ಜ್ವರ ಭೀತಿ: ರಾಮನಗರದಲ್ಲಿ ಒಂದೇ ವಾರಕ್ಕೆ ನೂರಾರು ಜನರಿಗೆ ಜ್ವರ, ಜನರಲ್ಲಿ ಹೆಚ್ಚಿದೆ ಆತಂಕ !

Ramanagar: ರಾಮನಗರದಲ್ಲಿ ಇತ್ತೀಚೆಗೆ ಹಲವಾರು ಮಂದಿಗೆ ಜ್ವರದ ಲಕ್ಷಣಗಳು (people have fever in Ramanagara) ಕಾಣಿಸಿಕೊಳ್ಳುತ್ತಿವೆ. ಅಲ್ಲಿನ ಜಿಲ್ಲಾ ಆಸ್ಪತ್ರೆಗೆ ಕಳೆದೊಂದು

ವಾರದಿಂದ ಸರಾಸರಿಯಾಗಿ ದಿನಕ್ಕೆ 100ಕ್ಕೂ ಹೆಚ್ಚು ಮಂದಿ ಜ್ವರಕ್ಕಾಗಿ ತಪಾಸಣೆ ಮಾಡಿಸಿ ಹಾಗೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ್ವರವೆಂದು ಆಗಮಿಸುತ್ತಿರುವವರಿಗೆ ಡೆಂಗ್ಯು (Dengue),

ಚಿಕನ್ ಗುನ್ಯ (Chicken Gunya), ಮಲೇರಿಯಾದ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಜ್ವರದೊಂದಿಗೆ ಶೀತ, ಕೆಮ್ಮು ಕೂಡ ಕಾಡಲಾರಂಭಿಸಿದೆ. ಅನೇಕರಿಗೆ ಈ ಲಕ್ಷಣಗಳು ಕಂಡು

ಬಂದಿದ್ದರಿಂದ ಜನರು (people have fever in Ramanagara) ಆತಂಕಕ್ಕೀಡಾಗಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ವೈರಾಣು ಜ್ವರ(ವೈರಲ್ ಫೀವರ್) ಕಾಟ ಹೆಚ್ಚಾಗಿದ್ದು, ನಗರ ಹಾಗೂ ಗ್ರಾಮೀಣ ಜನತೆ ಈ ಜ್ವರದಿಂದ ಬಳಲುತ್ತಿದ್ದು, ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ. ಕೋವಿಡ್‌

(Covid) ನಂತರ ಸಾರ್ವಜನಿಕರು ಜ್ವರ, ನೆಗಡಿ, ತಲೆನೋವು ಹಾಗೂ ಕೆಮ್ಮಿಗೆ ಹೆಚ್ಚು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸಾಮಾನ್ಯ ಹಾಗೂ ಗುಣಪಡಿಸಬಹುದಾದ

ಕಾಯಿಲೆಯಾದರು, ನಿವಾರಣೆಯಾಗುವ ತನಕವೂ ಜನತೆಗೆ ಆತಂಕ ಮಾತ್ರ ತಪ್ಪಿಲ್ಲ.

ಜಿಲ್ಲೆಯಲ್ಲಿ ಜ್ವರ ಭೀತಿ
ರಾಮನಗರ ಜಿಲ್ಲೆಯಲ್ಲಿ ಇತ್ತೀಚೆಗೆ ವೈರಾಣು ಜ್ವರ ಹೆಚ್ಚಳವಾಗಿದ್ದು. ಕೋವಿಡ್‌ ರೀತಿಯಲ್ಲಿ ಇದು ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ,ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವುದು

ಜನರಲ್ಲಿ ಭಯದ ಭೀತಿ ಸೃಷ್ಟಿಯಾಗಿದ್ದು ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆಯು ಹೆಚ್ಚಾಗಿದೆ.

