ನಟಿ ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ ಡೇಟಿಂಗ್ ಸದ್ದು ; ಅಕ್ವೋಬರ್ ನಲ್ಲಿ ಮದುವೆಗೆ ಸಜ್ಜು?

Mumbai : ಬಾಲಿವುಡ್ (BollyWood) ಚಿತ್ರರಂಗದ ಬಿಂದಾಸ್ ನಟಿ ಪರಿಣಿತಿ ಚೋಪ್ರಾ (Actress Parineeti Chopra) ಮತ್ತು ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ (Raghav Chadha of Aam Aadmi Party) ಅವರು ನಿರಂತರವಾಗಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಇದೀಗ ಇದೇ ವರ್ಷದಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿದೆ.


ನಟಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಇದೇ ಅಕ್ಟೋಬರ್‌ನಲ್ಲಿ ಮದುವೆಯಾಗುವುದು ಖಚಿತ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹರಿದಾಡುತ್ತಿದೆ ಇದರ ಜೊತೆಗೆ ಮೂಲಗಳು ಈ ಬಗ್ಗೆ ಮಾಹಿತಿ ನೀಡಿವೆ. ಈ ವರ್ಷದ ಅಕ್ಟೋಬರ್ ಅಂತ್ಯದ ವೇಳೆಗೆ ಇಬ್ಬರು ಮದುವೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ನಟಿ ಪರಿಣಿತಿ ಚೋಪ್ರಾ ಎಎಪಿ ಸಂಸದ ರಾಘವ್ ಚಡ್ಡಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಬಾಲಿವುಡ್ ನಟಿಯ ಈ ಸಂಬಂಧದ ಬಗ್ಗೆ ಸಾಕಷ್ಟು ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಇದ್ಯಾವುದಕ್ಕೂ ನಟಿ ಪರಿಣಿತಿ ಅವರು ಕಿಂಚಿತ್ತು ತಲೆಕೆಡಿಸಿಕೊಳ್ಳದೆ ಎಂದಿನಂತೆ ತಮ್ಮ ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಇದನ್ನೂ ಓದಿ : https://vijayatimes.com/dmk-files-vs-annamalai/

ಆದ್ರೆ, ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ಕುರಿತು ಭಾರಿ ವದಂತಿಗಳು ಹರಿದಾಡುತ್ತಲ್ಲೇ ಇದೆ. ಈ ಹಿಂದೆ ರಾಘವ್ ಅವರೊಂದಿಗೆ ಒಂದಲ್ಲ ಹಲವಾರು ಬಾರಿ ನಟಿ ಪರಿಣಿತಿ ಕಾಣಿಸಿಕೊಂಡಿದ್ದಾರೆ. ಅವರ ಆಗಾಗ್ಗೆ ಸಾರ್ವಜನಿಕ ಪ್ರದರ್ಶನಗಳು ಈ ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿವೆ.

ಈ ಎಲ್ಲಾ ಊಹಾಪೋಹಗಳ ನಡುವೆ, ಪರಿಣಿತಿ ಇತ್ತೀಚೆಗೆ ತಮ್ಮ ಉಂಗುರದ ಬೆರಳಿಗೆ ಬೆಳ್ಳಿಯ ಪಟ್ಟಿಯನ್ನು ಧರಿಸಿರುವುದು ಕಂಡುಬಂದಿದೆ. ಮೂಲಗಳ ಪ್ರಕಾರ, ಈ ವರ್ಷದ ಅಕ್ಟೋಬರ್ ತಿಂಗಳ ಅಂತ್ಯದ ವೇಳೆಗೆ ನಟಿ ಪರಿಣಿತಿ ಮತ್ತು ರಾಘವ್ ಚಡ್ಡಾ ಅವರ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : https://vijayatimes.com/karnataka-assembly-election-list/

ಇದಕ್ಕೆ ಕುತೂಹಲಕಾರಿ ಎಂಬಂತೆ ನಟಿ ಪರಿಣಿತಿಯ ಸೋದರ ಸಂಬಂಧಿ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಕೂಡ ಅಕ್ಟೋಬರ್ ತಿಂಗಳಲ್ಲಿ ಜಿಯೋ ಮಾಮಿ ಚಲನಚಿತ್ರೋತ್ಸವಕ್ಕಾಗಿ ಭಾರತಕ್ಕೆ ಬರಲಿದ್ದಾರೆ. ಇದೇ ವೇಳೆ ಮದುವೆ ಇಟ್ಟುಕೊಂಡರೆ ಸರಿಯಾಗಲಿದೆ ಎಂದು ಅಂದಾಜಿಸಿದ್ದಾರೆ ಎನ್ನಲಾಗಿದೆ.

Exit mobile version