ತಾಜ್‌ಮಹಲ್‌ ಅನ್ನು ಹೋಲುವ ಈ ಸುಂದರ ಸ್ಮಾರಕಗಳ ತಾಣಕ್ಕೆ ನೀವು ಒಮ್ಮೆ ಭೇಟಿ ನೀಡಿ

India : ತಾಜ್ ಮಹಲ್ (Places Replica Of Taj Mahal) ರೀತಿಯ ತರಹದ ಮತ್ತೊಂದು ಪ್ರತಿಕೃತಿ ಇರಲೇಬಾರದು ಎನ್ನುವ ಉದ್ದೇಶದಿಂದ ಮೊಘಲ್ ಚಕ್ರವರ್ತಿ ಷಹಜಹಾನ್ ,

ಈ ಅದ್ಭುತ ಸ್ಮಾರಕದ ನಿರ್ಮಾಣಕ್ಕೆ ಶ್ರಮಿಸಿದ ಕಾರ್ಮಿಕರ ಕೈಗಳನ್ನು (Places Replica Of Taj Mahal) ಕತ್ತರಿಸಿದ್ದು ನಮಗೆಲ್ಲಾ ತಿಳಿದೇ ಇದೆ.

ಹಾಗಾಗಿ ಈಗ ಕೂಡ ನೀವು ತಾಜ್ ಮಹಲ್ ರೀತಿಯ ಮತ್ತೊಂದು ಕಟ್ಟಡವನ್ನು ಜಗತ್ತಿನ ಯಾವ ಭಾಗದಲ್ಲಿಯೂ ಕಾಣಲು ಸಾಧ್ಯವಿಲ್ಲ. ಆದರೆ ತಾಜ್ ಮಹಲ್ ರೀತಿ ಇಲ್ಲದಿದ್ದರೂ, ಸ್ವಲ್ಪ ಮಟ್ಟಿಗೆ ತಾಜ್ ಅನ್ನು ಹೋಲುವ ಕೆಲವು ಸ್ಮಾರಕಗಳು ನಮ್ಮ ದೇಶದಲ್ಲಿವೆ.


ಬುಲಂದ್‌ ಶಹರ್ ನಗರದಲ್ಲಿರುವ ಮಿನಿ ತಾಜ್ ಮಹಲ್ : ತಾಜ್ ಮಹಲ್ ಅನ್ನು 1632 ರಲ್ಲಿ ಮೊಘಲ್ ಚಕ್ರವರ್ತಿಯಾಗಿದ್ದ ಷಹಜಹಾನ್ ತನ್ನ ಪ್ರೀತಿಯ ಪತ್ನಿ ಮುಮ್ತಾಜಳ ನೆನಪಿಗಾಗಿ ಕಟ್ಟಿದನು.

ಸ್ಮಾರಕದ ನಿರ್ಮಾಣವು 1653 ರಲ್ಲಿ ಪೂರ್ಣಗೊಂಡಿದ್ದು, ವಾಸ್ತುಶಿಲ್ಪಿಗಳಾಗಿದ್ದ ಅಬ್ದುಲ್-ಕರೀಮ್ ಮಾಮೂರ್ ಖಾನ್,

ಇದನ್ನೂ ಓದಿ : https://vijayatimes.com/death-threat-letter/

ಮಕ್ರಮಾತ್ ಖಾನ್ ಹಾಗೂ ಉಸ್ತಾದ್ ಅಹ್ಮದ್ ಲಾಹೌರಿ ಇವರ ಮೇಲ್ವಿಚಾರಣೆಯಲ್ಲಿ ತಾಜ್ ಮಹಲ್ ನಿರ್ಮಿಸಲ್ಪಟ್ಟಿತು. ಸುಮಾರು 20,000 ಕ್ಕೂ ಹೆಚ್ಚು ಕಾರ್ಮಿಕರ ಶ್ರಮದಲ್ಲಿ ತಯಾರಾದ ತಾಜ್ ಮಹಲ್ ನಿರ್ಮಾಣಕ್ಕೆ ಸರಿ ಸುಮಾರು 21 ವರ್ಷಗಳೇ ಬೇಕಾಯಿತು. ತನ್ನ ಪ್ರೀತಿಯ ಪತ್ನಿಯ ನೆನಪಿಗೋಸ್ಕರ ತಾಜ್ ಮಹಲ್ ನಿರ್ಮಿಸಲು ಷಹಜಹಾನ್ ಮಾತ್ರವಲ್ಲದೇ,

ಉತ್ತರ ಪ್ರದೇಶದ (UttarPradesh) ಬುಲಂದ್‌ಶಹರ್ ನಗರದ ನಿವೃತ್ತ ಪೋಸ್ಟ್ ಮಾಸ್ಟರ್ ಒಬ್ಬರು ಒಂದು ವಿಶಿಷ್ಟ ಸ್ಮಾರಕವನ್ನು ನಿರ್ಮಿಸಿದ್ದಾರೆ.

ಫೈಜುಲ್ ಹಸನ್ ಖಾದ್ರಿ ಎನ್ನುವ ಇವರು ತಮ್ಮ ಜೀವಿತಾವಧಿಯಲ್ಲಿ ಉಳಿಸಿದ್ದ ಹಣವನ್ನೆಲ್ಲಾ ತಮ್ಮ ಪ್ರೀತಿಯ ಪತ್ನಿಯ ನೆನಪಿಗಾಗಿ ತಾಜ್ ಮಹಲ್ ಮಾದರಿಯನ್ನು ನಿರ್ಮಿಸಲು ಖರ್ಚು ಮಾಡಿದ್ದಾರೆ.

ಇವರ ಈ ಶ್ರಮದ ಪ್ರತಿಫಲವಾಗಿಯೇ ಈ ಸ್ಮಾರಕವು ಮಿನಿ ತಾಜ್ ಮಹಲ್ ಎನ್ನುವ ಅಡ್ಡಹೆಸರನ್ನು ಪಡೆದು ಖ್ಯಾತವಾಗಿದೆ.


ಬೀಬಿ ಕಾ ಮಕ್ಬಾರಾ : ತಾಜ್‌ಮಹಲ್‌ ನ ಹೋಲಿಕೆಯನ್ನು ಹೊಂದಿರುವ ‘ಬೀಬಿ ಕಾ ಮಕ್ಬಾರಾ’ ಮಹಲ್ ಮೊಘಲ್ ಚಕ್ರವರ್ತಿ ಔರಂಗಜೇಬನ ಪತ್ನಿ ರಬಿಯಾ ಉಲ್ ದೌರಾನಿ ಅಥವಾ ದಿಲ್ರಾಸ್ ಬಾನು ಬೇಗಂ ಅವರ ಸುಂದರವಾದ ಸಮಾಧಿಯಾಗಿದ್ದು,

ಆಗ್ರಾದ ತಾಜ್ ಮಹಲ್ ಅನ್ನು ಪತ್ನಿಯ ಮೇಲಿನ ಪ್ರೀತಿಯ ಸಂಕೇತವಾಗಿ ನಿರ್ಮಿಸಲಾಗಿದ್ದರೆ, ಔರಂಗಾಬಾದ್‌ನ ಬೀಬಿ ಕಾ ಮಕ್ಬರಾವನ್ನು ತನ್ನ ತಾಯಿಯ ನೆನಪಿಗಾಗಿ ಔರಂಗಜೇಬನ ಮಗ ರಾಜಕುಮಾರ ಅಜಮ್ ಖಾನ್ ನಿರ್ಮಿಸಿದ್ದಾನೆ.

https://www.facebook.com/106753121055081/posts/699010778495976/?flite=scwspnss&mibextid=wDgIVwZBy2PExSHI


ಚೋಟಾ ಇಮಾಂಬರಾ : ಶಹಜಾದಿ ಕಾ ಮಕ್ಬರಾ ಎಂದೇ ಜನಪ್ರಿಯವಾಗಿರುವ ಚೋಟಾ ಇಮಾಂಬರಾ ಕೂಡ ಸಾಕಷ್ಟು ಜನಪ್ರಿಯ ಸ್ಮಾರಕವಾಗಿದ್ದು, ಬಹುಮಟ್ಟಿಗೆ ತಾಜ್ ಮಹಲ್ ಅನ್ನು ಹೋಲುತ್ತದೆ.

ಈ ಮಹಲ್ ನಲ್ಲಿ ಅವಧ್‌ನ ಮೂರನೆಯ ಚಕ್ರವರ್ತಿ ರಾಜ ಮೊಹಮ್ಮದ್ ಅಲಿ ಶಾ ಬಹದ್ದೂರ್ ರ ಪುತ್ರಿ ರಾಜಕುಮಾರಿ ಜಿನತ್ ಆಸಿಯಾಳ ಸಮಾಧಿಯ ಅವಶೇಷಗಳಿವೆ.
ಚೋಟಾ ಇಮಾಂಬರಾವು ಉತ್ತರ ಪ್ರದೇಶದ ಲಕ್ನೋದಲ್ಲಿರುವ ಅತ್ಯಂತ ಸುಂದರವಾದ ಹಾಗೂ ಆಕರ್ಷಕ ಕಟ್ಟಡಗಳಲ್ಲಿ ಒಂದಾಗಿದೆ.
Exit mobile version