ಕಾವೇರಿ ಕಾವು: ಮಂಡ್ಯದಲ್ಲಿ ಕಾವೇರಿ ಕಿಚ್ಚು ಮುಂದುವರೆದಿದ್ದು, ಕಾನೂನು ಹೋರಾಟಕ್ಕೆ ಮುಂದಾದ ರೈತರು

ರೋಗಿಗಳ ಸಂಖ್ಯೆ ಹೆಚ್ಚಳ
ಜಿಲ್ಲಾಸ್ಪತ್ರೆಯಿಂದ ಹಿಡಿದು ಸ್ಥಳೀಯ ಖಾಸಗಿ ಕ್ಲಿನಿಕ್‌ (Clinic) ತನಕವೂ ಜ್ವರಬಾಧೆಗೆ ಒಳಗಾದ ರೋಗಿಗಳ ಸಂಖ್ಯೆ ಹೆಚ್ಚಿದ್ದು, ಸರಾಸರಿ 50 ರಿಂದ 100 ರ ಆಸುಪಾಸಿನಲ್ಲಿಯೇ ಚಿಕಿತ್ಸೆಗೆಂದು

ಆಗಮಿಸುತ್ತಿದ್ದಾರೆ. ಹೀಗಾಗಿ ಹೊರ ರೋಗಿಗಳ ವಿಭಾಗವೂ ಜ್ವರಕ್ಕೆ ಒಳಗಾದ ರೋಗಿಗಳಿಂದಲೆ ತುಂಬಿ ಹೋಗಿದೆ. ಇನ್ನು ವೃದ್ಧರು ಹಾಗೂ ಸಣ್ಣ ಮಕ್ಕಳಲ್ಲಿ ಕೆಮ್ಮು, ನೆಗಡಿ ಹಾಗೂ ಜ್ವರ ದಂತಹ

ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಆಸ್ಪತ್ರೆ ಬಾಗಿಲು ತಟ್ಟುವುದು ಸಹ ಸಾಮಾನ್ಯವಾಗಿ ಬಿಟ್ಟಿದೆ.

ವಾತಾವರಣದ ಬದಲಾವಣೆ
ರಾಮನಗರ ಜಿಲ್ಲೆಯಲ್ಲಿ ಬೇಸಿಗೆಯ ಹಾಗೆ ಬಿಸಿಲಿನ ತಾಪಮಾನವೂ ಗರಿಷ್ಠ 32 ಸೆಲ್ಸಿಯಸ್‌ (Celsius) ದಾಟಿದೆ. ಬೇಸಿಗೆ ಹಾಗೂ ಮಳೆಗಾಲದ ವ್ಯತ್ಯಾಸವಿಲ್ಲದೆ ವಾತಾವರಣದಲ್ಲಿ ಬಿಸಿಲು ಇದೆ.

ಇನ್ನು ಕಳೆದ ಎರಡು ದಿನದಿಂದ ಜಿಲ್ಲೆಯ ವಿವಿಧ ಕಡೆ ಮಳೆಯಾಗುತ್ತಿದ್ದು. ಹಾಗಾಗಿ ವಾತಾವರಣದಲ್ಲಿನ ವ್ಯತ್ಯಯ ಕಾಯಿಲೆಗೆ ದಾರಿ ಮಾಡಿಕೊಟ್ಟಂತಾಗಿದೆ .

ರೋಗಿಗಳ ನಿಯಂತ್ರಣ
ರೋಗಿಯ ಕಾಯಿಲೆ ಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ಚಿಕನ್ ಗುನ್ಯ,ಆನೆಕಾಲು ರೋಗ, ಮಲೇರಿಯಾದಂತಹ ಕಾಯಿಲೆಗಳ ಪರೀಕ್ಷೆ ಮಾಡಲಾಗುತ್ತಿದೆ. ಹಾಗಾಗಿ ಪ್ರಯೋಗಾಲಯವೂ ಇವುಗಳ

