ಚುನಾವಣೆ ವೇಳೆ ರಾಮಮಂದಿರ ಉದ್ಘಾಟನೆ ದಿನಾಂಕ ಏಕೆ ಘೋಷಣೆ ಮಾಡ್ತೀರಿ? ಶಾ ವಿರುದ್ಧ ಖರ್ಗೆ ವಾಗ್ದಾಳಿ

Panipat: ಅಯೋಧ್ಯೆಯ(Ayodhya) ರಾಮಮಂದಿರದ(opening date of Ram Mandir) ಉದ್ಘಾಟನಾ ದಿನಾಂಕವನ್ನು ಘೋಷಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ(Mallikarjun kharge) ವಾಗ್ದಾಳಿ ನಡೆಸಿದ್ದಾರೆ.

ಅಮಿತ್ ಶಾ(Amit shah) ಅವರು ದೇಶದ ಭದ್ರತೆಯನ್ನು ಖಾತ್ರಿಪಡಿಸುವ ಬದಲು ದೇವಾಲಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಈಶಾನ್ಯ ರಾಜ್ಯವಾದ ತ್ರಿಪುರಾದಲ್ಲಿ ಚುನಾವಣೆ ಇದೆ. ಆದರೆ ಅಮಿತ್ ಶಾ ಅಲ್ಲಿಗೆ ಹೋಗಿ ರಾಮಮಂದಿರ ನಿರ್ಮಾಣ ಆಗುತ್ತಿದೆ ಎಂದು ಹೇಳುತ್ತಾರೆ.

ಎಲ್ಲರಿಗೂ ದೇವರ ಮೇಲೆ ನಂಬಿಕೆ ಇದೆ, ಆದರೆ ಚುನಾವಣೆ ಸಂದರ್ಭದಲ್ಲಿ ಏಕೆ ಇದನ್ನು ಘೋಷಣೆ ಮಾಡುತ್ತಿದ್ದೀರಿ? ಎಂದು ಹರಿಯಾಣದ ಪಾಣಿಪತ್‌ನಲ್ಲಿ ನಡೆದ ರಾಹುಲ್‌ಗಾಂಧಿ(opening date of Ram Mandir) ನೇತೃತ್ವದ “ಭಾರತ್ ಜೋಡೋ”(Bharat jodo) ಯಾತ್ರೆಯ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ

ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ‌ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆ ಖಂಡಿಸಿದ್ದಾರೆ.

ನೀವು ಅಯೋಧ್ಯೆಯ ರಾಮಮಂದಿರದ ಮಹಾಂತರೇ? ಮಹಾಂತರು, ಸಾಧುಗಳು, ಸಂತರು ಇದರ ಬಗ್ಗೆ ಮಾತನಾಡಲಿ.

ಮಂದಿರ ಉದ್ಘಾಟನೆ ಬಗ್ಗೆ ಮಾತನಾಡಲು ನೀವು ಯಾರು? ನೀವು ರಾಜಕಾರಣಿ, ದೇಶವನ್ನು ಸುಭದ್ರವಾಗಿ ಇಡುವುದು ನಿಮ್ಮ ಕೆಲಸ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿ,

ಜನರಿಗೆ ಆಹಾರವನ್ನು ಖಾತ್ರಿಪಡಿಸಿ ಮತ್ತು ರೈತರಿಗೆ ಸೂಕ್ತ ಬೆಲೆಯನ್ನು ಒದಗಿಸಿ ಎಂದು ಟೀಕಿಸಿದ್ದಾರೆ.

ಇನ್ನು ಇತ್ತೀಚೆಗೆ ಈಶಾನ್ಯ ರಾಜ್ಯವಾದ ತ್ರಿಪುರಾಕ್ಕೆ(Tripura) ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ಶಾ ಅವರು, 2024ರ ಜನವರಿಯಲ್ಲಿ ರಾಮ ಮಂದಿರವನ್ನು ಉದ್ಘಾಟನೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದರು.

ಇದನ್ನೂ ಓದಿ: https://vijayatimes.com/bikers-changed-number-plates/

ಇನ್ನು ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣದಕ್ಕೆ 2020ರ ಆಗಸ್ಟ್ 5 ರಂದು ಪ್ರಧಾನಿ ಮೋದಿ(Narendra modi) ಶಂಕುಸ್ಥಾಪನೆ ನೆರವೇರಿಸಿದ್ದರು.. ಮೊದಲಿಗೆ ಮಂದಿರವನ್ನು 161 ಅಡಿ ಎತ್ತರ ಹಾಗೂ 140 ಅಗಲದ ವಿಸ್ತೀರ್ಣದಲ್ಲಿ ನಿರ್ಮಿಸಲು ನಿರ್ಧರಿಸಲಾಗಿತ್ತು.

ಆದರೇ, ಈಗ ರಾಮಮಂದಿರ ನಿರ್ಮಾಣದ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ.

ಗುಜರಾತ್(Gujarat) ವಾಸ್ತಶಿಲ್ಪಿ ಚಂದ್ರಕಾಂತ್ ಸೋಮಾಪುರ ಅವರು ದೇವಾಲಯವನ್ನು ಈ ಹಿಂದೆ 1985 ಹಾಗೂ 1986 ರಲ್ಲಿ ವಿನ್ಯಾಸ ಮಾಡಿದ್ದರು.

ಈಗ ಅವರ ಪುತ್ರ ನಿಖಿಲ್ ಸೋಮಾಪುರ ದೇವಾಲಯದ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ದಾರೆ.

ಮೂಲ ವಿನ್ಯಾಸದಲ್ಲಿ 2 ಮಹಡಿಯ ರಾಮಮಂದಿರ ನಿರ್ಮಾಣ ಮಾತ್ರ ಇತ್ತು.ಈಗ ನಿರ್ಮಾಣವಾಗಲಿರುವ ರಾಮಮಂದಿರ ಮೂರು ಅಂತಸ್ತುಗಳನ್ನು ಹೊಂದಿರಲಿದೆ.

Exit mobile version