Bengaluru: 2023-24ನೇ ಸಾಲಿನ ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಐದು ಸಮಿತಿಗಳನ್ನು ರಚಿಸುವಂತೆ ಕರ್ನಾಟಕ (New Committee for revise Textbooks)
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ (New Committee for revise Textbooks) ಇಲಾಖೆಯು ಆದೇಶ ಹೊರಡಿಸಿದೆ.

ಈ ಸಮಿತಿಗಳು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005ರ ಮಾರ್ಗಸೂಚಿಯಂತೆ ಸಮಾಜ ವಿಜ್ಞಾನ ಪಠ್ಯಪುಸ್ತಕಗಳೊಂದಿಗೆ ಕನ್ನಡದ ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಯ ಪಠ್ಯಪುಸ್ತಕಗಳನ್ನು
ಪರಿಶೀಲಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾದ ನಿವೃತ್ತ ಪ್ರಾಂಶುಪಾಲರಾದ ಡಾ.ಮಂಜುನಾಥ್ ಜಿ ಹೆಗಡೆ (Manjunath G Hegde) ಅವರನ್ನು ಮುಖ್ಯ
ಸಂಚಾಲಕರನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ. ಶಿವಮೊಗ್ಗದ ತೀರ್ಥಹಳ್ಳಿಯ ಡಾ.ಆಂಜನಪ್ಪ (Dr. Anjanappa) ನೇತೃತ್ವದ 10 ಸದಸ್ಯರ ಸಮಿತಿಯು ಒಂದರಿಂದ 10ನೇ ತರಗತಿವರೆಗಿನ ಕನ್ನಡ
ಪ್ರಥಮ ಭಾಷಾ ಪಠ್ಯಪುಸ್ತಕಗಳನ್ನು ಪರಿಶೀಲಿಸಲಿದ್ದು,
ಡಾ.ಎಚ್.ಎಸ್.ಸತ್ಯನಾರಾಯಣ (Dr. H S Satyanarayana) ಅಧ್ಯಕ್ಷತೆಯ 10 ಸದಸ್ಯರ ಮತ್ತೊಂದು ಸಮಿತಿಯು ಒಂದರಿಂದ 10 ನೇ ತರಗತಿವರೆಗಿನ ಕನ್ನಡ ದ್ವಿತೀಯ ಭಾಷಾ ಪಠ್ಯಪುಸ್ತಕಗಳನ್ನು
ಪರಿಶೀಲಿಸಲಿದೆ. ಒಂಬತ್ತು ಮತ್ತು 10ನೇ ತರಗತಿಯ ಕನ್ನಡ ತೃತೀಯ ಭಾಷೆಯ ಪಠ್ಯಪುಸ್ತಕಗಳ ಪರಿಷ್ಕರಣೆಗಾಗಿ ಡಾ ಮಂಜಣ್ಣ ನೇತೃತ್ವದ ನಾಲ್ವರು ಸದಸ್ಯರ ಸಮಿತಿಯು ಉಸ್ತುವಾರಿ ವಹಿಸಲಿದೆ.
ಅಶ್ವಥನಾರಾಯಣ (Ashwathnarayana) ನೇತೃತ್ವದ ಐದನೇ ಸಮಿತಿಯು ಎಂಟು, ಒಂಬತ್ತು ಮತ್ತು 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇನ್ನು ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ (Congress), ಈ ಹಿಂದಿನ ಬಿಜೆಪಿ ಸರ್ಕಾರ ಪಠ್ಯ ಪರಿಷ್ಕರಣೆ ಹೆಸರಲ್ಲಿ ನಾಡಿನ ಮಹನೀಯರನ್ನು ಅವಮಾನಿಸಿದ್ದನ್ನು ಜನತೆ ಕಂಡಿದ್ದಾರೆ.
ಪಠ್ಯ ಪರಿಷ್ಕರಣೆ ಹೆಸರಲ್ಲಿ ನಾಡಿನ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸದೆ ಕಳ್ಳಾಟ ಆಡಿದ್ದನ್ನೂ ಜನ ನೆನಪಿಟ್ಟುಕೊಂಡಿದ್ದಾರೆ. ಪಠ್ಯದಲ್ಲಿ RSS ನ ಅಜೆಂಡಾಗಳನ್ನು ತುರುಕಿ ಮಕ್ಕಳ ಮನಸ್ಸನ್ನು ಕೆಡಿಸುವ
ಷಡ್ಯಂತ್ರ ರೂಪಿಸಿದ್ದನ್ನೂ ನೋಡಿದ್ದಾರೆ ಜನ. ಜನರ ಆಕ್ರೋಶಕ್ಕಾಗಿ ತಾವು ಮಣಿದಿದ್ದನ್ನೂ ನೋಡಿದ್ದೇವೆ. ಹೋರಾಟ ಹಾರಾಟ ಏನೇ ಇದ್ದರೂ ಬಿಜೆಪಿ (BJP) ಅವಧಿಯಲ್ಲಿ ಸೃಷ್ಟಿಯಾದ ಪಠ್ಯದ
ಅವಂತರಗಳನ್ನು ಸರಿಪಡಿಸುವುದು ನಿಶ್ಚಿತ ಎಂದು ಹೇಳಿದೆ.
ಇದಕ್ಕೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ, ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಶಾಲಾ ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಜತೆ ಕಾಂಗ್ರೆಸ್ ಸರ್ಕಾರ ಮತ್ತೆ ಚೆಲ್ಲಾಟವಾಡುತ್ತಿದೆ. ಪಠ್ಯಪುಸ್ತಕದಲ್ಲಿ ಇರುವ
ರಾಷ್ಟ್ರೀಯತೆಯ ವಿಚಾರಗಳನ್ನು ತೆಗೆದು ಹಾಕಿ ಕಮ್ಯುನಿಸ್ಟ್ (Communist) ಮತ್ತು ದೇಶವಿರೋಧಿ ಎಡಬಿಡಂಗಿ ಸಿದ್ಧಾಂತವನ್ನು ಹೇರಿ ಮಕ್ಕಳ ಬ್ರೈನ್ ವಾಶ್ (Brain Wash) ಮಾಡುವುದಕ್ಕೆ
ಕಾಂಗ್ರೆಸ್ ಸಂಚು ರೂಪಿಸಿದೆ. ಸಿದ್ದರಾಮಯ್ಯ ಅವರ ಸರ್ಕಾರದ ಎಲ್ಲ ಆಟಗಳು ನಾಡ ಜನರ ಮುಂದೆ ಬಯಲಾಗಲಿದೆ, ಮುಗ್ಧ ಮಕ್ಕಳ ವಿದ್ಯಾಭ್ಯಾಸದ ಕಮ್ಯುನಿಸ್ಟೀಕರಣದ ವಿರುದ್ಧ ನಾವು ಧ್ವನಿ
ಎತ್ತಲಿದ್ದೇವೆ ಎಂದು ಹೇಳಿದೆ.
ಇದನ್ನು ಒದಿ: ಈ 5 ಕನ್ನಡ ಚಿತ್ರಗಳ ಒಟ್ಟು ಕಲೆಕ್ಷನ್ ಒಂದು ತಮಿಳು ಚಿತ್ರದ ಕಲೆಕ್ಷನ್ಗೆ ಸಮ ; ಸತ್ಯ ಬಿಚ್ಚಿಟ್ಟ ನಿರ್ದೇಶಕ ಶಶಾಂಕ್..!