ಫೋನ್ ಸ್ಟೋರೇಜ್‌ ತುಂಬದಂತೆ ಏನು ಮಾಡಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ

ಮೊಬೈಲ್ ಸ್ಟೋರೇಜ್ ಜಾಸ್ತಿ ಬಳಕೆಯಾಗದಂತೆ ಗೂಗಲ್ ಫೋಟೋಸ್ (phone storage via Google Photos) ನೆರವಾಗುತ್ತದೆ. ಗೂಗಲ್‌ ಫೋಟೋಸ್ ಮೂಲಕ ಫೋನ್‌ನ ಸಂಗ್ರಹವನ್ನು

ಬಳಸಿಕೊಳ್ಳುವ ಫೋಟೋ, ವಿಡಿಯೋಗಳನ್ನು ಕಡಿಮೆ (phone storage via Google Photos) ಮಾಡಬಹುದು ಅದು ಹೇಗೆ? ತಿಳಿಯೋಣ

ಫೋಟೋ ಕ್ಲಿಕ್ಕಿಸುವ ವಿಷಯದಲ್ಲಿ ಮೊಬೈಲ್ ಫೋನ್‌ಗಳನ್ನು (Mobile Phone) ಎಷ್ಟು ಬಳಸುತ್ತೇವೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಫೋಟೋ, ವಿಡಿಯೋಗಳುಗಳು ನಮ್ಮ ಫೋನ್‌

ಸ್ಟೋರೇಜನ್ನೂ ಅಷ್ಟೇ ಬೇಗದಲ್ಲಿ ತುಂಬುತ್ತದೆ. ಆದರೆ, ಇದು ಗೊತ್ತಾಗುವ ಮುನ್ನವೇ ನಮ್ಮ ಸ್ಟೋರೇಜ್ (Storage) ತುಂಬಿ ಆಗಿರುತ್ತದೆ ಹಾಗೂ ಫೋನ್ ನಿಧಾನವಾಗಿ ಕಾರ್ಯನಿರ್ವಹಿಸಲು

ಆರಂಭಿಸುತ್ತದೆ. ಸಾಕಷ್ಟು ಮಂದಿಗೆ ಈ ಅನುಭವ ಆಗಿರಲೂಬಹುದು. ಹಾಗದ್ರೆ ಇದರ ಚಿಂತೆ ಬಿಡಿ..

ಬ್ಯಾಕ್‌ಅಪ್‌ ಮಾಡುವುದು ಹೇಗೆ?
ಗೂಗಲ್ ಫೋಟೋಸ್ ಅಪ್ಲಿಕೇಷನ್ ತೆರೆಯಿರಿ ಹಾಗೂ ಮೇಲಿನ ಬಲ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್ (Profile) ಚಿತ್ರವನ್ನು ಟ್ಯಾಪ್ ಮಾಡಿ.


ಫೋಟೋಸ್‌ ಸೆಟ್ಟಿಂಗ್ಸ್‌’ ಹಾಗೂ `ಬ್ಯಾಕ್ ಅಪ್ ಆಂಡ್ ಸಿಂಕ್’ (Back Up and Sync) ಆಯ್ಕೆಯನ್ನು ಆರಿಸಬೇಕು. ತದನಂತರ ಬ್ಯಾಕ್ ಅಪ್ ಆಂಡ್ ಸಿಂಕ್’ ಆನ್ ಆಗಿದೆಯೇ ಎಂಬುದನ್ನು

ಒಮ್ಮೆ ಖಚಿತಪಡಿಸಿಕೊಳ್ಳಿ. ಇದು ನಿಮ್ಮ ಫೋಟೋಗಳನ್ನು ಕ್ಲೌಡ್‌ನಲ್ಲಿ (Cloud) ಸುರಕ್ಷಿತವಾಗಿ ಸಂಗ್ರಹಿಸಿರುತ್ತದೆ ಎಂದು ಖಚಿತಪಡಿಸುತ್ತದೆ ಹಾಗೂ ನಿಮ್ಮ ಫೋನ್‌ನಲ್ಲಿ ಜಾಗವನ್ನು ಮುಕ್ತಗೊಳಿಸುತ್ತದೆ.

