ಬ್ಯಾಂಕ್‌ಗಳಿಗೆ ದಂಡ: ಎಸ್‌ಬಿಐ ಸೇರಿ ನಾಲ್ಕು ಬ್ಯಾಂಕ್‌ಗಳಿಗೆ ಭಾರೀ ದಂಡ ವಿಧಿಸಿದ ಆರ್‌ಬಿಐ ಬ್ಯಾಂಕ್

ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತೆ ಬ್ಯಾಂಕ್‌ಗಳಿಗೆ ಚಾಟಿ ಬೀಸಿದ್ದು, ನಿಯಮಗಳ ಉಲ್ಲಂಘನೆ, ಠೇವಣಿ ಖಾತೆಯನ್ನೂ ನಿರ್ವಹಿಸಲಾಗದವರಿಗೂ (Penalty for banks) ಭಾರಿ ಸಾಲ ನೀಡಿದ

ಅಶಿಸ್ತು ಮತ್ತು ಹೊಣೆಗೇಡಿತನ ತೋರಿದ ಕಾರಣಕ್ಕೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (Bank of India) ಸೇರಿ ನಾಲ್ಕು ಬ್ಯಾಂಕ್‌ಗಳಿಗೆ ಆರ್‌ಬಿಐ (RBI) ಸೋಮವಾರ ಭಾರೀ ದಂಡ ವಿಧಿಸಿದೆ.

ಇಂಡಿಯನ್‌ ಬ್ಯಾಂಕ್‌, ಪಂಜಾಬ್‌ ಆ್ಯಂಡ್‌ ಸಿಂಧ್‌ ಬ್ಯಾಂಕ್‌ (Punjab and Sindh Bank) ಮತ್ತು ಫೆಡ್‌ಬ್ಯಾಂಕ್‌ ಫೈನಾನ್ಷಿಯಲ್‌ ಸರ್ವೀಸ್‌ (Fed bank Financial Services) ಆರ್‌ಬಿಐನ ಕೆಂಗಣ್ಣಿಗೆ

ಗುರಿಯಾದ ಇತರ ಬ್ಯಾಂಕ್‌ಗಳಾಗಿದ್ದು, ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಹಾಗೂ ಇಂಡಿಯನ್‌ ಬ್ಯಾಂಕ್‌ಗಳು ಕೆಲವು ಯೋಜನೆಗಳಿಗೆ ಕಲ್ಪಿಸಲಾದ ಬಜೆಟ್‌ ಸಂಪನ್ಮೂಲಗಳಿಗೆ ಬದಲಾಗಿ

ನಿಗಮವೊಂದಕ್ಕೆ ಟರ್ಮ್‌ ಲೋನ್‌ ಅಂದರೆ ಅವಧಿ ಸಾಲವನ್ನು (Penalty for banks) ಮಂಜೂರು ಮಾಡಿದ್ದವು.

ಯೋಜನೆಗಳ ಕಾರ್ಯ ಸಾಧ್ಯತೆ, ಯೋಜನೆಗಳಿಂದ ಬರುವ ಆದಾಯದ ಹರಿವು ಗಮನಿಸದೇ ಇರುವುದಕ್ಕೆ ರಿಸರ್ವ್‌ ಬ್ಯಾಂಕ್‌ ದಂಡ ವಿಧಿಸಿದ್ದು, ಒಟಿಪಿ ಆಧಾರಿತ ಇ – ಕೆವೈಸಿ ಬಳಸಿ ಹಲವು ಖಾತೆಗಳನ್ನು

ಇಂಡಿಯನ್‌ ಬ್ಯಾಂಕ್‌ ತೆರೆದಿತ್ತು. ಖಾತೆ ಮಾಡುವಾಗ ಯಾವುದೇ ಮುಖಾಮುಖಿ ಇರಲೇ ಇಲ್ಲ. ಹಲವಾರು ಖಾತೆಗಳನ್ನು ಉಳಿತಾಯ ಠೇವಣಿ ಖಾತೆಯನ್ನು ನಿರ್ವಹಿಸಲು ಅರ್ಹರಲ್ಲದ ಗ್ರಾಹಕರ ಹೆಸರಿನಲ್ಲಿ

ತೆರೆದಿದ್ದರಿಂದ ಇಂಡಿಯನ್‌ ಬ್ಯಾಂಕ್‌ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ದಂಡ ಹಾಕಿದೆ.

