ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್‌ ನೌಕರನೇ ಆಸ್ಪತ್ರೆ ವೈದ್ಯ! ಎಲ್ಲಿ ಗೊತ್ತಾ… ಇಲ್ಲಿದೆ ಮಾಹಿತಿ..

Pavagadh : ಕೀಲು ಮೂಳೆಗೆ ಸಂಬಂಧಿಸಿದ ರೋಗಿಗಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡುವುದು ಯಾರು ಗೊತ್ತಾ? (pavagadh govt hospital incident) ನಿಮ್ಮ ಉತ್ತರ ವೈದ್ಯರು ಎಂದು ಇದ್ದರೆ ಅದು

ತಪ್ಪು ಏಕೆಂದರೆ ರೋಗಿಗಳ ತಪಾಸಣೆ ಮಾಡುವುದು ಡಿ ಗ್ರೂಪ್‌ ನೌಕರ (D Group employee) ಹೌದು ಇದು ನೂರಕ್ಕೆ ನೂರರಷ್ಟುನಿಜ.

ಪಾವಗಡದಲ್ಲಿ ಕೀಲು ಮೂಳೆಗೆ ಸಂಬಂಧಿಸಿದಂತೆ ಯಾವುದೇ ರೋಗಿ ಹೋದರೂ ಕೂಡ ರೋಗಿಗಳ ತಪಾಸಣೆ ಮಾಡುವುದು ಯಾವುದೇ ನುರಿತ ವೈದ್ಯನಲ್ಲ,

ಬದಲಿಗೆ ಡಿ ಗ್ರೂಪ್‌ ನೌಕರ. ಅಲ್ಲಿನ ಆಸ್ಪತ್ರೆಯ ವೈದ್ಯರು ದೀರ್ಘ ಕಾಲದ ರಜೆಗೆ ಹೋಗಿರುವ ಹಿನ್ನೆಲೆಯಲ್ಲಿ ಇಲ್ಲಿಯ ಡಿ ಗ್ರೂಪ್‌ ನೌಕರನೇ ಆ ವೈದ್ಯನ ಕೆಲಸವನ್ನು ಮಾಡುತ್ತಿದ್ದಾನೆ.

ಡಾಕ್ಟರ್‌ ಎಲ್ಲಿ ಎಂದು ರೋಗಿಗಳು ಕೇಳಿದರೆ ನಿಮಗೆ ಟ್ರೀಟ್‌ಮೆಂಟ್‌ ಬೇಕು ಅಂದರೆ ತೆಗೆದುಕೊಳ್ಳಿ ಇಲ್ಲದಿದ್ದರೆ ಹೋಗಿ ಎಂದು ಅತ್ಯಂತ ಬೇಜವಾಬ್ದಾರಿಯುತವಾಗಿ ಡಿ ಗ್ರೂಪ್‌ ನೌಕರರ ಅವಾಜ್‌ ಹಾಕುತ್ತಿದ್ದ ದೃಶ್ಯ

ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್‌ (Viral) ಆಗಿದೆ ಮತ್ತು ಈ ವಿಷಯವು ಗಂಭೀರವಾಗಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ : https://vijayatimes.com/electricity-price-increase/

ಇಲ್ಲಿಯ ಬಯಲು ಸೀಮೆ ಹತ್ತಿರದ ಪ್ರದೇಶದ ರೋಗಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಸುಸಜ್ಜಿತ ಸಾರ್ವಜನಿಕ ಆಸ್ಪತ್ರೆ ನಿರ್ಮಾಣವಾಗಿತ್ತು.

ಆದರೆ ಇಲ್ಲಿಯ ವೈದ್ಯರ ನಿರ್ಲಕ್ಷ್ಯದ ಪರಿಣಾಮವಾಗಿ ಇಲ್ಲಿಯ ರೋಗಿಗಳಿಗೆಆಸ್ಪತ್ರೆಯ ಹೊರಗುತ್ತಿಗೆ ಆಧಾರದ ಮೇಲೆ ಸೇರ್ಪಡೆಗೊಂಡಿದ್ದ ಡಿ.ಗ್ರೂಪ್‌ನ ಸಿಬ್ಬಂದಿಯೇ ಚಿಕಿತ್ಸೆ ನೀಡುವ ವಿಷಯವು ಇದೀಗ ಬೆಳಕಿಗೆ ಬಂದಿದೆ.

ಅಷ್ಟೇ ಅಲ್ಲದೆ ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಅನುಕೂಲ ಕಲ್ಪಿಸುವ ಹಿನ್ನಲೆಯಲ್ಲಿ ಗಡಿ ಭಾಗದ ತಾಲೂಕಿನಲ್ಲಿ ಬಳ್ಳಾರಿ ರಸ್ತೆಯ ಪಕ್ಕದಲ್ಲಿ ಹೈಟೆಕ್‌ ಆಸ್ಪತ್ರೆ (Hi-Tech Hospital)

ನಿರ್ಮಾಣಕ್ಕೆ ಸರ್ಕಾರವು ಮುಂದಾಗಿದ್ದು ಕಾಮಗಾರಿ ಈಗಾಗಲೇ (pavagadh govt hospital incident) ಪ್ರಗತಿಯಲ್ಲಿದೆ.

