220 ಕ್ಕೂ ಅಧಿಕ ಪಿಎಫ್ಐ ಕಾರ್ಯಕರ್ತರ  ಮೇಲೆ  ಪಿಎಆರ್‌ ಕಾಯ್ದೆ ಅಸ್ತ್ರ ; ಏನಿದು ಪಿಎಆರ್?

Bengaluru : ಎನ್ಐಎ (NIA) ದಾಳಿಯ ಬೆನ್ನಲ್ಲೇ ಇದೀಗ ರಾಜ್ಯ ಪೊಲೀಸರು ಪಿಎಫ್ಐ (PFI) ಸಂಘಟನೆಗೆ ಮತ್ತೊಂದು ಶಾಕ್‌ ನೀಡಿದ್ದಾರೆ.

ಇಂದು ಬೆಳಿಗ್ಗೆಯಿಂದಲೇ ರಾಜ್ಯದ ವಿವಿದೆಡೆ ಧಾಳಿ ನಡೆಸಿ, ಅನೇಕ ಪಿಎಫ್ಐ ಕಾರ್ಯಕರ್ತರನ್ನು (PAR Act on PFI workers) ಬಂಧಿಸಲಾಗಿದೆ.

ಸುಮಾರು 220ಕ್ಕೂ ಅಧಿಕ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Popular Front of India) ಕಾರ್ಯಕರ್ತರನ್ನು ಬಂಧಿಸಿರುವ ರಾಜ್ಯ ಪೊಲೀಸರು,

ಬಂಧಿತರ ವಿರುದ್ಧ ಪ್ರಥಮ ವರ್ತಮಾನ ವರದಿ (ಎಫ್ಐಆರ್) ಬದಲು ಮುಂಜಾಗ್ರತಾ ಕ್ರಮದ ವರದಿ (Preventive Action Report) ಕಾಯ್ದೆಯಡಿ ಕೇಸ್ಗಳನ್ನು ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪಿಎಆರ್ ಕಾಯ್ದೆ?

ಈ ಕಾಯೆಯಡಿಯಲ್ಲಿ ಬಂಧಿಸಲಾದ ವ್ಯಕ್ತಿಗಳನ್ನು ತಾಲೂಕು ದಂಡಾಧಿಕಾರಿಗಳ ಮುಂದೆ ಹಾಜರುಪಡಿಸಲಾಗುತ್ತದೆ. ಬಂಧಿತ ವ್ಯಕ್ತಿಯ ಸ್ಥಿರ ಹಾಗೂ ಚರಾಸ್ತಿ ಮೌಲ್ಯವೆಷ್ಟು ಎಂಬುದನ್ನು ನಮೂದಿಸಿ,

ತಾಲೂಕು ದಂಡಾಧಿಕಾರಿಗಳು, ಬಂಧಿತ ವ್ಯಕ್ತಿಯಿಂದ (PAR Act on PFI workers) ಮುಚ್ಚಳಿಕೆ ಪಡೆಯುತ್ತಾರೆ.

https://vijayatimes.com/sonia-gandhi-will-join-bharat-jodo-yatra/

ವಶಕ್ಕೆ ಪಡೆದ ವ್ಯಕ್ತಿಯ ಕೃತ್ಯದಿಂದ ಶಾಂತಿಗೆ ಭಂಗವಾಗುವ ಸಾಧ್ಯತೆ ಇದೆ  ಎಂಬ ಅನುಮಾನದ ಮೇಲೆ ಈ ಕಾಯ್ದೆಯ ಅಡಿಯಲ್ಲಿ ವ್ಯಕ್ತಿಯ ವಿಚಾರಣೆ ನಡೆಸಬಹುದು.  

https://www.youtube.com/watch?v=ns-yLm-u0EM&list=PLuyhotqqrzj-U8ocozO1OSEg6XHvIxV_x

ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ವಿಧಿ 107, 108, 109 ಮತ್ತು 151ರ ಅಡಿಯಲ್ಲಿ ಮುಂಜಾಗೃತ ಕೇಸ್ಗಳ ಮೇಲೆ ಪಿಎಆರ್  ಕಾಯ್ದೆಯನ್ನು ದಾಖಲಿಸಲಾಗುತ್ತದೆ.

ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಹುದು ಎಂಬ ಅನುಮಾನದ ಮೇಲೆ ವ್ಯಕ್ತಿಗಳನ್ನು ವಶಕ್ಕೆ ಪಡೆಯಲು ಪೊಲೀಸರಿಗೆ ಈ ಕಾಯ್ದೆಯ ಅಡಿಯಲ್ಲಿ ಅಧಿಕಾರವಿದೆ.

ಬಂಧಿತ ವ್ಯಕ್ತಿಗಳು ಬಾಂಡ್ ಶ್ಯೂರಿಟಿ ನೀಡಿದರೆ ಮಾತ್ರ ಬಿಡುಗಡೆ ಮಾಡಲಾಗುತ್ತದೆ. ಶ್ಯೂರಿಟಿ ನೀಡದೇ ಇದ್ದರೆ ಜೈಲಿಗೆ ಕಳುಹಿಸಲಾಗುತ್ತದೆ. ಸೂಕ್ತ ವ್ಯಕ್ತಿಗಳು ಮಾತ್ರ ಶ್ಯೂರಿಟಿ ನೀಡಬೇಕಾಗುತ್ತದೆ.

-ಮಹೇಶ್.ಪಿ.ಎಚ್

Exit mobile version