Bengaluru: ಜನ ನಗರದಲ್ಲಿನ ರಸ್ತೆ ಗುಂಡಿಗಳಿಂದ ಬೇಸತ್ತಿದ್ದಾರೆ. ಗುಂಡಿಗಳನ್ನು ತಪ್ಪಿಸಿ ವಾಹನ ಸವಾರರು (Oppose Property Tax campaign) ಅಪಘಾತಕ್ಕೀಡಾಗುತ್ತಿದ್ದಾರೆ. ಇದು ಅನೇಕ
ಜೀವಗಳನ್ನು ಬಲಿ ತೆಗೆದುಕೊಂಡಿದೆ. ಗುಂಡಿಗಳನ್ನು ತುಂಬಿಸುವಂತೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದರೂ ಲೆಕ್ಕಿಸದೆ ಸರಕಾರ (Government) ನಿರಾಸಕ್ತಿ ತೋರಿದೆ.
ಸರ್ಕಾರದ ಈ ಕ್ರಮದಿಂದ ಬೇಸತ್ತಿರುವ ಪೂರ್ವ ಬೆಂಗಳೂರಿನ ‘ಸಿಟಿಜನ್ಸ್ ಗ್ರೂಪ್, ಈಸ್ಟ್ ’ (Citizens groups east)ಸಂಘಟನೆ ಸದಸ್ಯರು ತಾವೇ ಗುಂಡಿ ಮುಚ್ಚಿಕೊಂಡಿದ್ದಾರೆ.
ಅಲ್ಲದೆ ಅವರು “ಆಸ್ತಿ ತೆರಿಗೆ ವಿರೋಧಿಸಿ” ಅಭಿಯಾನವನ್ನು (Oppose Property Tax campaign) ಪ್ರಾರಂಭಿಸಿದ್ದಾರೆ.

ಹಾಲನಾಯಕನಹಳ್ಳಿ ಮುನೇಶ್ವರ (Muneshwara) ಬಡಾವಣೆಯಲ್ಲಿ ಮತ್ತು ಚೂಡಸಂದ್ರದ (Choodasandra) 6 ಕಿ.ಮೀ ರಸ್ತೆಯುದ್ದಕ್ಕೂ ಇದ್ದ ಗುಂಡಿಗಳನ್ನು ಗುಂಪಿನ ಸದಸ್ಯರು ಸ್ವಂತ
ಖರ್ಚಿನಲ್ಲಿ ಮುಚ್ಚಿದರು. ಇದಕ್ಕೆ ಗ್ರೂಪ್ ಸಂಸ್ಥಾಪಕ ಟೆಕ್ಕಿ ಆರಿಫ್ ಮುದ್ಗಲ್ (32) (Aarif Mudgal) ಮಾತನಾಡಿ, ನಾನು ಈ ಕಾಮಗಾರಿಗೆ 270,000 ರೂ. ನನಗೆ ಸಾಲವಿದೆ. ಕೆಲವು ದಿನಗಳ ಹಿಂದೆ,
ನನ್ನ ಅಪಾರ್ಟ್‌ಮೆಂಟ್(Apartment) ಬಳಿ ವಾಸಿಸುತ್ತಿದ್ದ ಮಹಿಳೆಯೊಬ್ಬರು ಅವರು ಪ್ರಯಾಣಿಸುತ್ತಿದ್ದ ಆಟೋ ಗುಂಡಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಗಾಯಗೊಂಡಿದ್ದರು. ನಂತರ ಅದೇ ಗುಂಡಿಯನ್ನು
ತಪ್ಪಿಸಲು ಹೋಗಿ ಇ-ಕಾಮರ್ಸ್ (E-commerce)ಸಂಸ್ಥೆಯ ಡೆಲಿವರಿ ಏಜೆಂಟ್ (Delivery agent) ಆಗಸ್ಟ್ 14 ರ ರಾತ್ರಿ ಕಾರಿಗೆ ಡಿಕ್ಕಿ ಹೊಡೆದು ಕಾಲು ಮುರಿದುಕೊಂಡರು. ನನಗೆ ಇದರಿಂದ ತುಂಬಾ
ಬೇಜಾರು ಆಗಿ ಸ್ವತಃ ಗುಂಡಿ ಮುಚ್ಚಲು ನಿರ್ಧರಿಸಿದೆ.
ಐದು ವರ್ಷಗಳ ಹಿಂದೆ ಈ ‘ಸಿಟಿಜನ್ಸ್ ಗ್ರೂಪ್, ಈಸ್ಟ್ ಬೆಂಗಳೂರು’ ಅನ್ನು ಸ್ಥಾಪಿಸಿದೆ.ಗುಂಡಿ ಮುಚ್ಚಲು ಈ ಸಂಘಟನೆಯ ಸದಸ್ಯರು ಹಣ ನೀಡಿದ್ದಾರೆ.ನಾವು ಕೆಲವು ಗುಂಡಿಗಳನ್ನು ಇದರ ಸಹಾಯದಿಂದ
ಮುಚ್ಚಿದ್ದೇವೆ. ಆದರೆ ನನ್ನ ಬಳಿ ಹಣವಿಲ್ಲ, ಹೀಗಾಗಿ ನಾನು ಸಾಲ ಮಾಡಿದೆ. ಹಲವಾರು ಬಾರಿ ಕ್ಷೇತ್ರದ ಜನಪ್ರತಿನಿಧಿಗಳನ್ನು ಗುಂಡಿಗಳನ್ನು ಮುಚ್ಚುವಂತೆ ಭೇಟಿ ಮಾಡಿದ್ದೇವೆ, ಆದರೆ ಈ ಒಂದು ಸಮಸ್ಯೆಗೆ
ಇಲ್ಲಿಯವರೆಗೆ ಯಾರೂ ಕೂಡ ಸ್ಪಂದಿಸಲಿಲ್ಲ ಎಂದು ಸಂಘಟನೆಯ ಸದಸ್ಯರು ಹೇಳಿದ್ದಾರೆ.

ಈ ವಿಷಯಗಳ ಬಗ್ಗೆ ರಾಜಕಾರಣಿಗಳು ಸಹ ಅಸಡ್ಡೆ ಹೊಂದಿದ್ದಾರೆ. ಈ ಪ್ರದೇಶಗಳಲ್ಲಿ ವಾಸಿಸುತ್ತಿರುವ ಅಲ್ಲಿಯ ನಿವಾಸಿಗಳು ಅವರು ಇತರ ರಾಜ್ಯಗಳು ಅಥವಾ ಸ್ಥಳಗಳಿಂದ ಬಂದವರು ಎಂದು
ಅವರು ಭಾವಿಸುತ್ತಾರೆ. ಹೀಗಾಗಿ “ಆಸ್ತಿ ತೆರಿಗೆ ಬಹಿಷ್ಕಾರ ಅಭಿಯಾನ” ನಾವು ಇನ್ಮುಂದೆ ಆರಂಭಿಸಿದ್ದೇವೆ ಎಂದು ಸಂಘಟನೆಯ ಸದಸ್ಯ ಕುಮಾರ್ ಹೇಳಿದರು.
ರಶ್ಮಿತಾ ಅನೀಶ್