ವಿಪರ್ಯಾಸವೆಂದರೆ ಈ ಆಸ್ಪತ್ರೆಯ ನಿರ್ವಹಣೆ ಸರಿಯಿಲ್ಲದ ಕಾರಣ ಅಪಘಾತಕ್ಕೀಡಾದವರು,

ಗರ್ಭಿಣಿಯರು ಕಿವಿ ಮತ್ತು ಕಣ್ಣಿನ ಕಾಯಿಲೆ ಇರುವವರು, ಮಕ್ಕಳು ಮತ್ತು ಇನ್ನೂ ಅನೇಕರು ಈ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಿದ್ದು ರೋಗಿಗಳು ಸಮರ್ಪಕ ಚಿಕಿತ್ಸೆ ಇಲ್ಲದೆ ಪರದಾಡುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಮೂಳೆ ಶಸ್ತ್ರಚಿಕಿತ್ಸಕರಾಗಿ ಡಾ. ನಾಗರಾಜ್ ಅವರನ್ನು ನಿಯೋಜಿಸಲಾಗಿದ್ದು, ಕಳೆದ ಆರು ತಿಂಗಳಿಂದ ಅನಧಿಕೃತವಾಗಿ ಗೈರು ಆಗುತ್ತಿದ್ದಾರೆ ಇದರಿಂದಾಗಿ ಅಪಘಾತ,

ಬೆನ್ನು, ಕೈಕಾಲು ಮತ್ತಿತರ ಮೂಳೆ ರೋಗಕ್ಕೆ ತುತ್ತಾಗಿರುವ ರೋಗಿಗಳಿಗೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಚಿಕಿತ್ಸೆ ನಡೆಯುತ್ತಿಲ್ಲ ಅಷ್ಟೇ ಅಲ್ಲದೆ 10 ರೂಪಾಯಿ ಒಪಿಡಿ ರಸೀದಿ ಪಾವತಿಸಿ ಆಸ್ಪತ್ರೆಯ ವಿಭಾಗಕ್ಕೆ ಹೋದರೆ ಅಲ್ಲಿ ಮೂಳೆ

ವೈದ್ಯರೇ (Orthopedic Surgeon) ಇಲ್ಲ,

ಈ ಸಂದರ್ಭದಲ್ಲಿ ಹೊರಗುತ್ತಿಗೆ ಪಡೆದು ಕೆಲಸ ಮಾಡುತ್ತಿರುವ ಡಿ.ಗ್ರೂಪ್ ಸಿಬ್ಬಂದಿ ರೋಗಿಗಳಿಗೆ ಚಿಕಿತ್ಸೆ ನೀಡಿ ಬೇರೆ ಆಸ್ಪತ್ರೆಗಳಿಗೆ ರೆಫರ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಮತ್ತು ಡ್ರೆಸ್ಸಿಂಗ್ ಬಗ್ಗೆ ತರಬೇತಿ ಪಡೆದಿರುವವರೇ ಇರಬೇಕು.

ಹೊರಗುತ್ತಿಗೆ ನೌಕರ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದಾಗಿರುವುದು ಸಮಂಜಸವಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ. ಆಸ್ಪತ್ರೆ ನಿರ್ವಹಣೆ ಸರಿಯಾಗಿಲ್ಲ, ರೋಗಿಗಳ ಮಾತನ್ನು ಕೇಳುವವರಿಲ್ಲ.

https://vijayatimes.com/congress-grulahakshmi-yojana/

ರಾಜಕಾರಣಿಗಳು ಪ್ರತಿ ಚಿಕಿತ್ಸೆಯನ್ನು ಶಿಫಾರಸು ಮಾಡಿದಾಗ ಮಾತ್ರ ರೋಗಿಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.

ಹಲವು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೇಳುವಂತೆ ಆಸ್ಪತ್ರೆಗೆ ಬರುವ ಬಡ ರೋಗಿಗಳ ಸ್ಥಿತಿ ಹೀನಾಯವಾಗಿದೆ.

ಇಲ್ಲಿನ ಸರ್ಕಾರಿ ಆಸ್ಪತ್ರೆ (Govt hospital) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯ ನಾಗರಾಜ್ ಅವರು ಜನವರಿಯಿಂದ ಆಸ್ಪತ್ರೆಗೆ ಬಂದಿಲ್ಲ.

ಈ ಬಗ್ಗೆ ನಿರ್ದೇಶಕ ತುಮಕೂರು ಡಿಎಚ್‌ಒ ಡಾ.ಮಂಜುನಾಥ್‌ ಅವರಿಗೆ ವರದಿ ಸಲ್ಲಿಸಲಾಗಿದೆ.

26 ನರ್ಸ್‌ಗಳಿದ್ದರೂ ಡಿ.ಗ್ರೂಪ್‌ ನೌಕರನಿಂದಲೇ ಚಿಕಿತ್ಸೆ :

ಸರ್ಕಾರಿ ಆಸ್ಪತ್ರೆಗಳಲ್ಲಿ ಶುಶ್ರೂಷೆಯಲ್ಲಿ ತರಬೇತಿ ಪಡೆದ 26 ದಾದಿಯರು ಮತ್ತು 30 ಡಿ.ಗ್ರೂಪ್ ನೌಕರರು ಇದ್ದಾರೆ. ನರ್ಸ್ ಗಳಿದ್ದರೂ ಡಿ.ಗ್ರೂಪ್ ನೌಕರರು ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ಕುರಿತು ಹಲವು ಬಾರಿ ಉಸ್ತುವಾರಿ ವೈದ್ಯರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಅಷ್ಟೇ ಅಲ್ಲದೆ ಇಲ್ಲಿನ ಆಸ್ಪತ್ರೆಯ ಹಲವು ವಿಭಾಗಗಳಲ್ಲಿ ವೈದ್ಯರ ಕೊರತೆ ಇದೆ.

Exit mobile version