2022 ರಲ್ಲಿ $2 ಬಿಲಿಯನ್ ಆದಾಯವನ್ನು ದಾಟಿದ ಭಾರತದ ಮೊದಲ ಪ್ಯಾಕೇಜ್ಡ್ ಫುಡ್ ಕಂಪನಿ Parle!

India : ಸ್ವದೇಶಿ ಬಿಸ್ಕತ್ ಬ್ರಾಂಡ್ ಪಾರ್ಲೆ(Parle Crosses 2 Billion), 2022ರ ಆರ್ಥಿಕ ವರ್ಷದಲ್ಲಿ $2 ಬಿಲಿಯನ್ ಆದಾಯವನ್ನು ದಾಟಿದ ಭಾರತದ ಮೊದಲ ಪ್ಯಾಕೇಜ್ಡ್ ಫುಡ್ ಕಂಪನಿ ಎನ್ನುವ ಕೀರ್ತಿಗೆ ಪಾತ್ರವಾಗಿದೆ.


ಪಾರ್ಲೆ-ಜಿ(Parle Crosses 2 Billion), ಮೋನಾಕೋ ಮತ್ತು ಮೆಲೋಡಿಯಂತಹ ಬ್ರ್ಯಾಂಡ್‌ಗಳನ್ನು ಮಾರಾಟ ಮಾಡುವ ಪಾರ್ಲೆ ಉತ್ಪನ್ನಗಳು,

2022 ಮಾರ್ಚ್ 31 ರಂದು ಕೊನೆಗೊಂಡ ಹಣಕಾಸು ವರ್ಷದಲ್ಲಿ ಕಂಪನಿಯ ನಿವ್ವಳ ಮಾರಾಟವು ಶೇಕಡಾ 9 ರಷ್ಟು ಏರಿಕೆಯಾಗಿ 16,202 ರೂ. ಗೆ ಏರಿತ್ತು.

ಹಿಂದಿನ ವರ್ಷ ಕಂಪೆನಿಯು 14,923 ಕೋಟಿ ರೂಪಾಯಿಗಳ ಮಾರಾಟವನ್ನು ಹಾಗೂ 1,366 ಕೋಟಿ ರೂಪಾಯಿಗಳ ಲಾಭವನ್ನು ದಾಖಲಿಸಿದೆ ಎಂದು ಕಂಪನಿಯು,

ಕಂಪನಿಗಳ ರಿಜಿಸ್ಟ್ರಾರ್‌ಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ ಮಾಹಿತಿ ನೀಡಿದೆ. ಸಾಂಕ್ರಾಮಿಕ ರೋಗ ಹಾಗೂ ಹಣದುಬ್ಬರದ ಕಾರಣದಿಂದಾಗಿ ಗ್ರಾಹಕರು ಖರ್ಚನ್ನು ಕಡಿತಗೊಳಿಸುತ್ತಿರುವ ಸಂದರ್ಭದಲ್ಲಿ,

ಇದನ್ನೂ ಓದಿ : https://vijayatimes.com/bmtc-bus-driver-video-viral/

ಪಾರ್ಲೆ ಜಿ ಬ್ರ್ಯಾಂಡ್‌ಗಳು ಅಭಿವೃದ್ಧಿಯಾಗಲು, ವಿಶೇಷವಾಗಿ ಅದರ ಮೌಲ್ಯ, ಜನಪ್ರಿಯತೆ ಹಾಗೂ ಹಣ ತಂತ್ರವು ಸಹಾಯ ಮಾಡಿದೆ ಎಂದು ಪಾರ್ಲೆ ಉತ್ಪನ್ನಗಳು ಅಭಿಪ್ರಾಯ ವ್ಯಕ್ತಪಡಿಸಿವೆ.

“ಪಾರ್ಲೆ ಉತ್ಪನ್ನಗಳ ಒಟ್ಟು ಮಾರಾಟದಲ್ಲಿ ಸುಮಾರು 55 ರಿಂದ 60 ಪ್ರತಿಶತ ಪಾಲನ್ನು ಹೊಂದಿರುವ ಗ್ರಾಮೀಣ ಪ್ರದೇಶಗಳು, ಪಾರ್ಲೆ ಉತ್ಪನ್ನಗಳ ಬೆಳವಣಿಗೆಗೆ ಉತ್ತೇಜನ ನೀಡುತ್ತಿವೆ.

ಜೊತೆಗೆ, ನಾವು 2022 ರಲ್ಲಿ ನಮ್ಮ ವಿತರಣೆಯನ್ನು ಶೇಕಡಾ 12 ರಷ್ಟು ಹೆಚ್ಚಿಸಿದ್ದೇವೆ, ಇದು ಕೂಡ ನಮಗೆ ಸಹಾಯ ಮಾಡಿದೆ” ಎಂದು ಪಾರ್ಲೆ ಉತ್ಪನ್ನಗಳ ಹಿರಿಯ ವಿಭಾಗದ ಮುಖ್ಯಸ್ಥ ಮಯಾಂಕ್ ಶಾ ತಿಳಿಸಿದರು. ಯಾವುದೇ ವ್ಯಾಪಾರ ಯೋಜನೆಗಳು ಅಥವಾ ಪ್ರಚಾರವನ್ನು ನಡಸದೇ ಹೋದರೂ, ಪಾರ್ಲೆ ಕಂಪನಿಯ ಕಳೆದ ವರ್ಷದ ಲಾಭವು ಅಸಾಮಾನ್ಯವಾಗಿದೆ.

ನಾವು ಮಾರ್ಕೆಟಿಂಗ್ ಅನ್ನು ಕಡಿತಗೊಳಿಸಿದ್ದೆವು, ಹಾಗೂ ಸಾಂಕ್ರಾಮಿಕ ಸಮಯದಲ್ಲಿ ವೆಚ್ಚ ಅಸ್ಥಿರವಾಗುತ್ತಿದ್ದ ಸಂದರ್ಭದಲ್ಲಿಯೂ ಗಮನಾರ್ಹವಾಗಿ ಉಳಿಸಿದ್ದೇವೆ ಎಂದು ಕಾರ್ಯನಿರ್ವಾಹಕರು ಹೇಳಿದರು. ಪಾರ್ಲೆ ಬಿಸ್ಕತ್ತು ವಿಭಾಗಗಳು, ಕಂಪೆನಿಯ ವಾರ್ಷಿಕ ಮಾರಾಟಕ್ಕೆ ಶೇಕಡಾ 70 ರಷ್ಟು ಕೊಡುಗೆ ನೀಡುತ್ತವೆ.

https://youtu.be/j-7JgkXjCBc ಸೂರತ್ಕಲ್ : ಅಕ್ರಮ ಟೋಲ್ ನಮಗೆ ಬೇಡ, ಟೋಲ್ ಕಿತ್ತುಬಿಸಾಡಿ!

ನಂತರದ ಸ್ಥಾನ ತಿಂಡಿಗಳು ಮತ್ತು ಮಿಠಾಯಿ ವಿಭಾಗದ್ದಾಗಿದ್ದು, ಸಧ್ಯ ಪಾರ್ಲೆ ಭಾರತದಲ್ಲಿ 132 ಉತ್ಪಾದನಾ ಸೌಲಭ್ಯಗಳನ್ನು ನಿರ್ವಹಿಸುತ್ತಿದೆ.

Exit mobile version