ಪದ್ಮಾಸನ ಭಂಗಿಯಲ್ಲಿ ಸಮುದ್ರದಲ್ಲಿ ಈಜಿ ದಾಖಲೆ

ಮಂಗಳೂರು, ಡಿ. 18: ಮಂಗಳೂರಿನಲ್ಲಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಬೀಗ ಜಡಿದು ಸಮುದ್ರದಲ್ಲಿ ಯಶಸ್ವಿಯಾಗಿ ಈಜಿದ ನಾಗರಾಜ ಖಾರ್ವಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಸ್ಥಾಪಿಸಿದ್ದಾರೆ. 25, ನಿಮಿಷ 16 ಸೆಕೆಂಡ್ 63 ಫ್ರಾಕ್ಷನ್ ನಲ್ಲಿ ಒಂದು ಕಿ.ಮೀ ನಲ್ಲಿ ಒಂದು ಕಿ.ಮೀ ಗುರಿ ತಲುಪಿದರು.

ತಣ್ಣೀರುಬಾವಿ ಬೀಚ್ ನಲ್ಲಿ ತನ್ನ ಸಾಧನೆಗಾಗಿ ಆಯ್ದುಕೊಂಡ ಅವರು ಯಶಸ್ವಿಯಾಗಿ ಗುರಿ ತಲುಪಿದರು. ಸಮುದ್ರದಲ್ಲಿ ಬೆಳಗಿನ ಗಾಳಿ ಉತ್ತರದ ಕಡೆಗಿದ್ದರೂ ತನ್ನ ಸಂಪೂರ್ಣ ಶಕ್ತಿ ಬಳಸಿ ದಕ್ಷಿಣದ ಕಡೆಗೆ ನೆಟ್ಟಿದ್ದ ಧ್ವಜವನ್ನು ತಲುಪಿ ಗುರಿ ಮುಟ್ಟಿದರು. ತರಬೇತುದಾರ ಬಿ.ಕೃಷ್ಣ ನಾಯ್ಕ್ ಅವರು ನಾಗರಾಜ ಖಾರ್ವಿ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ನಾಗರಾಜ ಖಾರ್ವಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಶಾಂತಿವನದಲ್ಲಿ ಯೋಗ ಕಲಿತು ಪದ್ಮಾಸನ ಹಾಕಿ ನೀರಿನಲ್ಲಿ ಈಜುತ್ತಾ ಅಭ್ಯಾಸ ಮಾಡಿದೆ. ಸುಮಾರು ವರ್ಷಗಳ ಕಾಲ ಸತತ ಅಭ್ಯಾಸ ಮಾಡಿ ನೀರ ಮೇಲೆ ತೇಲಲು ಕಲಿತು ಇದೀಗ ಸಮುದ್ರದಲ್ಲಿ ಈಜಿ ಗುರಿ ಮುಟ್ಟಿರುವುದು ಸಂತಸ ತಂದಿದೆ.

ಈಜು ಗುರುಗಳು, ತರಬೇತುದಾರರು, ಯೋಜಕ ಸಂಸ್ಥೆ, ಅಲ್ಲಿನ ಈಜು ಪಟುಗಳು, ಕೋಸ್ಟಲ್ ಪೊಲೀಸ್, ಸ್ನೇಹಿತರು, ಸಹೋದ್ಯೋಗಿ ಮಿತ್ರರು ಹೀಗೆ ಎಲ್ಲರ ಸಹಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ, ಹಾಗೂ ಎಲ್ಲರಿಗೂ  ಕೃತಜ್ಞನಾಗಿದ್ದೇನೆ ಎಂದು ಹೇಳಿದರು.

Exit mobile version