ಯಾವ ಬ್ಯಾಂಕ್‌ಗೆ ದಂಡ ಎಷ್ಟು?
ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ – 1.3 ಕೋಟಿ ರೂ.
ಫೆಡ್‌ಬ್ಯಾಂಕ್‌ ಫೈನಾನ್ಷಿಯಲ್‌ ಸರ್ವೀಸ್‌ – 8 .80 ಲಕ್ಷ ರೂ.
ಇಂಡಿಯನ್‌ ಬ್ಯಾಂಕ್‌ – 1.62 ಕೋಟಿ ರೂ.
ಪಂಜಾಬ್‌ ಆ್ಯಂಡ್‌ ಸಿಂಧ್‌ ಬ್ಯಾಂಕ್‌ – 1 ಕೋಟಿ ರೂ.

ಬಿ.ಆರ್‌ ಕಾಯ್ದೆಯ ಸೆಕ್ಷನ್‌ (Section) 26 ಎ ಅಡಿಯಲ್ಲಿ ಸೂಚಿಸಿದ ಅವಧಿಯೊಳಗೆ ಅರ್ಹ ಮೊತ್ತವನ್ನು ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ಜಮಾ ಮಾಡಲು ವಿಫಲವಾದ ಪಂಜಾಬ್‌ ಆ್ಯಂಡ್‌

ಸಿಂಧ್‌ ಬ್ಯಾಂಕ್‌ಗೂ ದಂಡ ವಿಧಿಸಲಾಗಿದ್ದು, ವಂಚನೆ ಪ್ರಕರಣಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ವರದಿ ಮಾಡಲು ವಿಳಂಬ ಮಾಡಿದ್ದಕ್ಕಾಗಿ ಫೆಡ್‌ಬ್ಯಾಂಕ್‌ ಫೈನಾನ್ಷಿಯಲ್‌ ಸರ್ವೀಸಸ್‌ಗೆ ದಂಡ

ವಿಧಿಸಲಾಗಿದೆ.

ಅಕ್ಟೋಬರ್‌ನಲ್ಲಿ (October) (ಮುಂದಿನ ತಿಂಗಳು) ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಪರಾಮರ್ಶೆ ಸಭೆ ನಡೆಯಲಿದ್ದು, ಈ ಸಲವೂ ಬಡ್ಡಿ ದರವನ್ನು ಆರ್‌ಬಿಐ ಯಥಾಸ್ಥಿತಿಯಲ್ಲಿ

ಇಡುವ ಸಾಧ್ಯತೆ ಇದೆ ಎಂದು ಎಸ್‌ಬಿಐ ರಿಸರ್ಚ್ ವರದಿಯಲ್ಲಿ ಅಂದಾಜು ಮಾಡಲಾಗಿದೆ. ಆರ್‌ಬಿಐ ಅಂದಾಜಿಗಿಂತಲೂ ಹಣದುಬ್ಬರವು ಹೆಚ್ಚಿನದಾಗಿದೆ. ಕಚ್ಚಾ ತೈಲ ದರ ಏರಿಕೆ ಸೇರಿದಂತೆ ಜಾಗತಿಕ

ಪ್ರಭಾವಗಳು ದೇಶದ ಮೇಲೆ ಋುಣಾತ್ಮಕ ಪರಿಣಾಮ ಬೀರುವ ಕಳವಳ ಎದುರಾಗಿದೆ. ಹಾಗಾಗಿ ಆರ್‌ಬಿಐ ಎಚ್ಚರಿಕೆಯ ನಡೆ ಅನುಸರಿಸಲಿದೆ.

ಇದನ್ನು ಓದಿ: ರಾಜ್ಯ ಪಠ್ಯಪುಸ್ತಕ ಪರಿಷ್ಕರಣೆ ಮಾಡಲು ಐದು ಸಮಿತಿ ರಚಿಸಿದ ರಾಜ್ಯ ಸರ್ಕಾರ..!

Exit mobile version