ಮತ್ತೊಂದು ಮಸೀದಿ ಕಳೆದುಕೊಳ್ಳಲು ನಾನು ಬಯಸುವುದಿಲ್ಲ : ಓವೈಸಿ!

Asaduddin

ಬಾಬರಿ ಮಸೀದಿಯಂತೆ(Mosque) ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ನಾನು ಬಯಸುವುದಿಲ್ಲ. ಕಾಶಿಯ ಜ್ಞಾನವ್ಯಾಪಿ(Gyanvapi Mosque) ಮಸೀದಿಯ ಕುರಿತು ಸ್ಥಳೀಯ ನ್ಯಾಯಾಲಯ ನೀಡಿರುವ ತೀರ್ಪು 1991ರ ಆರಾಧನಾ ಸ್ಥಳಗಳ ಕಾಯ್ದೆಯ ಉಲ್ಲಂಘನೆಯಾಗಿದೆ.

ಈ ಬಗ್ಗೆ ನಾವು ಸುಪ್ರೀಂಕೋರ್ಟ್‍ನಲ್ಲಿ(SupremeCourt) ಹೋರಾಟ ನಡೆಸುತ್ತೇವೆ ಎಂದು ಆಲ್ ಇಂಡಿಯಾ ಮಜ್ಲಿಸ್- ಇ- ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ(Asaduddin Owaisi) ಹೇಳಿದ್ದಾರೆ. ಮಸೀದಿಗಳನ್ನು ಆಕ್ರಮಿಸಿಕೊಳ್ಳುವುದು ಮತ್ತು ಅಲ್ಲಿ ಹಕ್ಕು ಸಾಧಿಸುವುದು 1991ರಲ್ಲಿ ರೂಪಿಸಲಾಗಿರುವ ಆರಾಧನಾ ಸ್ಥಳಗಳ ಕಾಯ್ದೆಯ ಉಲ್ಲಂಘನೆಯಾಗುತ್ತದೆ. 1947ರಲ್ಲಿ ಯಾವ ಧರ್ಮಿಯರು ಎಲ್ಲಿ ಪೂಜಿಸುತ್ತಿರುತ್ತಾರೋ ಅವರಿಗೆ ಆ ಜಾಗದ ಮೇಲೆ ಅಧಿಕಾರವಿರುತ್ತದೆ.

ದಿಢೀರನೇ ಬಂದು ಇದೀಗ ಮಸೀದಿಯು ದೇವಸ್ಥಾನದ ಮೇಲಿದೆ. ಹೀಗಾಗಿ ನಮಗೆ ದೇವಸ್ಥಾನ ಬೇಕೆನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ಈಗಾಗಲೇ ಮುಸ್ಲಿಮರು ಬಾಬರಿ ಮಸೀದಿಯನ್ನು ಕಳೆದುಕೊಂಡಿದ್ದಾರೆ. ಈಗ ಇನ್ನೊಂದು ಮಸೀದಿಯನ್ನು ಕಳೆದುಕೊಳ್ಳಲು ಮುಸ್ಲಿಮರು ಬಯಸುವುದಿಲ್ಲ ಎಂದು ಸಂಸದ ಅಸಾದುದ್ದೀನ್ ಓವೈಸಿ ಬೇಸರ ವ್ಯಕ್ತಪಡಿಸಿದ್ದಾರೆ. ವಾರಣಾಸಿ ನ್ಯಾಯಾಲಯ ನೀಡಿರುವ ತೀರ್ಪಿನ ವಿರುದ್ದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸುಪ್ರೀಂಕೋರ್ಟ್‍ಗೆ ಮೊರೆ ಹೋಗಬೇಕೆಂದು ಮನವಿ ಮಾಡುತ್ತೇನೆ.

ಇನ್ನು ಯಾವುದೇ ಧಾರ್ಮಿಕ ಸ್ಥಳಗಳ ಸ್ವರೂಪವನ್ನು ಬದಲಾಯಿಸಲು ಪ್ರಯತ್ನಿಸುವರ ವಿರುದ್ದ ಕ್ರಮ ಕೈಗೊಳ್ಳಲು 1991ರ ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ಜ್ಞಾನವ್ಯಾಪಿ ಮಸೀದಿಯೊಂಗೆ ನುಗ್ಗಲು ಯತ್ನಿಸಿದವರ ವಿರುದ್ದ ಪ್ರಕರಣ ದಾಖಲಿಸಬೇಕು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಕೂಡಲೇ ಮದ್ಯಪ್ರವೇಶ ಮಾಡಿ, ಕಾನೂನನ್ನು ಉಲ್ಲಂಘಿಸುತ್ತಿರುವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು.

ಈ ರೀತಿಯ ಪ್ರಯತ್ನಗಳು ಸಮಾಜದಲ್ಲಿ ಒಡಕು ಮೂಡಿಸುತ್ತವೆ. ಹೀಗಾಗಿ ಯೋಗಿ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು.

Exit mobile version