ಸ್ಲೈಸ್‌ ಬ್ರಾಂಡ್ ಅಂಬಾಸಿಡರ್ ಆಗಿ ಕತ್ರಿನಾ ಬದಲಿಗೆ ಕಿಯಾರಾ ಅಡ್ವಾಣಿ ; ಅಸಮಾಧಾನ ವ್ಯಕ್ತಪಡಿಸಿದ ನೆಟ್ಟಿಗರು!

Mumbai : ಸ್ಲೈಸ್ ಜ್ಯೂಸ್‌ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್‌ ನಟಿ ಕತ್ರಿನಾ ಕೈಫ್ (Katrina Kaif) ಬದಲಿಗೆ ನಟಿ ಕಿಯಾರಾ ಅಡ್ವಾಣಿ (pepsico ambassador kiara)ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನು ಒಪ್ಪದ ಅಭಿಮಾನಿಗಳು ನಟಿ ಕಿಯಾರಾ ಇದಕ್ಕೆ ಹೊಂದುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಬಹಳ ವರ್ಷಗಳಿಂದ ಇದ್ದ ನಟಿ ಕತ್ರಿನಾ ಕೈಫ್‌ ಅವರ ಜಾಹಿರಾತನ್ನು ಸ್ಥಗಿತಗೊಳಿಸಿದ ಸ್ಲೈಸ್‌ (Slice)ಕಂಪನಿ, ಇದೀಗ ಬಾಲಿವುಡ್‌ ಚಿತ್ರರಂಗದ ಟ್ರೆಂಡಿಂಗ್‌ ನಟಿ ಕಿಯಾರಾ ಅಡ್ವಾಣಿ ಅವರನ್ನು ಬ್ರಾಂಡ್‌ ಅಂಬಾಸಿಡರ್‌ (Ambassador)ಆಗಿ ಆಯ್ಕೆ ಮಾಡಿಕೊಂಡಿದೆ.

ಈ ಮೊದಲ ಜಾಹೀರಾತಿನಲ್ಲಿ ಕಾಣಿಸಿಕೊಂಡ ಕಿಯಾರಾ ಅಡ್ವಾಣಿ ಅನ್ನು ನೋಡಿದ ನೆಟ್ಟಿಗರು, ‘ವೋ ಮಜಾ ನಹಿ ಆಯಾ’ ಎಂದು (pepsico ambassador kiara) ಹಿಂದಿಯಲ್ಲಿ ಕಮೆಂಟ್‌ ಮಾಡಿದ್ದಾರೆ.

ಕಿಯಾರಾ ಅಡ್ವಾಣಿ ಅವರ ಜಾಹೀರಾತಿನ ಕ್ಲಿಪ್(Clip) ಅನ್ನು ಪೋಸ್ಟ್ ಮಾಡಿದ್ದನ್ನು ನೋಡಿದ ಅನೇಕರು, ಈ ಹಿಂದೆ ಇದೇ ಜಾಹೀರಾತಿನಲ್ಲಿ ನಟಿ ಕತ್ರಿನಾ ಕೈಫ್‌ ನಟಿಸಿದ್ದರು, ಅದು ಅದ್ಭುತವಾಗಿದೆ. ನಟಿ ಕಿಯಾರಾ ಅವರು ಇದಕ್ಕೆ ಹೊಂದುವುದಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ನಟಿ ಕಿಯಾರಾ ಅಡ್ವಾಣಿ ಮಾವಿನ ಹಣ್ಣಿನ ಜ್ಯೂಸ್ ಬ್ರಾಂಡ್ ಸ್ಲೈಸ್‌ನ ಹೊಸ ಮುಖವಾಣಿಯಾಗಿ ಹೊರಹೊಮ್ಮಿದರು. ಅದರ ಜಾಹೀರಾತಿಗಾಗಿ ಜನಪ್ರಿಯವಾಗಿದ್ದ ಕತ್ರಿನಾ ಕೈಫ್ ಬದಲಿಗೆ ಕಿಯಾರಾ ಕಾಣಿಸಿಕೊಂಡಿದ್ದಾರೆ.

