ಮುಗಿಯದ ಪಠಾಣ್‌ ವಿವಾದ ; ದೀಪಿಕಾ, ಶಾರೂಖ್‌ ಪ್ರತಿಕೃತಿ ಸುಟ್ಟುಹಾಕಿದ ಭಜರಂಗದಳ ಕಾರ್ಯಕರ್ತರು!

Uttar Pradesh : ಪಠಾಣ್‌ (Pathan movie controversy) ಚಿತ್ರದ ಬೇಷರಂ ರಂಗ್‌ ಹಾಡಿನ ದೃಶ್ಯಗಳು ಮತ್ತು ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಧರಿಸಿರುವ ಕೇಸರಿ ಬಟ್ಟೆಗೆ ಇದೀಗ ದೇಶದೆಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಭಜರಂಜಗದಳ ಮತ್ತು ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ‘ಶಾರೂಖ್‌ ಖಾನ್‌ (Pathan movie controversy) ಮತ್ತು ನಟಿ ದೀಪಿಕಾ ಪಡುಕೋಣೆ’ ಅವರ ಪೋಸ್ಟರ್‌ಗೆ ಬೆಂಕಿ ಹಚ್ಚಿ, ಬಹಿಷ್ಕಾರ ಘೋಷಣೆ ಕೂಗಿದ್ದಾರೆ.

ಈ ಘಟನೆ ಉತ್ತರಪ್ರದೇಶದ, ಶಹಜಹಾನ್ಪುರದಲ್ಲಿ ನಡೆದಿದ್ದು,

ಇದನ್ನೂ ನೋಡಿ : http://ಫಿಫಾ ಫುಟ್ಬಾಲ್‌ ವಿಶ್ವಕಪ್ ಗೆದ್ದ ಸಂಭ್ರವಮವನ್ನು ಅರ್ಜೆಂಟೈನಾ ಪ್ರಜೆಗಳು ಅದ್ದೂರಿಯಿಂದ ಆಚರರಿಸುತ್ತಿದ್ದಾರೆ.

ಪಠಾಣ್‌ ಚಿತ್ರದ ನಟ ಶಾರೂಖ್‌ ಖಾನ್‌ ಮತ್ತು ನಟಿ ದೀಪಿಕಾ ಪಡುಕೋಣೆ ವಿರುದ್ಧ ಸಿಡಿದೆದ್ದ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ (Vishwa Hindu Parishad)

ಕಾರ್ಯಕರ್ತರು ಚಿತ್ರದ ಪೋಸ್ಟರ್‌ಗೆ ಬೆಂಕಿ ಹಚ್ಚಿ, ಬಹಿಷ್ಕಾರ ಘೋಷಣೆ ಕೂಗಿ ಕೆಲ ಕಾಲ ಪ್ರತಿಭಟನೆ ನಡೆಸಿದ್ದಾರೆ.

ಸದ್ಯ ಇದೇ ರೀತಿ ದೇಶದ ಹಲವೆಡೆ ವ್ಯಾಪಕವಾಗಿ ನಟಿ ದೀಪಿಕಾ ಪಡುಕೋಣೆ ಹಾಗೂ ಪಠಾಣ್‌ ಚಿತ್ರದ ವಿರುದ್ಧ ಭಾರಿ ವಿರೋಧ ವ್ಯಕ್ತಪಡಿಸಲಾಗುತ್ತಿದೆ.

ಮೊನ್ನೆಯಷ್ಟೇ ಮಧ್ಯಪ್ರದೇಶದ (Madhya Pradesh) ಇಂದೋರ್ನಲ್ಲಿ ಸಂಘಟನೆಯೊಂದು ನಟಿ ದೀಪಿಕಾ ಪಡುಕೋಣೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿತು.

ನಟಿ ದೀಪಿಕಾ ಕೇಸರಿ ಬಟ್ಟೆ ಧರಿಸಿ ಕುಣಿದಿರುವುದು ಹಾಗೂ ಬೇಷರಂ ರಂಗ್‌ ಹಾಡು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ನಟ ಶಾರೂಖ್‌ ಖಾನ್‌ ಇರುವ ಪೋಸ್ಟರ್‌ಗೆ (Poster) ಭಜರಂಗದಳ ಕಾರ್ಯಕರ್ತರು ಚಪ್ಪಲಿ ಹಾರ ಹಾಕಿ, ಪೋಸ್ಟರ್ಗೆ ಚಪ್ಪಲಿಯಿಂದ ಹೊಡೆದಿದ್ದಾರೆ.

ಈ ಚಿತ್ರವನ್ನು ಬಿಡುಗಡೆಗೊಳಿಸದಂತೆ ಬೆದರಿಕೆ ಹಾಕಿದ್ದಲ್ಲದೇ, ಚಿತ್ರದಲ್ಲಿ ಇರುವ ಬೇಷರಂ ಹಾಡನ್ನು ಕಿತ್ತುಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : https://vijayatimes.com/fifa-worldcup-2022-worldrecord/

ಸದ್ಯ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿರುವ ಶಾರೂಖ್‌ ಖಾನ್‌, ನಟಿ ದೀಪಿಕಾ ಪಡುಕೋಣೆ (Deepika Padukone) ನಟಿಸಿರುವ ಪಠಾಣ್‌ ಚಿತ್ರ ಜನವರಿ 2023ಕ್ಕೆ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಆದ್ರೆ, ಸಿನಿಮಾ ವಿರುದ್ಧ ಭಾರಿ ಪ್ರತಿಭಟನೆಗಳು ಕೇಳಿಬರುತ್ತಿರುವ ಹಿನ್ನೆಲೆ ಚಿತ್ರತಂಡ ಸಿನಿಮಾ ಬಿಡುಗಡೆ ಮಾಡುವ ದಿನಾಂಕವನ್ನು ಮುಂದೂಡಲಿದೆಯಾ? ಅಥವಾ ಚಿತ್ರದ ಹಾಡನ್ನು ಕಟ್‌ ಮಾಡಲಿದೆಯಾ? ಎಂಬುದನ್ನು ಕಾದು ನೋಡಬೇಕಿದೆ.
Exit mobile version