10 ರಾಜ್ಯಗಳ 100ಕ್ಕೂ ಹೆಚ್ಚು ಸ್ಥಳಗಳ ಮೇಲೆ NIA ದಾಳಿ ; ಪಿಎಫ್ಐ ಮುಖ್ಯಸ್ಥನ ಬಂಧನ!

New Delhi : ಭಯೋತ್ಪಾದಕರೊಂದಿಗೆ(Operation NIA New Delhi) ಸಂಪರ್ಕ ಹೊಂದಿರುವ ಆರೋಪದ ಮೇಲೆ 10 ರಾಜ್ಯಗಳ 100ಕ್ಕೂ ಹೆಚ್ಚು ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಮತ್ತು ಜಾರಿ ನಿರ್ದೇಶನಾಲಯ(ED) ಜಂಟಿಯಾಗಿ ದಾಳಿ ನಡೆಸಿವೆ.

ಭಯೋತ್ಪಾದಕರಿಗೆ ಧನಸಹಾಯ ಮಾಡಿರುವ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ರಾಷ್ಟ್ರವ್ಯಾಪಿ ದಾಳಿಗಳನ್ನು ನಡೆಸಿದ್ದು, 100ಕ್ಕೂ ಹೆಚ್ಚು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಕಾರ್ಯಕರ್ತರನ್ನು ಬಂಧಿಸಿದೆ.

ಮಲಪ್ಪುರಂನ ಮಂಜೇರಿಯಲ್ಲಿ ಪಿಎಫ್ಐ ಅಧ್ಯಕ್ಷ ಒಎಂಎ ಸಲಾಂ ಮತ್ತು ರಾಜ್ಯಾಧ್ಯಕ್ಷ ಸಿಪಿ ಮುಹಮ್ಮದ್ ಬಶೀರ್ ಅವರನ್ನು ಬಂಧಿಸಲಾಗಿದೆ. ದೆಹಲಿ ಪಿಎಫ್ಐ ಮುಖ್ಯಸ್ಥ ಪರ್ವೇಜ್ ಅಹ್ಮದ್ ಮತ್ತು ಅವರ ಸಹೋದರನನ್ನು ಕೂಡಾ ಎನ್ಐಎ ಬಂಧಿಸಿದೆ.

ಇದನ್ನೂ ಓದಿ : https://vijayatimes.com/health-tips-for-hair-dandruff/

ಪಿಎಫ್ಐ ಭಯೋತ್ಪಾದಕ ಚಟುವಟಿಕೆಗೆ ಬೆಂಬಲ ನೀಡಿ, ವಿದ್ವಂಸಕ ಕೃತ್ಯಗಳಿಗೆ ಸಂಚು ರೂಪಿಸುತ್ತಿದೆ ಮತ್ತು ನಿರ್ದಿಷ್ಟ ಧರ್ಮದ ಜನರನ್ನು ಗುರುತಿಸಿ ಕೊಲ್ಲಲು ಪಿಎಫ್ಐ ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದೆ ಎಂದು ಎನ್ಐಎ ಆರೋಪಿಸಿದೆ. ಇನ್ನು ಎನ್ಐಎ ದೇಶದ 100ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ಎನ್ಐಎ ಇತಿಹಾಸದಲ್ಲೇ ಇದನ್ನು ಅತ್ಯಂತ ದೊಡ್ಡ ದಾಳಿ ಎನ್ನಲಾಗಿದೆ.

ಈ ದಾಳಿಯ ವೇಳೆ ಕನಿಷ್ಠ 106 ಜನರನ್ನು ಬಂಧಿಸಿದ್ದು, ಆಂಧ್ರಪ್ರದೇಶ (5), ಅಸ್ಸಾಂ (9), ದೆಹಲಿ (3), ಕರ್ನಾಟಕ (20), ಕೇರಳ (22), ಮಧ್ಯಪ್ರದೇಶ (4), ಮಹಾರಾಷ್ಟ್ರ (20), ಪುದುಚೇರಿ (3), ರಾಜಸ್ಥಾನ (2) ತಮಿಳುನಾಡು (10) ಮತ್ತು ಉತ್ತರ ಪ್ರದೇಶದಿಂದ (8) ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಭಯೋತ್ಪಾದನೆಗೆ ಧನಸಹಾಯ, ತರಬೇತಿ ಶಿಬಿರಗಳನ್ನು ಆಯೋಜಿಸುವುದು ಮತ್ತು ನಿಷೇಧಿತ ಸಂಘಟನೆಗಳಿಗೆ ಸೇರಲು ಜನರನ್ನು ತೀವ್ರಗಾಮಿಗೊಳಿಸುವಲ್ಲಿ ತೊಡಗಿರುವ ಆರೋಪದ ಮೇಲೆ ಈ ದಾಳಿಗಳನ್ನು ನಡೆಸಲಾಗಿದೆ.
Exit mobile version