟಲೆ ನಡೆದುಕೊಂಡು ಹೋಗುತ್ತಿರುವ ವೀಡಿಯೊಂದು old woman video viral) ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral) ಆದ ಹಿನ್ನೆಲೆ

ಅದನ್ನು ವೀಕ್ಷಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಕ್ಷಣ ವಿವರಣೆ ಕೋರಿ, ಸಮಸ್ಯೆ ಪರಿಹಾರಕ್ಕೆ ಆದೇಶಿಸಿದ್ದಾರೆ.


ಸೂರ್ಯ ಹರಿಜನ್ (Surya Harijan) ಎಂಬ 70 ವರ್ಷದ ವೃದ್ಧೆ ಒಡಿಶಾದ ಬ್ಯಾಂಕ್‌ನಿಂದ ಪಿಂಚಣಿ ಪಡೆಯಲು ಬರಿಗಾಲಿನಲ್ಲಿ ಗರಿಷ್ಠ ತಾಪದಲ್ಲಿ

ಹಲವಾರು ಕಿಲೋಮೀಟರ್‌ಗಳವರೆಗೆ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ.

ವಿಡಿಯೋ ನೋಡಿ ಪ್ರತಿಕ್ರಿಯಿಸಿದ ಸಚಿವೆ ನಿರ್ಮಲಾ ಸೀತಾರಾಮನ್, ಎಸ್‌ಬಿಐ ಬ್ಯಾಂಕ್ ಸಿಬ್ಬಂದಿಗಳಿಗೆ ನೇರವಾಗಿ ಪ್ರಶ್ನಿಸಿದ್ದಾರೆ.

ಸಚಿವೆಯ ಎಚ್ಚರಿಕೆಯ ಬೆನ್ನಲ್ಲೇ ಘಟನೆಯ ಬಗ್ಗೆ ವಿವರಿಸಿದ ಬ್ಯಾಂಕ್‌ ಸಿಬ್ಬಂದಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank of India) ಅಧಿಕೃತ ಖಾತೆಯ ಮೂಲಕ ಸರಣಿ ಟ್ವೀಟ್‌ ಮಾಡಿ ಉತ್ತರಿಸಿದ್ದಾರೆ.


‘ಮೇಡಂ, ಈ ವಿಡಿಯೋ ನೋಡಿ ನಮಗೂ ಅಷ್ಟೇ ನೋವಾಗಿದೆ. ವಿಡಿಯೋದಲ್ಲಿರುವ ಶ್ರೀಮತಿ ಸೂರ್ಯ ಹರಿಜನ್ ಪ್ರತಿ ತಿಂಗಳು ತಮ್ಮ ಹಳ್ಳಿಯಲ್ಲಿರುವ CSP ಪಾಯಿಂಟ್‌ನಿಂದ ತಮ್ಮ ವೃದ್ಧಾಪ್ಯ ವೇತನವನ್ನು ಪಡೆಯುತ್ತಿದ್ದರು.

ವೃದ್ಧಾಪ್ಯಕ್ಕೆ, CSP ಪಾಯಿಂಟ್‌ನಲ್ಲಿ ಅವರ ಬೆರಳಚ್ಚುಗಳು ಹೊಂದಿಕೆಯಾಗುತ್ತಿರಲಿಲ್ಲ. ಹೀಗಾಗಿ ಅವರು ತನ್ನ ಸಂಬಂಧಿಯೊಂದಿಗೆ ನಮ್ಮ ಜಾರಿಗಾಂವ್ ಶಾಖೆಗೆ ಇತ್ತೀಚೆಗಷ್ಟೇ ಭೇಟಿ ನೀಡಿದ್ದರು.

ನಮ್ಮ ಬ್ರಾಂಚ್ ಮ್ಯಾನೇಜರ್ ( Branch Manger) ಕೂಡಲೇ ಅವರ ಖಾತೆಯನ್ನು ಹಸ್ತಚಾಲಿತವಾಗಿ ಡೆಬಿಟ್ ಮಾಡುವ ಮೂಲಕ ಮೊತ್ತವನ್ನು (old woman video viral) ಪಾವತಿಸಿದರು.

ಮುಂದಿನ ತಿಂಗಳಿನಿಂದ ಅವರ ಪಿಂಚಣಿಯನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ನಮ್ಮ ಶಾಖಾ ವ್ಯವಸ್ಥಾಪಕರು ಸಹ ತಿಳಿಸಿದ್ದಾರೆ.

ಶ್ರೀಮತಿ ಸೂರ್ಯ ಹರಿಜನ್ ಅವರಿಗೆ ಗಾಲಿಕುರ್ಚಿಯನ್ನು ಕೂಡ ಹಸ್ತಾಂತರಿಸಲು ನಾವು ನಿರ್ಧರಿಸಿದ್ದೇವೆ ಎಂದು ಬ್ಯಾಂಕ್ ಟ್ವೀಟ್ ನಲ್ಲಿ ತಿಳಿಸಿದೆ.

ಈ ವೀಡಿಯೊವನ್ನು ಸುದ್ದಿ ಸಂಸ್ಥೆ ANI ಪ್ರಕಟಿಸಿದ ದಿನದಿಂದಲೂ ಈ ವೀಡಿಯೋ (Video) ಸಾಕಷ್ಟು ವೈರಲ್ ಆಗಿತ್ತು.

ವೀಡಿಯೊದಲ್ಲಿ 70 ವರ್ಷದ ವೃದ್ಧೆ ಸೂರ್ಯ ಹರಿಜನ್ ಅವರು ಮುರಿದ ಕುರ್ಚಿಯ ಬೆಂಬಲದೊಂದಿಗೆ ಬಿಸಿಲಿನಲ್ಲಿ ಬರಿಗಾಲಿನಲ್ಲಿ ನಡೆಯುತ್ತಿರುವುದು ಕಂಡುಬಂದಿದೆ.

ಈ ವಿಡಿಯೋವನ್ನು ಏಪ್ರಿಲ್ 17 ರಂದು ಒಡಿಶಾದ ನಬ್ರಂಗ್‌ಪುರ ಜಿಲ್ಲೆಯ ಜರಿಗಾಂವ್ ಬ್ಲಾಕ್‌ನಿಂದ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.


ವೃದ್ಧೆಯ ಬೆರಳುಗಳು ಮುರಿದುಹೋಗಿವೆ, ಆದ್ದರಿಂದ ಅವರು ತಮ್ಮ ಪಿಂಚಣಿ ಹಣವನ್ನು ಹಿಂಪಡೆಯಲು ತೊಂದರೆಯನ್ನು ಎದುರಿಸುತ್ತಿದ್ದರು.

ಅವರಿಗೆ ನಮ್ಮ ಬ್ಯಾಂಕ್‌ನಿಂದ ನೇರವಾಗಿ 3,000 ಹಣವನ್ನು ನೀಡಲಾಗಿದೆ. ನಾವು ಅವರ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುತ್ತೇವೆ ಎಂದು ಜರಿಗಾಂವ್ ಶಾಖೆಯ ಎಸ್‌ಬಿಐ ವ್ಯವಸ್ಥಾಪಕರು ಈ ತಿಳಿಸಿದ್ದಾರೆ.

Exit mobile version