ಮಣಿಪುರ ಹಿಂಸಾಚಾರ: ‘ಒಂದು ಜಿಲ್ಲೆ, ಒಂದು ಪಡೆ’ ವ್ಯವಸ್ಥೆಗೆ ಮುಂದಾದ ಸರ್ಕಾರ, ಹಲವೆಡೆ ಕರ್ಫ್ಯೂ ಜಾರಿ

Impala: ಮಣಿಪುರದಲ್ಲಿ (One District One Force System) ಸ್ವಲ್ಪ ನಿಯಂತ್ರಣಕ್ಕೆ ಬಂದಿದ್ದ ಹಿಂಸಾಚಾರ ಮತ್ತೆ ಭುಗಿಲೆದ್ದಿದ್ದು, ಜುಲೈನಲ್ಲಿ ನಾಪತ್ತೆಯಾಗಿರುವ ಇಬ್ಬರು ವಿದ್ಯಾರ್ಥಿಗಳನ್ನು ಬರ್ಬರವಾಗಿ

ಕೊಂದ ಚಿತ್ರಗಳು ಆನ್‌ಲೈನ್‌ನಲ್ಲಿ ಬಿಡುಗಡೆಯಾಗಿರುವುದು ಮೈತೇಯಿ (Meithei) ಸಮುದಾಯದಲ್ಲಿ ಆಕ್ರೋಶ ಮೂಡಿಸಿದೆ. ಹಾಗಾಗಿ ರಾಜ್ಯದ ವಿವಿಧ ಕಡೆಗಳಲ್ಲಿ ಕರ್ಫ್ಯೂ ಜಾರಿಯಾಗಿದೆ.

ವಿದ್ಯಾರ್ಥಿಗಳು, ಸಂಘಟನೆಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಿಎಂ ಬಿರೇನ್ ಸಿಂಗ್ (Biren Singh) ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು, ಬುಡಕಟ್ಟು ಸಮುದಾಯಕ್ಕೆ

ಸೇರಿದ ಇಬ್ಬರು ವಿದ್ಯಾರ್ಥಿಗಳ ‘ಅಪಹರಣ ಮತ್ತು ಕೊಲೆ’ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿರುವ ಕಾರಣ ಬುಧವಾರ ಇನ್ನಷ್ಟು ತೀವ್ರಗೊಂಡಿದೆ.

ರಾಜ್ಯ ಸರ್ಕಾರವು ಈಗಾಗಲೇ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ (CBI) ಒಪ್ಪಿಸಿದ್ದರೂ, ವಿಳಂಬ ಗತಿಯ ತನಿಖೆಯು ವಿದ್ಯಾರ್ಥಿ ಸಮೂಹವನ್ನು ರೊಚ್ಚಿಗೆಬ್ಬಿಸಿದೆ. ಇಂಫಾಲ, ಚುರಾಚಾಂದ್‌ಪುರ

ಸೇರಿದಂತೆ ಹಲವು ನಗರಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ಸಂಘರ್ಷ ಭುಗಿಲೆದ್ದಿದ್ದು, ಸಿಎಂ (CM) ಎನ್‌. ಬಿರೇನ್‌ ಸಿಂಗ್‌ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ಸತತ ಎರಡನೇ

ದಿನವೂ ನಡೆದಿದೆ.

ವಿದ್ಯಾರ್ಥಿಗಳು ಸ್ವದೇಶಿ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್‌ಎಫ್‌) ಸೇರಿದಂತೆ ಹಲವು ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆಗೆ ಇಳಿದಿದ್ದು, ಪರಿಸ್ಥಿತಿಯ ನಿಯಂತ್ರಣಕ್ಕೆ ಸರ್ಕಾರ ಹರಸಾಹಸ

ನಡೆಸುತ್ತಿದೆ. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಲ್ಲದೇ ಅಶ್ರುವಾಯು ಪ್ರಯೋಗ ಮಾಡಿದರು. ಪರಿಸ್ಥಿತಿ ಹತೋಟಿಗೆ ತರಲು ಸಿಆರ್‌ಪಿಎಫ್‌ (CRPF), ಕ್ಷಿಪ್ರ ಕಾರ್ಯಪಡೆಯೂ

(ಆರ್‌ಎಎಫ್‌) ಕಾರ್ಯಾಚರಣೆಗೆ (One District One Force System) ಇಳಿದಿವೆ.

ಮಂಗಳವಾರದಿಂದ ಶುರುವಾಗಿರುವ ಸಂಘರ್ಷದಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದು, ಹಲವರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮೂಲಗಳು ಹೇಳಿವೆ.

ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸ ಪಡುತ್ತಿರುವ ಸರ್ಕಾರ, ಭದ್ರತಾ ಪಡೆಗಳ ನಡುವೆ ಉತ್ತಮ ಹೊಂದಾಣಿಕೆ ಮೂಡುವಂತೆ ಮಾಡಲು ‘ಒಂದು ಜಿಲ್ಲೆ, ಒಂದು ಪಡೆ’ ವ್ಯವಸ್ಥೆಯನ್ನು

ಅಳವಡಿಸುವ ಸಾಧ್ಯತೆ ಇದೆ.

ಒಂದು ಅರೆ ಸೇನಾ ಪಡೆಗೆ ಒಂದು ಸಂಪೂರ್ಣ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿದಾರಿಗೆ ತರುವ ಜವಾಬ್ದಾರಿಯನ್ನು ವಹಿಸಲಾಗುತ್ತದೆ. ಅರೆ ಸೇನಾ ಪಡೆಗಳು ಪೊಲೀಸರ ಜತೆ ಸಮನ್ವಯ ಸಾಧಿಸಿ ಕೆಲಸ ಮಾಡುವುದರಿಂದ ಸಂಘರ್ಷಗಳು ನಿಯಂತ್ರಣಕ್ಕೆ ಬರುತ್ತವೆ ಎನ್ನುವುದು ಸರ್ಕಾರದ ಉದ್ದೇಶವಾಗಿದೆ.

ಇಂಟರ್ನೆಟ್‌ ಸ್ಥಗಿತ
ಸಾಮಾಜಿಕ ಜಾಲತಾಣಗಳಲ್ಲಿ ಹಿಂಸಾಚಾರಕ್ಕೆ ಎಡೆಮಾಡಿಕೊಡುವಂಥ ವದಂತಿಗಳು ಹರಿದಾಡದಂತೆ ತಡೆಯಲು ಸರ್ಕಾರ ಅಕ್ಟೋಬರ್‌ 1 ರವರೆಗೆ ಇಂಟರ್ನೆಟ್‌ (Internet) ಸೇವೆಯನ್ನು ಸ್ಥಗಿತಗೊಳಿಸಿದ್ದು,

ಕಳೆದ ಭಾನುವಾರವಷ್ಟೇ ಮಣಿಪುರದಲ್ಲಿ ಪರಿಸ್ಥಿತಿ ತಹಬದಿಗೆ ಬಂದ ಕಾರಣಕ್ಕೆ ರಾಜ್ಯ ಸರ್ಕಾರ ಪೂರ್ಣ ಪ್ರಮಾಣದಲ್ಲಿಇಂಟರ್ನೆಟ್‌ ಸೇವೆಯನ್ನು ಮರು ಜಾರಿಗೊಳಿಸಿತ್ತು. ಮತ್ತೆ ಇದೀಗ ಇಂಟರ್ನೆಟ್

ಸ್ಥಗಿತಗೊಳಿಸಲಾಗಿದೆ.

ಪ್ರಕ್ಷುಬ್ದ ಪ್ರದೇಶ:
ಹರಸಾಹಸ ನಡೆಸುತ್ತಿರುವ ಮಣಿಪುರ ಸರ್ಕಾರವು ಈ ಮಧ್ಯೆ ಪರಿಸ್ಥಿತಿ ನಿಯಂತ್ರಣಕ್ಕೆ ಇಡೀ ರಾಜ್ಯವನ್ನು ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಿದೆ. ರಾಜ್ಯ ಸರಕಾರದ ಅಧಿಸೂಚನೆಯ ಪ್ರಕಾರ, 19 ಪೊಲೀಸ್‌

ಠಾಣೆಗಳಿರುವ ಪ್ರದೇಶಗಳನ್ನು ಹೊರತುಪಡಿಸಿ ಇಡೀ ರಾಜ್ಯವನ್ನು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯಡಿಯಲ್ಲಿ ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಲಾಗಿದೆ.

ಮಕ್ಕಳು, ಮಹಿಳೆಯರ ಮೇಲೆ ದಿನೇದಿನೆ ದೌರ್ಜನ್ಯ ಹೆಚ್ಚಾಗುತ್ತಿದ್ದು, ಮಣಿಪುರದಲ್ಲಿ ಹಿಂಸಾಚಾರಕ್ಕೆ ನಿಯಂತ್ರಣವಿಲ್ಲದಂತಾಗಿದೆ. ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಸುಧಾರಣೆಗೆ ಪ್ರಯತ್ನಿಸದ

ಸಿ.ಎಂ ಎನ್‌.ಬಿರೇನ್‌ ಸಿಂಗ್‌ ಒಬ್ಬ ಅಸಮರ್ಥ ನಾಯಕ. ಪ್ರಧಾನಿ ನರೇಂದ್ರ ಮೋದಿ ಅವರು ಈ ತಕ್ಷಣವೇ ಬಿರೇನ್‌ ಸಿಂಗ್‌ರಿಂದ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸುತ್ತೇನೆ ಎಂದು ಎಐಸಿಸಿ

(AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಒತ್ತಾಯಿಸಿದ್ದಾರೆ.

Exit mobile version