ನಟಿ ಕಿಯಾರಾ ಈ ಬಗ್ಗೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್(Instagram) ಖಾತೆಯಲ್ಲಿ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ವೀಡಿಯೋ ತುಣಕನ್ನು ಪೋಸ್ಟ್ ಮಾಡಿದ್ದಾರೆ.

ಹಲವರು ಕಿಯಾರಾ ಅವರ ಹೊಸ ಜಾಹೀರಾತನ್ನು ಇಷ್ಟಪಟ್ಟರೆ,

ಇದನ್ನು ಓದಿ: <strong>ಪ್ರಶಾಂತ್‌ ಮನೆಯೇ ಹಣದ ಖಜಾನೆ ! ಈತ ಕೆಎಎಸ್‌ ಪಾಸ್‌ ಮಾಡಿದ್ದೇ ದೊಡ್ಡ ಮ್ಯಾಜಿಕ್‌ ಗೊತ್ತಾ?</strong>

ಕೆಲವರು ಈ ಜಾಹೀರಾತನ್ನು ಕಂಡು ಕತ್ರಿನಾ ಕೈಫ್‌ ಅವರನ್ನು ನೆನಪಿಸಿಕೊಂಡಿದ್ದಾರೆ. ಈ ಹಿಂದೆ ವೈರಲ್(Viral) ಆಗಿದ್ದ ಅದೇ ಬ್ರಾಂಡ್‌ಗಾಗಿ ಕತ್ರಿನಾ ಕೈಫ್ ಅವರ ಜಾಹೀರಾತಿನ ದೃಶ್ಯಗಳನ್ನು ಅವರ ಅಭಿಮಾನಿಗಳು

ಮೆಲುಕು ಹಾಕಿ ನೆನಪಿಸಿಕೊಂಡಿದ್ದಾರೆ.

ಈ ವೀಡಿಯೊವನ್ನು ಹಂಚಿಕೊಂಡ ನಟಿ ಕಿಯಾರಾ, ಇಂತಹ ಸುವಾಸನೆ ಮತ್ತು ರುಚಿ, ಇದು ರಸಭರಿತವಾದ ಮಾವಿನ ಹಣ್ಣಿನಿಂದ ಮಾಡಲ್ಪಟ್ಟಿದೆ. ನೀವು ಪ್ರಯತ್ನಿಸಿದ್ದೀರಾ? ಎಂಬ ಶೀರ್ಷಿಕೆ ಕೊಟ್ಟು ಪೋಸ್ಟ್‌ ಮಾಡಿದ್ದಾರೆ.

ಕಮೆಂಟ್‌ ಮಾಡಿದ ಹಲವರ ಪೈಕಿ ಒಬ್ಬರು, ಕಿಯಾರಾ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ ಮತ್ತು ನಾವೆಲ್ಲರೂ ಅವರನ್ನು ಪ್ರೀತಿಸುತ್ತೇವೆ.

ಆದರೆ ಈ ಜಾಹೀರಾತನ್ನು ವರ್ಷಗಳಿಂದ ಆಳಿದ ಕತ್ರಿನಾ ಕೈಫ್ ಇಲ್ಲದೆ ನಾನು ಸ್ಲೈಸ್ ಅನ್ನು ಊಹಿಸಲು ಸಾಧ್ಯವಿಲ್ಲ.

ಸಿಎಸ್‌ಕೆಗಾಗಿ ಧೋನಿ ಹೇಗೋ, ಬಾರ್ಕಾಗೆ ಮೆಸ್ಸಿ ಹೇಗೋ, ಸ್ಲೈಸ್‌ಗೆ ಕತ್ರಿನಾ ಹಾಗೆಯೇ ಎಂದು ಕಮೆಂಟ್‌ ಮಾಡಿದ್ದಾರೆ.

Exit mobile version