ಕರಾಚಿ : ಪಾಕಿಸ್ತಾನದಲ್ಲಿ(Pakistan) ಬೆಲೆ ಏರಿಕೆ(Price Hike) ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬೆಲೆ ಏರಿಕೆ ಬಿಸಿ ಸಾಮಾನ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಪಾಕಿಸ್ತಾನದಲ್ಲಿ ಮಹಿಳೆಯೊಬ್ಬಳು ಬೆಲೆ ಏರಿಕೆ ಖಂಡಿಸಿ ಮಾಡಿರುವ ವಿಡಿಯೋ(Video) ಎಲ್ಲೆಡೆ ವೈರಲ್(Viral) ಆಗಿದೆ.

ಪ್ರಧಾನಿ ಶೆಹಬಾಜ್ ಷರೀಫ್(Shebaz Shareef) ಮತ್ತು ಪಿಎಂಎಲ್-ಎನ್ ನಾಯಕಿ ಮರ್ಯಮ್ ನವಾಜ್ ವಿರುದ್ಧ ಪಾಕಿಸ್ತಾನದ ಮಹಿಳೆಯ ಈ ವೀಡಿಯೊ ಎಲ್ಲೆಡೆ ಸದ್ದು ಮಾಡುತ್ತಿದೆ. ಇನ್ನು ಪಾಕಿಸ್ತಾನವು ದುರ್ಬಲ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದ್ದು, ರಾಜಕೀಯ ಪ್ರಕ್ಷುಬ್ಧತೆಯು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸರ್ಕಾರದ ಸಾಮರ್ಥ್ಯದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತಿದೆ.
ಹೀಗಾಗಿ ಹಣದುಬ್ಬರ(Inflation) ಏರಿಕೆಯ ಬಗ್ಗೆ ಕರಾಚಿ(Karachi) ಮಹಿಳೆಯೊಬ್ಬರು ಶೆಹಬಾಜ್ ಷರೀಫ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋವೊಂದು ಪಾಕಿಸ್ತಾನದಲ್ಲಿ ವೈರಲ್ ಆಗುತ್ತಿದೆ. ಕರಾಚಿಯ ರಾಬಿಯಾ ಎಂದು ಗುರುತಿಸಲಾದ ಮಹಿಳೆಯ ಈ ವಿಡಿಯೋದಲ್ಲಿ, ಹಣದುಬ್ಬರ ಏರಿಕೆಯ ನಂತರ ತಾನು ಎದುರಿಸುತ್ತಿರುವ ಆರ್ಥಿಕ ಸಮಸ್ಯೆ ಮತ್ತು ದೂರು ನೀಡುವುದನ್ನು ಕಾಣಬಹುದು.
ನಾನು ಏನು ಮಾಡಬೇಕು, ಮನೆ ಬಾಡಿಗೆ, ಭಾರಿ ವಿದ್ಯುತ್ ಬಿಲ್ಗಳನ್ನು ಪಾವತಿಸುವುದು, ನನ್ನ ಮಕ್ಕಳಿಗೆ ಹಾಲು ಮತ್ತು ಔಷಧಿಗಳನ್ನು ಖರೀದಿಸುವುದು, ನನ್ನ ಮಕ್ಕಳಿಗೆ ಆಹಾರ ನೀಡುವುದು ಯಾವುದು ನನ್ನಿಂದ ಸಾಧ್ಯವಾಗುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾದ ನಂತರ ಸಾಮಾನ್ಯ ಜನರು ತಮ್ಮ ಖರ್ಚುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಆಡಳಿತಗಾರರು ತಿಳಿಸಬೇಕು. ಇಲ್ಲದಿದ್ದರೆ, ನಾನು ನನ್ನ ಮಕ್ಕಳಿಗೆ ಆಹಾರ ನೀಡಬೇಕೇ ಅಥವಾ ನಾನು ಅವರನ್ನು ಕೊಲ್ಲಬೇಕೇ? ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾಳೆ.