ಅನ್ನದಾತರಿಗೆ ನ್ಯಾಯ ಒದಗಿಸದೆ ಈ ಹೋರಾಟ ಕೊನೆಗೊಳ್ಳುವುದಿಲ್ಲ : ರಾಹುಲ್‌ ಗಾಂಧಿ

Congress

ಅನ್ನದಾತರಿಗೆ ನ್ಯಾಯ ಒದಗಿಸದೆ ಈ ಹೋರಾಟ ಕೊನೆಗೊಳ್ಳುವುದಿಲ್ಲ ಎಂದು ಕಾಂಗ್ರೆಸ್‌ ನಾಯಕ (Congress Leader) ರಾಹುಲ್‌ ಗಾಂಧಿ (Rahul Gandhi) ಅವರು ಹೇಳಿದ್ದಾರೆ.

ಈ ಕುರಿತು ಟ್ವೀಟ್‌(Tweet) ಮಾಡಿರುವ ಅವರು, ವರ್ಷ ಕಳೆದರೂ ಲಖೀಂಪುರ ಖೇರಿಯ ಹುತಾತ್ಮ ರೈತರಿಗೆ ನ್ಯಾಯ ಸಿಕ್ಕಿಲ್ಲ. ಕಾರಣ ಒಂದೇ – ಬಿಜೆಪಿ(BJP) ಯಾವಾಗಲೂ ಅಪರಾಧಿಗಳನ್ನು ರಕ್ಷಿಸುತ್ತಿದೆ.

ನಾವು ಭಾರತ ಐಕ್ಯತಾ ಯಾತ್ರೆ ಮಾಡಲು ನಿರ್ಧರಿಸಿದಾಗ, ರೈತರ ಚಳುವಳಿ (Our yatra is for farmers says rahul) ನಮಗೆ ದೊಡ್ಡ ಸ್ಫೂರ್ತಿಯಾಗಿತ್ತು.

https://youtu.be/nMHkS6pWl9U ಲಂಪಿ ಎಂಬ ರಕ್ಕಸ!

ಅನ್ನದಾತರಿಗೆ ನ್ಯಾಯ ಒದಗಿಸದೆ ಈ ಹೋರಾಟ ಕೊನೆಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಇನ್ನೊಂದೆಡೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿರುವ ರಾಜ್ಯ ಕಾಂಗ್ರೆಸ್‌(State Congress), ಹಿಂದಿ ಎಂದರೆ ಮೋಹ, ಕನ್ನಡಕ್ಕೆ ದ್ರೋಹ.

ಹಿಂದಿ ದಿವಸ್ ಮಾಡಲು ಎಲ್ಲಿಲ್ಲದ ಆಸಕ್ತಿ ತೋರಿದ್ದ ನಾಗಪುರದ ಗುಲಾಮಗಿರಿಯ ಬಿಜೆಪಿ ಸರ್ಕಾರಕ್ಕೆ ಕನ್ನಡವೆಂದರೆ ಅಸಡ್ಡೆ.

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (Our yatra is for farmers says rahul) ಅನುದಾನ ಕೊಡದಿರುವುದೇಕೆ ಪೇಸಿಎಂ ಅವರೇ, ಕನ್ನಡ ಕೊಲ್ಲಲು ವರಿಷ್ಠರ ಆದೇಶ ಬಂದಿದೆಯೇ? ಅಥವಾ 40% ಲೂಟಿಗೆ ಖಜಾನೆ ದಿವಾಳಿಯಾಗಿದೆಯೇ? ಎಂದು ಪ್ರಶ್ನಿಸಿದೆ.

40% ಸರ್ಕಾರದಲ್ಲಿ ನಾಲ್ಕು ನಿಂಬೆಹಣ್ಣಿನ ಹಣದಲ್ಲಿ ಬಸ್ ಪೂಜೆ ಮಾಡಬೇಕಾಗಿದೆ.

ಇದನ್ನೂ ಓದಿ : https://vijayatimes.com/rss-speaks-about-bjp-govt/

ಧರ್ಮ, ಸಂಸ್ಕೃತಿಗಳ ರಕ್ಷಣೆಯ ಮಾತಾಡುವ ಬಿಜೆಪಿ ಸರ್ಕಾರದವು ಸಂಸ್ಕೃತಿಗೆ ಕೇವಲ 100 ರೂಪಾಯಿ ಬೆಲೆ ಕಟ್ಟಿದ್ದು ವಿಪರ್ಯಾಸ. ಪೇಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರೇ, ನಿಜ ಹೇಳಿ 40% ಲೂಟಿಯಲ್ಲಿ ಖಜಾನೆ ದಿವಾಳಿಯಾಗಿದೆಯೇ? ಪೂಜೆಗೂ ಗತಿ ಇಲ್ಲದಗಿದೆಯೇ?

ಇನ್ನೊಂದೆಡೆ ಕೈಮಗ್ಗದ ಮೀಸಲಾತಿ ಕಾಯ್ದೆ ಜಾರಿಗೊಳಿಸಲಾಗುವುದು ಎಂದಿತ್ತು ಬಿಜೆಪಿ. ಇದು ಕೇವಲ ಮತಗಳಿಕೆಗಾಗಿ ಹೇಳಿದ ಸುಳ್ಳು ಮಾತ್ರ. ಈಗ ತನ್ನ ಅಸಲಿ ಕೈಮಗ್ಗ ವಿರೋಧಿ ನೀತಿಯನ್ನು ತೋರುತ್ತಿದೆ.

ಪಾಲಿಸ್ಟರ್ ರಾಷ್ಟ್ರಧ್ವಜ ಮಾಡಿದರು, ಕೈಮಗ್ಗಕ್ಕೆ GST ಹೊರೆ ಹೊರೆಸಿದರು, ನೇಕಾರಿಗೆ ನೆರವು ನೀಡದೆ ಮೋಸ ಮಾಡಿದರು, ಯಾಕೆ ಹೀಗೆ? ಎಂದು ಟೀಕಿಸಿದೆ.
Exit mobile version