ಪೀಣ್ಯ ಮೇಲ್ಸೇತುವೆ ಕಳಪೆ ಕಾಮಗಾರಿ ; ಮೌಲ್ಯಮಾಪನಕ್ಕೆ ಕಾಂಗ್ರೆಸ್‌ ಆಗ್ರಹ!

flyover

ಕಳೆದ ಕೆಲವು ವರ್ಷಗಳ ಹಿಂದೆ ಪೀಣ್ಯ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಅದು ಕೆಲವೇ ವರ್ಷಗಳಲ್ಲಿ ಸಂಚಾರಕ್ಕೆ ಯೋಗ್ಯವಲ್ಲ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಕಳೆದ ಎರಡು ತಿಂಗಳಿಂದ ಪೀಣ್ಯ ಮೇಲ್ಸೇತುವೆ (Peenya flyover)ಕಳಪೆ ಕಾಮಗಾರಿಯಿಂದ ಸಂಚಾರ ಸ್ಥಗಿತಮಾಡಲಾಗಿದ್ದು, ನಗರದ ಎಲ್ಲಾ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಮೌಲ್ಯ ಮಾಪನ ಮಾಡಬೇಕು ಎಂದು ಕಾಂಗ್ರೆಸ್ ಅಗ್ರಹಿಸುತ್ತಿದೆ. ನವಯುಗ ಇಂಜಿನಿಯರ್ ಕಂಪನಿಯಿಂದ ( navayuga engineering company) 2010 ರಲ್ಲಿ ನಿರ್ಮಾಣವಾದ ಮೇಲ್ಸೇತುವೆ , 12 ವರ್ಷದಲ್ಲೇ ಸಂಚಾರ ಯೋಗ್ಯ ಅಲ್ಲವೆಂದು ಸಾಬೀತಾಗಿದೆ.

ಪೀಣ್ಯ ಮೇಲ್ಸೇತುವೆಗೆ 775.70 ಕೋಟಿ ರೂ ವೆಚ್ಚಮಾಡಲಾಗಿತ್ತು. ಅಂತರ ರಾಜ್ಯ, ಜಿಲ್ಲೆಗಳಿಗೆ ಸಂಪರ್ಕಿಸುವ 4.5 ಕಿ.ಮೀ ಉದ್ದದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಇದಾಗಿದೆ. ಡಿ.25 ರಿಂದ ಮೇಲ್ಸೇತುವೆಯಲ್ಲಿ ವಾಹನಗಳ ಸಂಚಾರ ಬಂದ್ ಮಾಡಿದ್ದು, ಸದ್ಯ ಲಘುವಾಹನಗಳ ಓಡಾಟಕ್ಕೆ ಮಾತ್ರ ಫ್ಲೈಓವರ್ ಸೀಮಿತ ಮಾಡಲಾಗಿದೆ. 19.5 ಕಿಮೀ ಉದ್ದ ತುಮಕೂರು ರಸ್ತೆ ಕಾರಿಡಾರ್ ೧೨ ವರ್ಷಗಳ ಹಿಂದೆ ಯೋಜನೆ ತಯಾರಿಸಲಾಗಿತ್ತು. ನವಯುಗ ಕನ್ ಸ್ಟ್ರಕ್ಷನ್ ಸಂಸ್ಥೆಯಿಂದ ಗುತ್ತಿಗೆ ಪಡೆದಿದ್ದು, ನವೆಂಬರ್ ೨೦೦೭ ರಲ್ಲಿ ಕಾಮಗಾರಿ ಆರಂಭವಾಗಿತ್ತು. ೨೦೧೦ರ ಆಗಸ್ಟ್ ನಲ್ಲಿ‌ಸಾರ್ವಜನಿಕ ಬಳಕೆಗೆ ಅವಕಾಶ ನೀಡಲಾಗಿತ್ತು.

ಈ ಮೇಲ್ಸೇತುವೆಯನ್ನು ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ (Shivakumara Swamiji Flyover) ಎಂದು ನಾಮಕರಣ ಮಾಡಲಾಗಿತ್ತು. ಸದ್ಯ ವಾಹನ ಸಂಚಾರಕ್ಕೆ ಸುರಕ್ಷಿತ ಅಲ್ಲವೆಂದು ಭಾರತೀಯ ವಿಜ್ಞಾನ ಸಂಸ್ಥೆಯಿಂದಲೂ ವರದಿ ಬಂದಿದ್ದು, ಎಲ್ಲಾ ಮೇಲ್ಸೇತುವೆ, ಕೆಳಸೇತುವೆಗಳ ವೈಜ್ಞಾನಿಕ ಹಾಗೂ ತಾಂತ್ರಿಕ ಮೌಲ್ಯಮಾಪನಕ್ಕೆ ಕಾಂಗ್ರೆಸ್ (Congress) ಆಗ್ರಹ ಮಾಡುತ್ತಿದೆ. ನಗರದಲ್ಲಿ BDA, BBMP ಸರ್ಕಾರ, ರಾಷ್ಟ್ರೀಯ ಹೆದ್ದಾರಿಯಿಂದ ಹಲವಾರು ಮೇಲ್ಸೇತುವೆ ನಿರ್ಮಾಣ ಆಗಿದೆ. ದೀರ್ಘಾವಧಿಗೆ ಮೇಲ್ಸೇತುವೆಗಳು, ಎಲಿವೇಟೆಡ್ ಕಾರಿಡಾರ್ ಗಳ ನಿರ್ಮಾಣ ಆಗಿದೆ. ಇವುಗಳ ಬಗ್ಗೆ ನಗರದ ಸಾರ್ವಜನಿಕರಿಗೆ ಭಯಭೀತಿ ಉಂಟಾಗಿದೆ. ಪೀಣ್ಯ ಮೇಲ್ಸೇತುವೆ ಹತ್ತೇ ವರ್ಷದಲ್ಲಿ ಸಂಚಾರ ಯೋಗ್ಯ ಅಲ್ಲ ಎಂದು ಸಾಬೀತಾಗಿದೆ. 50 ವರ್ಷ ಬಾಳಿಕೆ ಬರಬೇಕಾದ ಮೇಲ್ಸೇತುವೆ 10 ವರ್ಷಕ್ಕೇ ಕಳಪೆ ಆಗಿದೆ. ಹೀಗಾಗಿ ತನಿಖೆಯಾಗಬೇಕು, ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಪಿ. ಆರ್ ರಮೇಶ್ ( PR Ramesh) ಆಗ್ರಹಿಸಿದ್ದಾರೆ.

Exit mobile version