New Delhi: ಭಾರತದ ಪ್ರಮುಖ ಸೇನಾನೆಲೆ ಪಠಾಣ್ ಕೋಟ್ (Pathankot Mastermind Killed in PAK) ಮೇಲೆ ನಡೆದಿದ್ದ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಭಾರತದ ಮೋಸ್ಟ್
ವಾಂಟೆಡ್ ಭಯೋತ್ಪಾದಕ ಶಾಹಿದ್ ಲತೀಫ್ (Shahid Lathief) ನನ್ನು ಬುಧವಾರ ಪಾಕಿಸ್ತಾನದ ಸಿಯಾಲ್ ಕೋಟ್ನಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಮೋಸ್ಟ್ ವಾಂಟೆಡ್ (Most Wanted) ಭಯೋತ್ಪಾದಕ ಶಾಹಿದ್ ಲತೀಫ್ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ) (Pathankot Mastermind Killed in PAK)
ಸದಸ್ಯನಾಗಿದ್ದು, ಜನವರಿ 2, 2016 ರಂದು ನಡೆದಿದ್ದ ಪಠಾಣ್ಕೋಟ್ ದಾಳಿಯ ಪ್ರಮುಖ ಸಂಚುಕೋರನಾಗಿದ್ದನು. ಶಾಹಿದ್ ಲತೀಫ್ ಪಾಕಿಸ್ತಾನದ ಸಿಯಾಲ್ಕೋಟ್ನಿಂದ ಪಠಾಣ್ ಕೋಟ್ ಮೇಲೆ ದಾಳಿಯನ್ನು
ಸಂಘಟಿಸಿ, ಅದನ್ನು ಕಾರ್ಯಗತಗೊಳಿಸಲು ನಾಲ್ವರು ಜೈಶ್-ಎ-ಮೊಹಮ್ಮದ್ (Jaish-A-Mohammed) ಭಯೋತ್ಪಾದಕರನ್ನು ಪಠಾಣ್ಕೋಟ್ಗೆ ಕಳುಹಿಸಿದ್ದನು.
ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದನೆಯ ಆರೋಪದ ಮೇಲೆ ನವೆಂಬರ್ 1994 ರಲ್ಲಿ ಲತೀಫ್ ನನ್ನು ಭಾರತದಲ್ಲಿ ಬಂಧಿಸಿ, ವಿಚಾರಣೆಗೆ
ಒಳಪಡಿಸಲಾಯಿತು. ನಂತರ ಆತನನ್ನು ಜೈಲಿನಲ್ಲಿರಿಸಲಾಯಿತು. ಭಾರತದಲ್ಲಿ ಶಿಕ್ಷೆ ಅನುಭವಿಸಿದ ನಂತರ, 2010ರಲ್ಲಿ ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಗಿತ್ತು.
ಇನ್ನು 1999ರಲ್ಲಿ ಇಂಡಿಯನ್ ಏರ್ ಲೈನ್ಸ್ (Indian Air Lines) ವಿಮಾನ ಅಪಹರಣ ಪ್ರಕರಣದಲ್ಲೂ ಲತೀಫ್ ಆರೋಪಿಯಾಗಿದ್ದ. 2010ರಲ್ಲಿ ಬಿಡುಗಡೆಯಾದ ನಂತರ ಲತೀಫ್ ಪಾಕಿಸ್ತಾನದ ಜಿಹಾದಿ
ಗುಂಪು ಸೇರಿದ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ಹೇಳಿದೆ. ಹೀಗಾಗಿ ಭಾರತ ಸರ್ಕಾರ ಆತನನ್ನು ವಾಂಟೆಡ್ ಭಯೋತ್ಪಾದಕ ಎಂದು ಪಟ್ಟಿ ಮಾಡಿದೆ.
ಇದನ್ನು ಓದಿ: ಪಠಾಣ್ ಕೋಟ್ ದಾಳಿಯ ರೂವಾರಿ ಶಾಹಿದ್ ಲತೀಫ್ ಪಾಕಿಸ್ತಾನದಲ್ಲಿ ಹತ್ಯೆ