ಫ್ರೀ ಅಪ್ ಸ್ಪೇಸ್‌’ ಟ್ಯಾಪ್ (Free Up Space) ಮಾಡಿ. ಆಗ ಗೂಗಲ್ ಫೋಟೋಸ್ ನಿಮ್ಮ ಫೋನ್‌ನಿಂದ ಸುರಕ್ಷಿತವಾಗಿ ಡಿಲೀಟ್ ಮಾಡಬಹುದಾದ ಫೋಟೋಗಳು ಮತ್ತು ವಿಡಿಯೋಗಳನ್ನು ಗುರುತಿಸುತ್ತದೆ

ನಂತರ ಅವುಗಳು ಈಗಾಗಲೇ ಕ್ಲೌಡ್‌ಗೆ ಬ್ಯಾಕಪ್ ಆಗಿವೆ ಎಂಬುದನ್ನು ನಿಮಗೆ ತೋರಿಸುತ್ತದೆ. ಫೋಟೋಗಳನ್ನು ಮತ್ತೊಮ್ಮೆ ಪರಿಶೀಲಿಸಿ ಹಾಗೂ ಅವುಗಳನ್ನು ನಿಮ್ಮ ಡಿವೈಜ್‌ನಿಂದ ತೆಗೆಯಲು

`ಫ್ರೀ ಅಪ್‌’ ಟ್ಯಾಪ್ ಮಾಡಿ. ಸಜೆಸ್ಟ್‌ ಡಿಲಿಟೇಷನ್’ ಟೂಲ್ (Suggest Deletion’ tool) ಬಳಸುವುದು


ಸಜೆಸ್ಟ್‌ ಡಿಲಿಟೇಷನ್' ವೈಶಿಷ್ಟ್ಯವು ಬ್ಲರ್ ಆದ, ಒಂದೇ ರೀತಿಯ ಅಥವಾ ಹಳೆಯದಾದ ಫೋಟೋಗಳನ್ನು ಗುರುತಿಸುತ್ತದೆ ಹಾಗೂ ಇದು ಅವುಗಳನ್ನು ಡಿಲೀಟ್ ಮಾಡಲು

ಮಾಡುವ ಆಯ್ಕೆಯನ್ನು ನಿಮಗೆ ನೀಡುತ್ತದೆ. ಫೋನ್‌ನಲ್ಲಿ ಜಾಗವನ್ನು ಬಳಸದೆ ಅವುಗಳನ್ನು ಕ್ಲೌಡ್‌ಗೆ ಸೇರಿಸಿ) ನಿಮ್ಮ ನೆನಪಿನ ಫೋಟೋಸ್ ಗಳನ್ನು ಈ ಆಯ್ಕೆಗೆ ಹೋಗಲು

ಮೊದಲು ಗೂಗಲ್ ಫೋಟೋಸ್ ಅಪ್ಲಿಕೇಷನ್‌ನಲ್ಲಿಲೈಬ್ರರಿ’ ಟ್ಯಾಬ್‌ಗೆ ಹೋಗಿ ಮತ್ತು ಯುಟಿಲಿಟೀಸ್' ಆಯ್ಕೆಯನ್ನು ಟ್ಯಾಪ್ ಮಾಡಿ.ಸಜೆಸ್ಟ್‌ ಡಿಲಿಟೇಷನ್’ ಆಯ್ಕೆ ಮಾಡಿ ಹಾಗೂ

ಫೋಟೋಗಳನ್ನು ಪುನರ್ ಪರಿಶೀಲಿಸಿ.ಸರಿ ಆಯ್ಕೆ ಕೊಟ್ಟ ನಂತರ ನೀವು ಅವುಗಳನ್ನು ಪ್ರತ್ಯೇಕವಾಗಿ ಡಿಲೀಟ್ (Delete) ಮಾಡಬಹುದು, ಅಥವಾ ಎಲ್ಲವನ್ನೂ ಆರ್ಕೈವ್‌ಗೆ ಸೇರಿಸಬಹುದು.

