ಅರೆ ವೈದ್ಯಕೀಯ ಮಂಡಳಿ ವತಿಯಿಂದ 2023-24ನೇ ಸಾಲಿಗೆ ಪ್ಯಾರ ಮೆಡಿಕಲ್ (Para Medical courses application) ವಿವಿಧ ಕೋರ್ಸ್‌ಗಳ ಪ್ರವೇಶಕ್ಕೆ ಆನ್‌ಲೈನ್
ಮೂಲಕ ಕರ್ನಾಟಕ ನರ್ಸಿಂಗ್ ಹಾಗೂ ಅರೆ ವೈದ್ಯಕೀಯ ವಿಜ್ಞಾನಗಳ ನಿಯಂತ್ರಣ ಪ್ರಾಧಿಕಾರ ಅರ್ಜಿ ಆಹ್ವಾನಿಸಲಾಗಿದೆ. ಎಸ್‌ಎಸ್‌ಎಲ್‌ಸಿ / ಪಿಯುಸಿ ವಿಜ್ಞಾನ (Science) ವಿಭಾಗದಲ್ಲಿ ಅಧ್ಯಯನ
ಮಾಡಿದ ಅಭ್ಯರ್ಥಿಗಳು ಪ್ಯಾರ ಮೆಡಿಕಲ್ ವಿವಿಧ ಕೋರ್ಸ್‌ಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಜೂನ್(June) 01, 2023 ರಿಂದ ಆನ್‌ಲೈನ್ (Online)ಮೂಲಕ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಜೂನ್ 30, 2023 ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಈ ದಿನಾಂಕದೊಳಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತೆ ಮಂಡಳಿ ಪ್ರಕಟಣೆಯಲ್ಲಿ (Para Medical courses application) ತಿಳಿಸಿದೆ.
ಈ ಪ್ಯಾರ ಮೆಡಿಕಲ್ ಕೋರ್ಸ್ ಅನ್ನು ಎಸ್‌ಎಸ್‌ಎಲ್‌ಸಿ(SSLC) ನಂತರ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ 3 ವರ್ಷಗಳು, ಅದರ ಜೊತೆಗೆ 3 ತಿಂಗಳ ಇಂಟರ್ನ್‌ಶಿಪ್(Internship) ಇರುತ್ತದೆ.
ಇದನ್ನು ಓದಿ: ಮೋದಿ ಯುಎಸ್ ಭೇಟಿ ; ಮೇಕ್ ಇನ್ ಇಂಡಿಯಾ ಯೋಜನೆಗೆ ಭಾರೀ ಉತ್ತೇಜನ
ಪಿಯುಸಿ (PUC) ಅಭ್ಯರ್ಥಿಗಳಿಗೆ 2 ವರ್ಷಗಳು, ಅದರ ಜೊತೆಗೆ 3 ತಿಂಗಳ ಇಂಟರ್ನ್‌ಶಿಪ್ ಇರುತ್ತದೆ.
ಪ್ರವೇಶಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ನರ್ಸಿಂಗ್ ಹಾಗೂ ಅರೆ ವೈದ್ಯಕೀಯ ವಿಜ್ಞಾನಗಳ ನಿಯಂತ್ರಣ ಪ್ರಾಧಿಕಾರ (Regulatory Authority for Paramedical Sciences)
https://www.pmbkarnataka.org/ ಗೆ ಭೇಟಿ ನೀಡಿ ವಿವರಗಳನ್ನು ಪಡೆಯಬಹುದು.

ಲಭ್ಯವಿರುವ ಕೋರ್ಸ್‌ಗಳು :
ಡಿಪ್ಲೋಮಾ ಇನ್ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ (ಡಿಎಂಐಟಿ).
ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ (ಡಿಎಂಎಲ್ ಟಿ).
ಡಿಪ್ಲೋಮಾ ಇನ್ ಮೆಡಿಕಲ್ ರೆಕಾಡ್ರ್ಸ್ ಟೆಕ್ನಾಲಜಿ (ಡಿಎಂಆರ್ ಟಿ).
ಡಿಪ್ಲೋಮಾ ಇನ್ ಹೆಲ್ತ್ ಇನ್ಸ್‍ಪೆಕ್ಟರ್ (ಡಿಎಚ್ಐ).
ಡಿಪ್ಲೋಮಾ ಇನ್ ಆಪ್ತಾಲ್ಮಿಕ್ ಟೆಕ್ನಾಲಜಿ (ಡಿ.ಓ.ಟಿ).
ಡಿಪ್ಲೋಮಾ ಇನ್ ಆಪರೇಷನ್ ಥಿಯೇಟರ್ ಮತ್ತು ಅನಸ್ಥೇಶಿಯಾ ಟೆಕ್ನಾಲಜಿ (ಡಿ.ಓ.ಟಿ & ಎ.ಟಿ).
ಡಿಪ್ಲೋಮಾ ಇನ್ ಡಯಾಲಿಸಿಸ್ ಟೆಕ್ನಾಲಜಿ (ಡಿಡಿಟಿ).
ಡಿಪ್ಲೋಮಾ ಇನ್ ಡೆಂಟಲ್ ಹೈಜೀನ್ (ಡಿಡಿಎಚ್).
ಡಿಪ್ಲೋಮಾ ಇನ್ ಡೆಂಟಲ್ ಮೆಕ್ಯಾನಿಕ್ (ಡಿಡಿಎಂ).
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
ಆಧಾರ್ ಕಾರ್ಡ್.
ಅರ್ಜಿದಾರರ ಫೋಟೋ ಮತ್ತು ಸಹಿ.
ವ್ಯಾಸಂಗ ಪ್ರಮಾಣ ಪತ್ರ.
ಎಸ್‌ಎಸ್‌ಎಲ್‌ಸಿ, ಪಿಯುಸಿ ಮಾರ್ಕ್ಸ್ ಕಾರ್ಡ್.
ಜಾತಿ ಪ್ರಮಾಣ ಪತ್ರ.
ಆದಾಯ ಪ್ರಮಾಣ ಪತ್ರ.
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ – ರೂ.400/-.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ – ರೂ.250/-.
ರಶ್ಮಿತಾ ಅನೀಶ್