ನನಗೂ ಮುಖ್ಯಮಂತ್ರಿಯಾಗುವ ಕನಸಿದೆ ; ಹೊಸ ಕಿಚ್ಚು ಹೊತ್ತಿಸಿದ ಪರಮೇಶ್ವರ್‌ ಹೇಳಿಕೆ

Thumkur : ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಕಾಂಗ್ರೆಸ್‌(Congress) ಪಕ್ಷದ ಹಿರಿಯ ನಾಯಕ ಜಿ.ಪರಮೇಶ್ವರ್‌(Dr.G Parameshwara) ನೀಡಿರುವ ಹೇಳಿಕೆ ಇದೀಗ ರಾಜ್ಯ (Parameshwars dream becoming CM) ಕಾಂಗ್ರೆಸ್‌ನಲ್ಲಿ ಹೊಸ ಕಿಚ್ಚು ಹೊತ್ತಿಸಿದೆ.

ಮಧುಗಿರಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಜಿ. ಪರಮೇಶ್ವರ್‌ ಅವರು, ನಾನು ಸೇರಿದಂತೆ ಕಾಂಗ್ರೆಸ್‌ನಲ್ಲಿ 10ಕ್ಕೂ ಹೆಚ್ಚು ಮಂದಿ ಮುಖ್ಯಮಂತ್ರಿಯಾಗುವ ಕನಸು ಹೊಂದಿದ್ದಾರೆ.

ನಮ್ಮ ಪಕ್ಷದಲ್ಲಿ ಜಾತಿಯಾಧಾರಿತವಾಗಿ ಮುಖ್ಯಮಂತ್ರಿ ಮಾಡುವ ಪದ್ದತಿ ಇಲ್ಲ.  ಹೀಗಾಗಿ ನಮ್ಮಲ್ಲಿ ದಲಿತ ಮುಖ್ಯಮಂತ್ರಿ ಎನ್ನುವ ಪ್ರಸ್ತಾವನೆಗೆ ಅವಕಾಶವಿಲ್ಲ.

ಆದರೆ ನಾನು ಕೂಡಾ ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಹೀಗಾಗಿ ನಾನು ಮುಖ್ಯಮಂತ್ರಿಯಾಗುವ  ಕನಸು ಹೊಂದಿದ್ದೇನೆ ಎಂದು ಹೇಳಿದ್ದಾರೆ.

ನಿಮಗೆ ಮುಖ್ಯಮಂತ್ರಿ ಆಗುವ ಕನಸಿದೆಯೇ..? ಎಂಬ ಮಾದ್ಯಮದವರ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್‌ ಅವರು, ನಾನು ರಾಜಕೀಯ ಯಾಕೆ(Parameshwars dream becoming CM) ಮಾಡುತ್ತಿದ್ದೇನೆ ಹೇಳಿ..?

ಅಧಿಕಾರಕ್ಕೆ ಬರಬೇಕು ಎಂಬ ಆಸೆಯಿಂದಲ್ಲವೇ..? ನಾನು ಯಾಕೆ ಮುಖ್ಯಮಂತ್ರಿಯಾಗಬಾರದು.? ನಾನು ಸೇರಿದಂತೆ ಕಾಂಗ್ರೆಸ್‌ನಲ್ಲಿ  ಸುಮಾರು 10ಕ್ಕೂ ಹೆಚ್ಚು ಜನರು ಮುಖ್ಯಮಂತ್ರಿಯಾಗುವ ಕನಸು ಹೊಂದಿದ್ಧಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಿಡಿಯಾದ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಅಶ್ವಥ್‌ ನಾರಾಯಣ್‌ ; ಹೇಳಿದ್ದೇನು?

ಇನ್ನು ವಿಧಾನಸಭಾ ಚುನಾವಣೆ ವೇಳೆ ಜಿ.ಪರಮೇಶ್ವರ್‌ಅವರು ನೀಡಿರುವ ಈ ಹೇಳಿಕೆ ಸಿದ್ದರಾಮಯ್ಯ(Siddaramaiah) ಮತ್ತು ಡಿ.ಕೆ.ಶಿವಕುಮಾರ್‌(DK Shiva Kumar) ಅವರ ನಂತರ ಇದೀಗ ಕಾಂಗ್ರೆಸ್‌ನಲ್ಲಿ ಇನ್ನೊಂದು ಬಣ ಹುಟ್ಟಿಕೊಂಡಿದೆ ಎಂಬ ಚರ್ಚೆಯು ಆರಂಭವಾಗಿದೆ.

ಒಂದು ವೇಳೆ 2023ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಭಾರೀ ಪೈಪೋಟಿ ಉಂಟಾಗುವ ಸಾಧ್ಯತೆಯನ್ನು ಪರಮೇಶ್ವರ್‌ಅವರ ಹೇಳಿಕೆ ಬಿಚ್ಚಿಟ್ಟಿದೆ.

ಈಗಾಗಲೇ  ಬಹಿರಂಗವಾಗಿಯೇ   ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಇವರಿಬ್ಬರೂ ನಾನೇ ಮುಖ್ಯಮಂತ್ರಿ  ಎಂದು ಘೋಷಿಸಿದ್ಧಾರೆ.

ಇದೀಗ ಇವರಿಬ್ಬರ ನಡುವೆ ಪರಮೇಶ್ವರ್‌ಕೂಡಾ ನಾನು ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ಮೂಲಕ ಪರೋಕ್ಷವಾಗಿ  ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ವಿರುದ್ದ ಸಮರ ಸಾರಿದ್ದಾರೆ.

ದಲಿತ ಮುಖ್ಯಮಂತ್ರಿಯ ಕೂಗು ಕಾಂಗ್ರೆಸ್‌ನಲ್ಲಿ ಬಲವಾಗಿ ಕೇಳಿ ಬರುತ್ತಿದ್ದು, ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಗಾದಿಯ ಮೇಲೆ ಪರಮೇಶ್ವರ್‌ ಕೂಡಾ ಕಣ್ಣಿಟ್ಟಿದ್ದಾರೆ.  

ಒಂದು ವೇಳೆ ಸಮ್ಮಿಶ್ರ ಸರ್ಕಾರ ರಚನೆಯಾದರೆ, ದಲಿತ ಮುಖ್ಯಮಂತ್ರಿ ಕೂಗಿಗೆ ಬಲ ಬರಬಹುದು ಎಂಬುದು ಪರಮೇಶ್ವರ್‌ಅವರ ಲೆಕ್ಕಾಚಾರವಿರಬಹುದು.

Exit mobile version