ವಿಡಿಯೋಗಳು ಗಮನಾರ್ಹ ಪ್ರಮಾಣದಲ್ಲಿ ಸ್ಟೋರೇಜ್ (Storage) ಸ್ಥಳವನ್ನು ಆಕ್ರಮಿಸಿಕೊಳ್ಳುತ್ತದೆ. ಹೀಗಾಗಿ, ಗೂಗಲ್ ಫೋಟೋಸ್‌ ಅಪ್ಲಿಕೇಷನ್‌ನಲ್ಲಿ ವಿಡಿಯೋಗಳನ್ನು ಟ್ಯಾಪ್ ಮಾಡುವ ಮೂಲಕ ಹಾಗೂ

ದೀರ್ಘವಾಗಿ ಹಿಡಿದಿಟ್ಟುಕೊಳ್ಳುವ ಮೂಲಕ ನಿಮ್ಮ ದೊಡ್ಡ ವಿಡಿಯೋಗಳನ್ನು ಕ್ಲೌಡ್‌ಗೆ ಆರ್ಕೈವ್ ನಲ್ಲಿ ಹಾಕಿ ಇಟ್ಟುಕೊಳ್ಳಬಹುದು ಮತ್ತು ನಿಮಗೆ ಬೇಕಾದಾಗ ನಿಮ್ಮ ಮೊಬೈಲ್ ಗೆ ಹಾಕಿಕೊಳ್ಳಬಹುದು.

ಗೂಗಲ್ ಫೋಟೋಸ್‌ನ ಶಕ್ತಿಶಾಲಿ ಸರ್ಚ್ (Search) ಕಾರ್ಯವು ನಿರ್ದಿಷ್ಟ ವ್ಯಕ್ತಿ, ಸ್ಥಳ ಮತ್ತು ಕಾರ್ಯಕ್ರಮಗಳಂತಹ ಫೋಟೋಗಳನ್ನು ತ್ವರಿತವಾಗಿ ಹುಡುಕಲು ಸಹಾಯ ಮಾಡುತ್ತದೆ. ಡೂಪ್ಲಿಕೇಟ್

ಫೋಟೋಗಳು ಅಥವಾ ಅನಗತ್ಯವಾದವುಗಳನ್ನು ಗುರುತಿಸಿ, ಡಿಲೀಟ್ ಮಾಡುವುದಕ್ಕೆ ಇದು ನೆರವಾಗುತ್ತದೆ.

ಇದಲ್ಲದೆ, ಗೂಗಲ್ ಫೋಟೋಸ್‌ ಆಟೋಮ್ಯಾಟಿಕ್ (Automatic) ಆಗಿ ವಿಷಯಾಧಾರಿತ `ಮೆಮೋರಿಸ್‌’ಗಳ ಸಂಗ್ರಹವನ್ನು ರಚಿಸುವುದಲ್ಲದೆ ಫೋಟೋಗಳು ಹಾಗೂ ವಿಡಿಯೋಗಳನ್ನು ಇದು ಒಟ್ಟುಗೂಡಿಸುತ್ತದೆ.

ಇದು ನಿಮಗೆ ಹಳೆಯ ಫೋಟೋ ವಿಡಿಯೋಗಳನ್ನು ಮರುಶೋಧಿಸಲು ಹಾಗೂ ಅವುಗಳನ್ನು ಇರಿಸಿಕೊಳ್ಳಬೇಕಾ ಅಥವಾ ಡಿಲೀಟ್ ಮಾಡಬೇಕಾ ಎಂಬುದನ್ನು ನಿರ್ಧರಿಸಲು ನಿಮಗೆ ಸಹಾಯ ಮಾಡುತ್ತದೆ.

Exit mobile version