ಪರೀಕ್ಷೆಯಲ್ಲಿಯೇ ತುಂಬಿದೆ. ಸಣ್ಣಪುಟ್ಟ ಕ್ಲಿನಿಕ್‌ಗಳಲ್ಲಿ ವೈರಲ್‌ ಫೀವರ್‌ಗೆ ಚಿಕಿತ್ಸೆಗೆಂದು ಆಗಮಿಸುವವರ ಸಂಖ್ಯೆ ಹೆಚ್ಚಾಗಿದೆ. ಜನದಟ್ಟಣೆ ಕಡಿಮೆ ಮಾಡುವ ಸಲುವಾಗಿ ಕ್ಲಿನಿಕ್‌ಗಳು ಟೋಕನ್‌ ವ್ಯವಸ್ಥೆಗೆ ಮೊರೆ ಹೋಗಿದೆ.

ಜಿಲ್ಲಾವಾರು ಮಲೇರಿಯಾ ವಿಭಾಗ
ಇನ್ನು ಜಿಲ್ಲೆಯಲ್ಲಿ ವೈರಲ್‌ ಫೀವರ್‌ (Viral Fever) ಹೆಚ್ಚಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ಆಗಮಿಸುವ ಮಲೇರಿಯಾ ನಿಯಂತ್ರಣಾ ವಿಭಾಗವೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ಜ್ವರದಂತಹ ಲಕ್ಷಣಗಳು ಕಂಡು ಬಂದರೆ, ತಕ್ಷಣವೇ ಚಿಕಿತ್ಸೆ ಪಡೆಯಬೇಕೆಂದು ತಿಳಿಸಿದೆ. ಅದರಲ್ಲೂ ಮಲೇರಿಯಾ (Malaria) ,ಡೆಂಗ್ಯು, ಚಿಕನ್ ಗುನ್ಯಾ, ಆನೆಕಾಲು ರೋಗದ ಕುರಿತು ಮಾಹಿತಿ ನೀಡುವ

ಕೆಲಸ ಮಾಡಲಾಗುತ್ತಿದೆ. ಈ ರೋಗದ ಲಕ್ಷಣಗಳು ಕಂಡು ಬಂದರೆ, ತಕ್ಷಣವೇ ಚಿಕಿತ್ಸೆ ಪಡೆಯು ಸೂಚಿಸಿದೆ.

ಇವುಗಳನ್ನು ಮಾಡಿ
ಜ್ವರ ಕಂಡುಬಂದ ತಕ್ಷಣ ವೈದ್ಯರ ಭೇಟಿ ಮಾಡಿ ಚಿಕಿತ್ಸೆ ಪಡೆಯುವುದು. ಸ್ವ ಚಿಕಿತ್ಸೆ ಮಾಡಿಕೊಳ್ಳಬಾರದು.
ಜ್ವರ ಕಡಿಮೆಯಾಗುವ ತನಕ ಬೆರೆಯವರೆಯವರಿಗೆ ಹರಡದಂತೆ ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ (Sanitiser) ಬಳಕೆ ಮಾಡುವುದು.
ಏನಾದರೂ ತಿನ್ನುವ ಮುನ್ನ ಕೈ ತೊಳೆಯುವುದು.
ಜನಸಂದಣಿ ಇರುವ ಪ್ರದೇಶದಿಂದ ದೂರ ಉಳಿಯುವುದು , ಪೌಷ್ಟಿಕ ಆಹಾರ ಸೇವನೆ ಮಾಡುವುದು.
ಡೆಂಗ್ಯು, ಚಿಕನ್ ಗುನ್ಯಾ, ಆನೆಕಾಲು ರೋಗ, ಮಲೇರಿಯಾದ ಲಕ್ಷಣಗಳು ಕಂಡು ಬಂದರೆ, ರಕ್ತ ಪರೀಕ್ಷೆಗೆ ಕಳುಹಿಸಿಕೊಡಲಾಗುತ್ತದೆ. ಜ್ವರದಂತಹ ಲಕ್ಷಣಗಳು ಕಂಡುಬಂದರೆ ಸಮೀಪದ ಸರಕಾರಿ

ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು.

Exit mobile version